
ಮಡಿಕೇರಿ ಜು.28 NEWS DESK : ಮತದಾರರ ಸಾಕ್ಷರತಾ ಸಂಘದ ವತಿಯಿಂದ ಮಕ್ಕಂದೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಆಡಳಿತ ಮಂಡಳಿಯ ಚುನಾವಣೆ ನಡೆಯಿತು. ಪರಿಷ್ಕೃತ ಮತದಾರರ ಪಟ್ಟಿ, ಮತದಾರರ ಗುರುತಿನ ಚೀಟಿ, ಮತಯಂತ್ರ, ಚುನಾವಣಾ ಅಧಿಕಾರಿಗಳ ನೇಮಕ ಮಾಡಲಾಗಿತ್ತು. ಇವುಗಳೆಲ್ಲವನ್ನೂ ಸಿದ್ಧ ಮಾಡಿಕೊಳ್ಳಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಮತಪೆಟ್ಟಿಗೆ, ಮತ ಚೀಟಿಗಳ ಬದಲು ಮೊಬೈಲ್ ನಲ್ಲಿ ಮತಯಂತ್ರಗಳನ್ನು ಬಳಸಿ ಮಕ್ಕಳು ಮತ ಚಲಾವಣೆ ಮಾಡಿದ್ದು ವಿಶೇಷವಾಗಿತ್ತು. ಒಂದು ಮೊಬೈಲ್ ನ್ನು ಇವಿಎಂ ಓಟಿಂಗ್ ಮೆಷಿನ್ ಬ್ಯಾಲೆಟ್ ಯೂನಿಟ್ ಆಗಿ ಮತ್ತೊಂದು ಮೊಬೈಲ್ ನ್ನು ಕಂಟ್ರೋಲ್ ಯುನಿಟ್ ಆಗಿ ಬಳಸಲಾಯಿತು. ಮತ ಎಣಿಕೆ ಓಟಿಂಗ್ ಮೆಷಿನ್ ನಲ್ಲಿ ನಡೆಯಿತು. ಮತ ಎಣಿಕೆಯ ನಂತರ ಶಾಲಾ ನಾಯಕರಾಗಿ ಅಕ್ಷಯ್ ಕುಮಾರ್ ಹಾಗೂ ಶಾಲಾ ನಾಯಕಿಯಾಗಿ ಜ್ಯೋತಿ ತಮ್ಮ ಆಡಳಿತ ಮಂಡಳಿಯ ಸಚಿವರನ್ನು ಆಯ್ಕೆ ಮಾಡಿದರು.
ಚುನಾವಣಾ ಆಯುಕ್ತರಾಗಿ ಶಾಲಾ ಮುಖ್ಯ ಶಿಕ್ಷಕರಾದ ಹರಿಣಾಕ್ಷಿ ಕಾರ್ಯ ನಿರ್ವಹಿಸಿದರು. ಸಂಚಾಲಕರಾಗಿ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಆರ್.ಗೀತಾ, ಪಿ ಆರ್ ಒ ಆಗಿ ಶಿಕ್ಷಕಿ ಲೀಲಾವತಿ, ವನಜಾಕ್ಷಿ, ಮವಜಾಕ್ಷಿ , ಪಿಒ ಆಗಿ ಪ್ರಮೀಳಾ ಕಾರ್ಯ ನಿರ್ವಹಿಸಿದರು.









