
ಮಡಿಕೇರಿ ಆ.2 NEWS DESK : ನ್ಯಾಷನಲ್ ಕಾನ್ಫರೆನ್ಸ್ ಆಫ್ ಸ್ಟೇಟ್ ಲೆಜಿಸ್ಲೇಟರ್ಸ್ (ಎನ್‍ಸಿಎಸ್‍ಎಲ್) ಮತ್ತು ರಾಷ್ಟ್ರೀಯ ಲೆಜಿಸ್ಲೇಟರ್ಸ್ ಕಾನ್ಫರೆನ್ಸ್ ಭಾರತ್ (ಎನ್‍ಎಲ್‍ಸಿ) ವತಿಯಿಂದ ಅಮೇರಿಕಾದ ಬೋಸ್ಟನ್‍ನಲ್ಲಿ ಆ.4 ರಿಂದ 6ರ ವರೆಗೆ ವಿವಿಧ ರಾಜ್ಯ ಶಾಸಕಾಂಗ ಸದಸ್ಯರ ರಾಷ್ಟ್ರೀಯ ಶೃಂಗಸಭೆ ಏರ್ಪಟ್ಟಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ ಶಾಸಕಾಂಗ ನಾಯಕರು, ಸಿಬ್ಬಂದಿ ಪರಿಣಿತರು ಹಾಗೂ ಪಾಲಿಸಿ ಮೇಕರ್ಸ್ ಪರಿಣಿತರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಕೊಡಗಿನ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಪಿ.ಸುಜಾ ಕುಶಾಲಪ್ಪ ಅವರು ಭಾಗವಹಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ಸುಜಾ ಕುಶಾಲಪ್ಪ ಸೇರಿದಂತೆ ಕೆಲವು ಸದಸ್ಯರು ಪಾಲ್ಗೊಳ್ಳಲಿದ್ದಾರೆ.








