Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಸ್ತನ್ಯಪಾನ ಮಗುವಿಗೆ ಜೀವದಾನ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ರೋಗ ಮುಕ್ತ

ಸ್ತನ್ಯಪಾನ ಮಗುವಿಗೆ ಜೀವದಾನ

ಆಗಷ್ಟ್ 1, 20254 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಆ.1 NEWS DESK : ತಾಯಿಯ ಎದೆಹಾಲು ಪ್ರಕೃತಿದತ್ತವಾದ ದೇವರ ಕೊಡುಗೆಯಾಗಿದ್ದು ಎದೆಹಾಲಿನಿಂದ ಮಗುವಿನ ಆರೋಗ್ಯ ಮತ್ತು ಬೆಳವಣಿಗೆ ಜೊತೆಗೆ ಭವಿಷ್ಯದ ವ್ಯಕ್ತಿಯಾಗಿ ರೂಪಿಸುವ ಚೈತನ್ಯ ಶಕ್ತಿ ಆಡಗಿದ್ದು ಮಗು ಜನಿಸಿದ ಆರು ತಿಂಗಳ ಕಾಲ ವಿಶೇಷ ಎದೆ ಹಾಲುಣಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ 1991ರಲ್ಲಿ ಡಬ್ಲ್ಯುಎಚ್‍ಒ ಮತ್ತು ಯುನೆಸೆಫ್ ಮತ್ತು ಡಬ್ಲ್ಯುಬಿಡ್ಲ್ಯು ಸಹಯೋಗದಲ್ಲಿ ಆರಂಭಿಸಲಾಯಿತು. ಪ್ರತಿ ವರ್ಷ ಆಗಸ್ಟ್ 1 ರಿಂದ 7 ರವರೆಗೆ ಸಪ್ತಾಹದೊಂದಿಗೆ ಈ ಕುರಿತು ತಾಯಾಂದಿರಿಗೆ ಹೆಚ್ಚಿನ ಅರಿವು ಮೂಡಿಸುವ ಜಾಗೃತಿ ಕಾರ್ಯ 120 ಕ್ಕೂ ಹೆಚ್ಚು ದೇಶಗಳಲ್ಲಿ ನಡೆಸಲಾಗುತ್ತಿದೆ. ಇತ್ತೀಚಿನ ಅಧುನಿಕ ಯುಗದಲ್ಲಿ ಮಹಿಳೆಯರಲ್ಲಿ ತಪ್ಪು ಕಲ್ಪನೆಗಳಿಂದ, ಉದ್ಯೋಗಸ್ಥ ಮಹಿಳೆಯರಿಗೆ ಸಮಯದ ಅಭಾವದಿಂದಲೋ ಅಥವಾ ಯುವತಿಯರ ಎದೆಯ ಚೌಕಟ್ಟು ಅಥವಾ ಸೌಂದರ್ಯ ಕೆಡುತ್ತದೆಂಬ ತಪ್ಪು ತಿಳುವಳಿಕೆಯಿಂದ ಆದಷ್ಟು ಬೇಗ ಮಗುವಿಗೆ ಎದೆ ಹಾಲು ಬಿಡಿಸಿ ಬಾಟಲಿ ಹಾಲನ್ನು ನೀಡಲು ಮುಂದಾಗುತ್ತಿರುವುದು ವಿಷದಾನಿಯ. ಜೀವನ ಮಟ್ಟ ಕಡಿಮೆ ಇರುವ, ಶಿಕ್ಷಣ ಮಟ್ಟ ಕಡಿಮೆ ಇರುವುದು, ಎದೆಹಾಲು ಕೊಡುವ ಬಗ್ಗೆ ಶುಚಿತ್ವಕ್ಕೆ ಗಮನಹರಿಸದೆ ಇರುವ ಕುಟುಂಬಗಳಲ್ಲಿ ಮತ್ತು ಮೂಢನಂಬಿಕೆಗಳ ಕಾರಣದಿಂದ ಮಗುವು ಬೇಗ ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿರುತ್ತದೆ. “ಈ ಬಾರಿಯ ಘೋಷವಾಕ್ಯ;-ತಾಯಿಯ ಹಾಲು ನೀಡುವುದರಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ” ಎಂಬುವುದಾಗಿದ್ದು ಪ್ರತಿಯೊಂದು ಮಗುವಿಗೂ ಎದೆಹಾಲು ನೀಡುವ ಪ್ರಜಾವಂತಿಕೆ ತಾಯಂದಿರಲ್ಲಿ ಬರಬೇಕಾಗಿದೆ. ಪ್ರತಿ ಗರ್ಭಿಣಿರಿಗೆ ಕಿವಿಮಾತು ಮಗು ಹುಟ್ಟಿದ ತಕ್ಷಣವೇ ಎದೆಹಾಲನ್ನು ಕುಡಿಸುವುದರಿಂದ ಗಿಣ್ಣುಹಾಲಿನಲ್ಲಿ ಹಳದಿ ಬಣ್ಣದ ಕೊಲಸ್ಟ್ರಮ್ ಎಂಬ ಆಂಶವಿದ್ದು ಪ್ರತಿಸಲ ಮಗುವಿಗೆ ಶಕ್ತಿ ನೀಡುವ ಜೋತೆಗೆ ಬಾಯಿತುಂಬಾ ಉಪಕಾರಕವಾದ ಬ್ಯಾಕ್ಟೀರಿಯಾಗಳನ್ನು ಕೂಡ ಮಗುವಿಗೆ ಕೊಡುಗೆಯಾಗಿ ನೀಡುತ್ತದೆ. ಅಷ್ಟೇ ಅಲ್ಲ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಾಗಲು ಮತ್ತು ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಕ್ಯಾಲ್ಸಿಯಂ, ವಿಟಮಿನ್ ಎ, ಕೊಬ್ಬು, ಸಕ್ಕರೆ, ನೀರು, ಮತ್ತು ಪ್ರೋಟೀನ್ ಸಮತೋಲನ ಹೊಂದಲು ಕಾರಣವಾಗುತ್ತದೆ. ಎದೆಹಾಲು ಹಾರ್ಮೋನು, ಬೆಳವಣಿಗೆಯ ಅಂಶಗಳು ಮತ್ತು ಪ್ರತಿರಕ್ಷಾ ವಸ್ತುಗಳನ್ನು ಶಿಶುಗಳಿಗೆ ಉಸಿರಾಟದ, ಕಿವಿ ಮತ್ತು ಮೂತ್ರದ ಸೋಂಕು, ಅತಿಸಾರ, ಮಲಬದ್ದತೆ ಮತ್ತು ಜಠರಗರುಳಿನ ಸಮಸ್ಯೆಗಳು ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ರಕ್ಷಿಸಲು ಸ್ತನ್ಯಪಾನವು ಜೀವರಾಸಾಯನಿಕ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ. ಎದೆಹಾಲು ಕುಡಿಯುವುದರಿಂದ ಮಗುವಿಗೆ ರೋಗನಿರೋಧಕ ಶಕ್ತಿ ವೃದ್ದಿಸುತ್ತದೆ, ಮಗುವಿನ ಬಾಯಾರಿಕೆ ತಣಿಯುತ್ತದೆ, ಮಗುವಿನ ಮೆದುಳು, ಕಣ್ಣು ಮತ್ತು ಶರೀರದ ಉತ್ತಮ ಬೆಳವಣಿಗೆಗೆ ತಾಯಿ ಹಾಲು ಉತ್ತಮವಾಗಿದೆ. ಎದೆಹಾಲಿನಲ್ಲಿ ಪೋಷಕಾಂಶಗಳು ಸಮೃದ್ದವಾಗಿದ್ದು ಮಗುವಿನ ಬೆಳವಣಿಗೆಗೆ ಮತ್ತು ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಗುವಿನ ಶರೀರದ ತೂಕವನ್ನು ಸಮತೋಲನದಲ್ಲಿಡಲು ಮತ್ತು ಮಗುವಿನ ದವಡೆ ಬೆಳವಣಿಗೆಗೆ ತಾಯಿಹಾಲು ಉತ್ತಮ. ಹಾಗೂ ಮೊಲೆಹಾಲು ನೀಡವುದರಿಂದ ತಾಯಿ ಮತ್ತು ಮಗುವಿನ ಸಂಬಂದ ಇನ್ನಷ್ಟು ಉತ್ತಮವಾಗಿರುತ್ತದೆ. ಎದೆಹಾಲುಣಿಸುವುದರಿಂದ ಮಗುವಿಗೆ ಮಾತ್ರವಲ್ಲ, ತಾಯಿಗೂ ಹಲವು ಪ್ರಯೋಜನಗಳಿವೆ, ಎದೆಹಾಲು ಪೌಷ್ಟಿಕ ಆಹಾರವಷ್ಟೇ ಅಲ್ಲ ಅದು ತಾಯಿ ಮತ್ತು ಮಗುವಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
ತಾಯಿ ಮಗುವಿನ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ, ಇದರಿಂದ ಭಾವನಾತ್ಮಕವಾಗಿ ಮಗುವಿನ ಮೇಲಿನ ವ್ಯಾಮೋಹ ಹೆಚ್ಚುತ್ತದೆ. ಇಬ್ಬರ ನಡುವೆ ಉತ್ತಮ ಭಾಂದವ್ಯ ಮತ್ತು ಪ್ರೀತಿ ಬೆಳೆಯುತ್ತದೆ. ತಾಯಿಗೆ ಪ್ರಸವದ ನಂತರದ ರಕ್ತ ಸ್ರಾವದಿಂದಾಗುವ ತೊಂದರೆ ಕಡಿಮೆಯಾಗುತ್ತದೆ ಮತ್ತು ಋತುಚಕ್ರವು ನಿಧನವಾಗಿ ಆಗುತ್ತದೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮತ್ತು ಧನಾತ್ಮಕ ಭಾವನೆಗಳನ್ನು ಉತ್ತೇಜಿಸುತ್ತದೆ. ಗರ್ಭಧಾರಣೆಯ ಅವಧಿಯಲ್ಲಿ ತೂಕ ಹೆಚ್ಚಾಗಿದ್ದ ಮಹಿಳೆಯು ಮಗುವಿಗೆ ಹಾಲುಉಣಿಸುವುದರಿಂದ ಸಾಮಾನ್ಯ ಸ್ಥಿತಿಗೆ ಬರಲು ಸಹಾಯವಾಗುತ್ತದೆ. ಮಾನಸಿಕ ನೆಮ್ಮದಿ ಸಿಗಲು ಸಾಕಷ್ಟು ಸಹಾಯ ಮಾಡುತ್ತದೆ ಹಾಗೂ ಒಂದು ಮಗುವಿಗೆ ಅಂತರ ಕಾಯ್ದುಕೊಂಡಂತಾಗಲು ಸಹಕಾರಿಯಾಗುತ್ತದೆ. ಮಗುವಿನ ಮೊದಲ ಆರು ತಿಂಗಳ ಕಾಲ ಕೇವಲ ತಾಯಾಂದಿರು ಎದೆಹಾಲನ್ನಷ್ಟೇ ನೀಡುವುದು ಒಳ್ಳೆಯದು. ಇದರಿಂದ ಎದೆಹಾಲಿನ ಸಂಪೂರ್ಣ ಲಾಭಗಳನ್ನು ಪಡೆಯಲು ಮಗುವು ಸಂಪೂರ್ಣ ವಿಕಾಸ ಹೊಂದಲು ಮಗುವನ್ನು ನ್ಯೂಮೋನೀಯ, ಅತಿಸಾರಬೇದಿ, ಅಪೌಷ್ಟಿಕತೆ ಸಮಸ್ಯೆಯಿಂದ ಮಗುವನ್ನು ರಕ್ಷಿಸುತ್ತದೆ. ಅದನ್ನು ಜೀರ್ಣಿಸುವುದು ಸುಲಭ. ಇದರಿಂದ ಮಲಬದ್ದತೆಯುಂಟಾಗುವುದಿಲ್ಲ. ಅಲ್ಲದೆ ಮಗುವನ್ನು ವಾಂತಿಭೇಧಿಯಿಂದ ರಕ್ಷಿಸುತ್ತದೆ. ಮಹಿಳೆಯರಲ್ಲಿನ ಸ್ತನಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್‍ನ್ನು ಸುಲಭವಾಗಿ ತಡೆಗಟ್ಟಬಹುದು. ಎದೆ ಹಾಲು ನೈಸರ್ಗಿಕವಾಗಿ ಸಿಗುವುದರಿಂದ ಯಾವುದೇ ರೀತಿಯ ಹಾಲಿಗಾಗಿ ದುಂದು ವೆಚ್ಚಮಾಡಬೇಕಾಗಿಲ್ಲ.
ಅತಿಸಾರ ಮತ್ತು ನ್ಯೂಮೊನಿಯಾದಂತಹ ರೋಗಗಳಲ್ಲಿ ಎಳೆಯ ಕಂದಮ್ಮಗಳು ಅತ್ಯಂತ ಅಪಾಯಕ್ಕೊಳಪಡುತ್ತಾರೆ. ಇದರಿಂದ ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣ ಕಡಿಮೆಯಾಗುವುದು ಕೂಡ. ನವಜಾತ ಶಿಶುವಿನ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ಸ್ತನ್ಯಪಾನದ ರಕ್ಷಣೆ, ಪ್ರೋತ್ಸಾಹ ಮತ್ತು ಬೆಂಬಲದ ಅಗತ್ಯವನ್ನು ಎಲ್ಲರೂ ಅರಿಯಬೇಕಾಗಿದೆ. ಹಾಲುಣಿಸುವ ಕ್ರಮ :: ಹುಟ್ಟದ ಮಕ್ಕಳಿಗೆ ತಿಂಗಳವರೆಗೆ ದಿನಕ್ಕೆ ಕನಿಷ್ಟ 8 ರಿಂದ 12 ಭಾರಿ ಹಾಲುಣಿಸಬೇಕು ಮತ್ತು ಮಗು ಪ್ರತಿ ಬಾರಿ ಅತ್ತಗಲು ಹಾಲು ಕುಡಿಸಬೇಕು. ಆರೋಗ್ಯವಂತ ಮಗುವಿಗೆ 90 ನಿಮಿಷಕ್ಕೊಂದು ಬಾರಿ ಹಾಲುಣಿಸಬೇಕು. ಮೊಲೆಹಾಲು ಬೇಗ ಜೀರ್ಣವಾಗುವ ಕಾರಣ ಮಗುವಿಗೆ ಬೇಗ ಹಸಿವಾಗುವುದರೊಂದಿಗೆ ಗಂಟಲು ಒಣಗುವ ಸಾದ್ಯತೆ ಇದ್ದು ಆಗಾಗ ಹಾಲು ಕುಡಿಸುತ್ತಿರಬೇಕು. ತಾಯಿಗೆ ಮೊದಲು ಮೊಲೆಯುಣಿಸುವ ವಿಧಾನ ಸರಿಯಾಗಿ ತಿಳಿಯದೆ ಮೊಲೆತೊಟ್ಟು ಒಡೆದು ರಕ್ತ ಬರಬಹುದು ಹಾಲುಣಿಸುವಲ್ಲಿ ಕಷ್ಟಪಡಬಹುದು ಮತ್ತು ಎದೆಭಾಗ ಎದೆತೊಟ್ಟು ಶುಚಿಗೊಳಿಸುವುದು ತಿಳಿದಿರಬೇಕಾಗುತ್ತದೆ. ತೆರೆ ಮರೆಯಲ್ಲಿ ಮಗುವಿಗೆ ಹಾಲುಣಿಸಿದರೆ ಎದೆಹಾಲು ನಿರಾಳವಾಗಿ ಹೆಚ್ಚಾಗುತ್ತದೆ. ತಾಯಿ ತನ್ನ ಮಗುವಿಗೆ ಹಾಲುಣಿಸುವಾಗ ಯಾವುದೇ ಚಿಂತೆ, ಯೋಚನೆಗಳಿರಬಾರದು ಆಗ ಹಾಲು ವೃದ್ದಿಸಿ ಮಗುವಿಗೆ ಸಾಕಷ್ಟು ದೊರೆಯುತ್ತದೆ. ಮತ್ತು ಮಗುವಿಗೆ ಹಾಲುಣಿಸುವ ಕ್ರಮ ಮತ್ತು ಕೂರುವ ಬಗ್ಗೆ ತಿಳಿದಿರಬೇಕು. ಎದೆ ಹಾಲು ನೀಡುವುದರಿಂದ ಕಾಯಿಲೆ ಮಾತ್ರವಲ್ಲದೆ ಶಿಶು ಮರಣವನ್ನು ತಪ್ಪಿಸಬಹುದು. ಈ ಸಮಯದಲ್ಲಿ ತಮ್ಮಲ್ಲೇ ಬೆಳೆಯುವ ದವಸಧಾನ್ಯಗಳು, ಹಸಿರು ಸೋಪ್ಪು, ತರಕಾರಿಗಳು ಮತ್ತು ಕಾಯಿಪಲ್ಯಗಳನ್ನು ತಾಯಾರಿಸಿ ಸೇವಿಸುವ ಶಿಕ್ಷಣ ತಾಯಾಂದಿರಿಗೆ ತಿಳಿದಿರಬೇಕು. ಸಾಕಷ್ಟು ಪೌಷ್ಟಿಕ ಆಹಾರ ಮತ್ತು ಸಮತೋಲನ ಆಹಾರ ಹೆಚ್ಚಾಗಿ ಬಳಸಬೇಕು. ಮಗುವಿಗೆ 6 ತಿಂಗಳು ಕಡ್ಡಾಯ :: ಮಗುವಿಗೆ ತಾಯಿ ಹಾಲಿಗಿಂತ ಸೂಪರ್ ಫುಡ್ ಮತ್ತೊಂದಿಲ್ಲ ಆದ್ದರಿಂದ ಮೊದಲ 6 ತಿಂಗಳು ಕಡ್ಡಾಯವಾಗಿ ಎದೆಹಾಲು ನೀಡಬೇಕು 6 ತಿಂಗಳ ನಂತರ 2 ವರ್ಷದವರೆಗೆ ಎದೆಹಾಲು ಮುಂದುವರೆಸುತ್ತಾ ಘನ ಆಹಾರ ನೀಡಲು ಆರಂಭಿಸಬೇಕು. 2 ವರ್ಷದ ನಂತರವೂ ಎದೆಹಾಲು ನೀಡಲು ಮುಂದುವರೆಸಿದರೆ ಮಗುವಿಗೆ ಅನೇಕ ಪ್ರಯೋಜನಗಳು ಸಿಗಲಿವೆ. ಸ್ತನ್ಯಪಾನವು ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಅಪೌಷ್ಟಿಕತೆ, ಸಾಂಕ್ರಾಮಿಕ ರೋಗಗಳು ಮತ್ತು ಸಾವಿನಿಂದ ಶಿಶುಗಳನ್ನು ರಕ್ಷಿಸುತ್ತದೆ ಮತ್ತು ನಂತರದ ಜೀವನದಲ್ಲಿ ಸ್ಥೂಲಕಾಯತೆ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೂ ಜಾಗತಿಕವಾಗಿ ಸಾಕಷ್ಟು ಪೋಷಕರ ರಜೆ ಮತ್ತು ಆರೋಗ್ಯ ವ್ಯವಸ್ಥೆಗಳಲ್ಲಿ ಬೆಂಬಲದ ಕೊರತೆ ಹಾಗೂ ಫಾರ್ಮುಲಾ ಹಾಲಿನ ಕಂಪನಿಗಳ ಮಾರುಕಟ್ಟೆ ಪ್ರಭಾವ ಸೇರಿದಂತೆ ಅನೇಕ ಅಡೆತಡೆಗಳನ್ನು ಎದುರಿಸಬೇಕಾದ ಅನಿವಾರ್ಯದ ಅರಿವಿನ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಒಳಗೊಂಡ ಸ್ತನ್ಯಪಾನ ಮತ್ತು ಚಿಕ್ಕ ಮಕ್ಕಳ ಆಹಾರ ಪದ್ಧ್ದತಿಗಳನ್ನು ಉತ್ತೇಜಿಸುವ ಕೇಂದ್ರೀಕೃತ ಒಮ್ಮತದ ಚಟುವಟಿಕೆ ಕೈಗೊಳ್ಳಲಾಗಿದೆ.
ಮಗುವಿಗೆ ಜನ್ಮನೀಡಿದ ತಾಯಿಯೇ ಧನ್ಯ ಇಂತಹ ಅಪರೂಪದ ಸಮಯವನ್ನು ವ್ಯರ್ಥಮಾಡದೇ ನಿಮ್ಮ ಆರೋಗ್ಯ ಮತ್ತು ಮಗುವಿನ ಆರೋಗ್ಯಕ್ಕೆ ಅಡಿಪಾಯ ಹಾಕಬೇಕೆನ್ನು ಮಹಾದಾಸೆಯಿಂದ ಮತ್ತು ಮಗುವಿನ ಉಳಿವಿಕೆಗೆ ಮತ್ತು ಆರೈಕೆಗಾಗಿ ಸ್ತನ್ಯಪಾನದ ಮಹತ್ವ ಸಾರುವ ಈ ಲೇಖನ ಪೂರಕವಾದರೆ ನಮ್ಮ ಶ್ರಮ ಸಾರ್ಥಕವಾದಂತೆ ಎಂದು ಮಡಿಕೇರಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕರಾದ ಜಿ.ವಿ.ಶ್ರೀನಾಥ್, ಗಾವಡಗೆರೆ ಅವರು ತಿಳಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿ ದಸರಾ ದೀಪಾಲಂಕಾರ : ಅಲಂಕಾರ ಸಮಿತಿಗೆ ಪೂರ್ಣ ಜವಾಬ್ದಾರಿ ನೀಡಿಲ್ಲ : ಮುನೀರ್ ಮಾಚಾರ್ ಸ್ಪಷ್ಟನೆ : ಮುಂದಿನ ದಸರಾ ಟೆಂಡರ್ ಪ್ರಕ್ರಿಯೆಯಲ್ಲಿ ಎಲ್ಲಾ ಸಮಿತಿಗಳ ಅಭಿಪ್ರಾಯ ಪಡೆಯಲು ಒತ್ತಾಯ

ಅಕ್ಟೋಬರ್ 15, 2026

ರಜನಿ ರೈ ಅವರಿಗೆ ಡಾಕ್ಟರೇಟ್ ಪದವಿ

ಅಕ್ಟೋಬರ್ 14, 2026

ಬಾಳೆಲೆಯಲ್ಲಿ ಬಾಂಗ್ಲಾದೇಶದ ನಾಲ್ವರು ಅಕ್ರಮ ವಲಸಿಗರು ಪತ್ತೆ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮಾಹಿತಿ

ಅಕ್ಟೋಬರ್ 14, 2026

ರಜನಿ ರೈ ಅವರಿಗೆ ಡಾಕ್ಟರೇಟ್ ಪದವಿ

ಅಕ್ಟೋಬರ್ 14, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಪುತ್ತೂರು, NEWS DESK ಅ. 14: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, ಕೊಡಗಿನ ರಜನಿ ಬಾಲಕೃಷ್ಣ ರೈ…

ಬಾಳೆಲೆಯಲ್ಲಿ ಬಾಂಗ್ಲಾದೇಶದ ನಾಲ್ವರು ಅಕ್ರಮ ವಲಸಿಗರು ಪತ್ತೆ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮಾಹಿತಿ

ಅಕ್ಟೋಬರ್ 14, 2026

ಮಡಿಕೇರಿಯಲ್ಲಿ ಅ.16 ಮತ್ತು 17ರಂದು ಸೂರ್ಯ ಘರ್ ಯೋಜನೆಯ ವಿಶೇಷ ಅಭಿಯಾನ

ಅಕ್ಟೋಬರ್ 14, 2026

ಬಾಳೆಲೆಯಲ್ಲಿ ನಾಲ್ವರು ಬಾಂಗ್ಲಾದೇಶಿ ವಲಸಿಗರು ಪತ್ತೆ; ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಹಿಂದೂ ಜಾಗರಣಾ ವೇದಿಕೆ ಆಗ್ರಹ

ಅಕ್ಟೋಬರ್ 14, 2026

ಮಡಿಕೇರಿ : ಅ.15 ರಂದು ವಿದ್ಯುತ್ ವ್ಯತ್ಯಯ

ಅಕ್ಟೋಬರ್ 14, 2026

ಮಡಿಕೇರಿಯಲ್ಲಿ ಕಾಫಿ ದಸರಾ : ಕಾಫಿ ಕೃಷಿಗೆ ಹೆಚ್ಚಿನ ಉತ್ತೇಜನ : ಶಾಸಕ ಡಾ.ಮಂತರ್ ಗೌಡ

ಅಕ್ಟೋಬರ್ 14, 2026

ಕುಶಾಲನಗರದ ಬಸವೇಶ್ವರ ಬಡಾವಣೆಯಲ್ಲಿ ನವರಾತ್ರಿ ಹಬ್ಬದ ಸಂಭ್ರಮ

ಅಕ್ಟೋಬರ್ 14, 2026

ಶಾಸಕ ಎ.ಎಸ್.ಪೊನ್ನಣ್ಣ ಅವರ ವಿಶೇಷ ಕಾಳಜಿ : ದಬ್ಬಡ್ಕದಲ್ಲಿ ವಿದ್ಯುತ್ ವಂಚಿತ ಮನೆಗಳಿಗೆ ಸೌರ ವಿದ್ಯುತ್ ಅಳವಡಿಕೆ ಆರಂಭ

ಅಕ್ಟೋಬರ್ 14, 2026

ಭಾರತದ ಆರ್ಥಿಕತೆಯಲ್ಲಿ ಬ್ಯಾಂಕ್ ಹಾಗೂ ವಿಮೆ ಪ್ರಮುಖ ಪಾತ್ರ ವಹಿಸುತ್ತವೆ: ಡಾ. ಕೆ.ಸಿ. ದಯಾನಂದ

ಅಕ್ಟೋಬರ್ 14, 2026

ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ವಿದ್ಯಾರ್ಥಿನಿಯರಿಗೆ ಸನ್ಮಾನ

ಅಕ್ಟೋಬರ್ 14, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.