
ಗೋಣಿಕೊಪ್ಪ ಜು.30 NEWS DESK : ಗೋಣಿಕೊಪ್ಪ ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿ ಸಿ.ಕೆ.ಬೋಪಣ್ಣ ಪುನರಾಯ್ಕೆಯಾಗಿದ್ದಾರೆ. ವಾಹನ ಚಾಲಕರ ಸಂಘದ ಕಚೇರಿಯಲ್ಲಿ ನಡೆದ ಮಹಾಸಭೆಯಲ್ಲಿ ಸರ್ವ ಸದಸ್ಯರ ಒಮ್ಮತದ ತೀರ್ಮಾನದಂತೆ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘದ ಉಪಾಧ್ಯಕ್ಷರಾಗಿ ಶರತ್ ಕಾಂತ್, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣೇಗೌಡ, ಸಹ ಕಾರ್ಯದರ್ಶಿ ರೇಣುಕುಮಾರ್, ಕೋಶಾಧಿಕಾರಿ ವಿ.ಟಿ.ವೇಣು ಮತ್ತು ನಿರ್ದೇಶಕರುಗಳಾಗಿ ಅನಿಲ್, ಅಶೋಕ್, ಕೀರ್ತಿ, ಕೃಷ್ಣ ಶ್ರೀನಿವಾಸ್, ಸುರೇಶ್, ಅನೀಶ್ ಇವರುಗಳು ಆಯ್ಕೆಯಾಗಿದ್ದಾರೆ.









