
ವಿರಾಜಪೇಟೆ ಜು.30 NEWS DESK : ಕೇರಳದ ತಿರುವನಂತಪುರದ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ನಡೆದ ಸ್ಟೀಫನ್ ಜಾಕೋಬ್ ಕೋಶಿ ಅಂತಾರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಭಾರತೀಯ ಟೆಕ್ ಸಿಲ್ಲೋ ತಂಡವನ್ನು ಕೊಡಗಿನ ಹಿರಿಯ ಬಾಸ್ಕೆಟ್‌ಬಾಲ್ ಆಟಗಾರರು ಪ್ರತಿನಿಧಿಸಿ ಮೂರು ಚಿನ್ನದ ಪದಕಗಳನ್ನು ಪಡೆದು ಉನ್ನತ ಸಾಧನೆ ಮಾಡಿದ್ದಾರೆ. ಪಂದ್ಯಾವಳಿಯ 55 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಒಂದು ಚಿನ್ನದ ಪದಕ, 60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಒಂದು ಚಿನ್ನದ ಪದಕ ಹಾಗೂ 65 ವರ್ಷ ಮೇಲ್ಪಟ್ಟ ಆಟಗಾರರ ವಿಭಾಗದಲ್ಲಿ ಒಂದು ಚಿನ್ನದ ಪದಕಗಳನ್ನು ಪಡೆಯುವುದರೊಂದಿಗೆ ಜಿಲ್ಲಾ ತಂಡವು ಸಾಧನೆಯನ್ನು ಮಾಡಿದೆ. ಪಂದ್ಯಾವಳಿಯಲ್ಲಿ ಕೊಡಗಿನ ಹಿರಿಯ ಅಂತಾರಾಷ್ಟ್ರೀಯ ಆಟಗಾರ್ತಿ ಡಾ. ಮಂಡೇಪಂಡ ಪುಷ್ಪ ಕುಟ್ಟಣ್ಣ, ಮತ್ತೋರ್ವ ಹಿರಿಯ ಅಂತಾರಾಷ್ಟ್ರೀಯ ಆಟಗಾರ್ತಿ ಕಾಡ್ಯಮಾಡ ದೇಚಮ್ಮ ಪೂಣಚ್ಚ, ಪಳಂಗಂಡ ವಾಣಿ ಚೆಂಗಪ್ಪ, ಕೊಲ್ಲಿಮಾಡ ರಶ್ಮಿ ಅಯ್ಯಪ್ಪ, ಬಲ್ಯಮೀದೇರೀರ ಆಶಾ ಶಂಕರ್, ತಾತಂಡ ಜ್ಯೋತಿ ಪ್ರಕಾಶ್, ಐನಂಡ ಜಮುನಾ ಚಂಗಪ್ಪ, ಕೋಣೆರೀರ ಶಿಲ್ಪಾ ಪೆಮ್ಮಯ್ಯ, ಚೋವಂಡ ಜಮುನಾ ಸುರೇಶ್, ತೀತರಮಾಡ ಕಾವೇರಿ ಅಚ್ಚಯ್ಯ, ಬಾಕಿಲನ ವನಿತಾ ವಿಜಯಕುಮಾರ್, ಕೋದೆಂಗಡ ರೇಷ್ಮಾ ನಂಜಪ್ಪ, ಕಾಂಡೇರ ಜಲಜ ಗೋಪಾಲ್, ಮಾಳೇಟರ ರಶ್ಮಿ ಉತ್ತಪ್ಪ, ಕೊಂಪುಳಿರ ಪ್ರೀತ್ ಪಳಂಗಪ್ಪ, ಸರಿತಾ ಸುಕುಮಾರನ್ ಪಾಲ್ಗೊಂಡಿದ್ದರು.









