Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *2030ಕ್ಕೆ ಭಾರತದಲ್ಲಿ ಮಲೇರಿಯಾ ಮುಕ್ತ, ಕೊಡಗು ಜಿಲ್ಲೆಗೆ ಕೇಂದ್ರ ತನಿಖಾ ತಂಡ ಭೇಟಿ*
  • *ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟಬಹುದು : ಮಹೇಶ್*
  • *ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ : ವಿಚಾರಣೆಗೆ ಬಾಕಿ ಇರುವ ಮತದಾರರ ಮನೆ ಮನೆಗೆ ಬಿಎಲ್‍ಒಗಳು ಭೇಟಿ : ಜಿಲ್ಲಾಧಿಕಾರಿ*
  • *ಸಮಾಜಮುಖಿ ಸೇವೆ ಪರಿಗಣಿಸಿ ಕೇಳೇಟಿರ ದೀಪು ದೇವಯ್ಯ ಸನ್ಮಾನ*
  • *ನಾಪೋಕ್ಲು: ‘ಕ್ಲೀನ್ ಅಪ್’ ವತಿಯಿಂದ ಯಶಸ್ವಿ ಸ್ವಚ್ಛತಾ ಅಭಿಯಾನ*
  • *ಅಕ್ಟೋಬರ್ 20ರಂದು ವಿರಾಜಪೇಟೆಯಲ್ಲಿ 19ನೇ ವರ್ಷದ ಅದ್ದೂರಿ ಆಯುಧಪೂಜೆ ಹಾಗೂ ಸಂಗೀತ ರಸಮಂಜರಿ*
  • *ಅ.1ರಂದು ಸಿದ್ದಾಪುರದಲ್ಲಿ ಸಿಎನ್‌ಸಿಯಿಂದ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ*
  • *ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ*
  • *ಮಹಿಳಾ ಸಬಲೀಕರಣಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮಗಳು ಪೂರಕ: ಆನಂದ್ ಸುವರ್ಣ*
  • *ಮಡಿಕೇರಿಯಲ್ಲಿ ಕಾಫಿ ದಸರಾ: ಮಳಿಗೆ ತೆರೆಯಲು ಅವಕಾಶ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು» ನೆಲ್ಲಿಹುದಿಕೇರಿಯಲ್ಲಿ ಡಿವೈಎಫ್ ಐ ಜಿಲ್ಲಾ ಸಮಾವೇಶ : ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರ ವಿಫಲ : ಬಸವರಾಜ್ ಪೂಜಾರ್ ಅಸಮಾಧಾನ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

 ನೆಲ್ಲಿಹುದಿಕೇರಿಯಲ್ಲಿ ಡಿವೈಎಫ್ ಐ ಜಿಲ್ಲಾ ಸಮಾವೇಶ : ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರ ವಿಫಲ : ಬಸವರಾಜ್ ಪೂಜಾರ್ ಅಸಮಾಧಾನ

ಆಗಷ್ಟ್ 2, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಆ.2 NEWS DESK : ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷ ಕಳೆದರೂ ಇಂದಿಗೂ ನಿರುದ್ಯೋಗ ಸಮಸ್ಯೆಯಿಂದ ಯುವ ಸಮೂಹ ಅತಂತ್ರ ಸ್ಥಿತಿಯಲ್ಲಿ ದಿನಕಳೆಯಬೇಕಾದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಉದ್ಯೋಗ ಸೃಷ್ಟಿಸಬೇಕಾದ ಸರ್ಕಾರಗಳು ಮೌನವಾಗಿರುವ ಹಿನ್ನೆಲೆ ಯುವ ಸಮೂಹವನ್ನು ನಂಬಿರುವ ಕುಟುಂಬಗಳು ಸಂಕಷ್ಟದ ಜೀವನ ನಡೆಸುವಂತಾಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ( ಡಿ ವೈ ಎಫ್ ಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಪೂಜಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೆಲ್ಲಿಹುದಿಕೇರಿ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ನಡೆದ ಡಿವೈಎಫ್ ಐ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  ರಾಜ್ಯದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಉದ್ಯೋಗಗಳು ಖಾಲಿ ಇದ್ದರೂ ಉದ್ಯೋಗ ಭರ್ತಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಕೊಡಗು ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಉದ್ಯೋಗ ಬರ್ತಿಯಾಗದೆ ಖಾಲಿ ಇದ್ದು
ಸಾರ್ವಜನಿಕ ಸೇವೆಗಳು ನಿಭಾಯಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ಉದ್ಯೋಗ ಬರ್ತಿಗೆ ಮುಂದಾಗದೆ ಇರುವುದರಿಂದ ಉನ್ನತ ಶಿಕ್ಷಣ ಪಡೆದ ಯುವ ಸಮೂಹ ಕಾಫಿ ತೋಟ ಕೆಲಸಕ್ಕೆ ತೆರಳುವಂತಾಗಿದೆ. ಪ್ರವಾಸಿ ತಾಣಗಳ ಮೂಲಕ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯಲ್ಲಿ ನಿರುದ್ಯೋಗಿಗಳಿಗೆ ಸೂಕ್ತ ಕೆಲಸಗಳು ಸಿಗದೇ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮಾಡಿ ಪ್ರವಾಸೋದ್ಯಮವನ್ನು ಬೆಳೆಸಿದ್ದಲ್ಲಿ ವ್ಯಾಪಾರ ವಹಿವಾಟಿನೊಂದಿಗೆ ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಜನಪ್ರತಿನಿಧಿಗಳು ಯುವಸಮಹಕ್ಕೆ ಉದ್ಯೋಗ ಸೃಷ್ಟಿಸಲು ಮುಂದಾಗಬೇಕೆಂದು ಹೇಳಿದರು. ಡಿವೈಎಫ್ ಐ ರಾಜ್ಯ ಸಮಿತಿ ಖಜಾಂಜಿ ಸಂತೋಷ್ ಬಜಾಲ್ ಮಾತನಾಡಿ, ಡಿ ವೈ ಎಫ್ ಐ ಸಂಘಟನೆ ಕಳೆದ ಹಲವಾರು ವರ್ಷಗಳಿಂದಲೂ ಲಕ್ಷಾಂತರ ಯುವ ಸಮೂಹವನ ಒಗ್ಗೂಡಿಸಿ ಸಂಘಟನಾತ್ಮಕವಾಗಿ ಮುನ್ನಡೆಯುತ್ತಿದೆ ಯುವಜನರ ಸಮಸ್ಯೆ ಹಾಗೂ ಏಳಿಗೆಗಾಗಿ ಶ್ರಮಿಸುವ ಮೂಲಕ ಯುವಜನರ ಸರ್ವಾಂಗೀಣ ಅಭಿವೃದ್ಧಿಗೆ ಹೋರಾಡಲು, ಸಮಾನತೆ, ಪ್ರಜಾಪ್ರಭುತ್ವ, ಪ್ರಗತಿಪರ ಮೌಲ್ಯಗಳ ರಕ್ಷಣೆ ಸಮಾನ ಮನಸ್ಕರೊಂದಿಗೆ ಸ್ನೇಹ-ಸೌಹಾರ್ದ – ನವ ಸಮಾಜದ ನಿರ್ಮಾಣಕ್ಕೆ ಬದ್ಧತೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಗಿದೆ ಇದರೊಂದಿಗೆ ಹಲವು ಬೇಡಿಕೆಗಳನ್ನ ಮುಂದಿಟ್ಟು ಉದ್ಯೋಗ ಕೋಡಿ ಇಲ್ಲವೇ ನಿರುದ್ಯೋಗ ಭತ್ಯೆ ಕೊಡಿ, ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿ, ನೇಮಕಾತಿ ಮೇಲಿನ ನಿರ್ಬಂಧ ಹಿಂತೆಗೆಯಬೇಕು, ಖಾಸಗಿ ರಂಗದಲ್ಲಿ ಮೀಸಲಾತಿ ಜಾರಿಗೆ ತನ್ನಿ, ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವವರಿಗೆ ಕನಿಷ್ಟ ವೇತನ ನಿಗದಿಗೊಳಿಸಿ, ಒಓಖಇಉಂದಲ್ಲಿನ ಭ್ರಷ್ಟಾಚಾರ ತಡೆಗಟ್ಟಿ ಶಿಕ್ಷಣದ ವ್ಯಾಪಾರ ತಡೆಗಟ್ಟಿ, ಸರ್ವರಿಗೂ ಶಿಕ್ಷಣ ಕಡ್ಡಾಯವಾಗೊಳಿಸಿ, ವಸತಿ, ನಿವೇಶನ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಾರ್ವತ್ರೀಕರಣಗೊಳಿಸಿ. ಜಾತೀಯತೆ – ಅಸ್ಪೃಶ್ಯತೆ – ಅನಕ್ಷರತೆ, ಮೌಡ್ಯತೆ, ಅಜ್ಞಾನಗಳನ್ನು ತೊಲಗಿಸಿ.ಉದ್ಯೋಗ, ಶಿಕ್ಷಣ, ಆರೋಗ್ಯ ಮೂಲಭೂತ ಹಕ್ಕಾಗಲಿ. ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ನೀಡಲೇಬೇಕೆಂದು ಒತ್ತಾಯಿಸಿದರು. ಇದೇ ಸಂದರ್ಭ ನೂತನ ಜಿಲ್ಲಾ ಸಮಿತಿಯನ್ನ ರಚಿಸಲಾಗಿ ಅಧ್ಯಕ್ಷರಾಗಿ ರಾಚಪ್ಪಜಿ ಉಪಾಧ್ಯಕ್ಷರು ಗಳಾಗಿ ಕುಮಾರಿ ವಿದ್ಯಾ, ಎಂ ಕೆ ಅನಿಲ್, ಕಾರ್ಯದರ್ಶಿಗಳಾಗಿ ಜ್ಯೋತಿ ಕೃಷ್ಣ, ರಮೇಶ್, ಕವನ್ ಕುಮಾರ್, ಖಜಾಂಜಿಯಾಗಿ ಸಾಧಿಕ್ ಸೇರಿದಂತೆ ಹಲವರನ್ನು ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು. ಮಾಜಿ ಡಿ ವೈ ಎಫ್ ಐ ಜಿಲ್ಲಾಧ್ಯಕ್ಷ ಪಿ ಆರ್ ಬರತ್ , ಮಹಿಳಾ ಸಂಘಟನೆಯ ಪದ್ಮ ಶ್ರೀಧರ್, ರೈತ ಸಂಘಟನೆಯ ಪ್ರಮುಖ ಟಿ.ಟಿ.ಉದಯ, ಕೆ.ಎಸ್.ಮೊಣ್ಣಪ್ಪ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಡಿ.ವೈ.ಸಂಘಟನೆಯ ನೂರಾರು ಸದಸ್ಯರುಗಳು ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

*2030ಕ್ಕೆ ಭಾರತದಲ್ಲಿ ಮಲೇರಿಯಾ ಮುಕ್ತ, ಕೊಡಗು ಜಿಲ್ಲೆಗೆ ಕೇಂದ್ರ ತನಿಖಾ ತಂಡ ಭೇಟಿ*

ಸೆಪ್ಟೆಂಬರ್ 28, 2026

*ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟಬಹುದು : ಮಹೇಶ್*

ಸೆಪ್ಟೆಂಬರ್ 28, 2026

*ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ : ವಿಚಾರಣೆಗೆ ಬಾಕಿ ಇರುವ ಮತದಾರರ ಮನೆ ಮನೆಗೆ ಬಿಎಲ್‍ಒಗಳು ಭೇಟಿ : ಜಿಲ್ಲಾಧಿಕಾರಿ*

ಸೆಪ್ಟೆಂಬರ್ 28, 2026

*ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟಬಹುದು : ಮಹೇಶ್*

ಸೆಪ್ಟೆಂಬರ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, ಸೆ.28 NEWS DESK : ಪೋಷಣ್ ಮಾಸಾಚರಣೆಯ ಅಂಗವಾಗಿ ಕಾನ್ವೆಂಟ್ ಜಂಕ್ಷನ್ ಅಂಗನವಾಡಿ ಕೇಂದ್ರದಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಹಾಗೂ…

*ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ : ವಿಚಾರಣೆಗೆ ಬಾಕಿ ಇರುವ ಮತದಾರರ ಮನೆ ಮನೆಗೆ ಬಿಎಲ್‍ಒಗಳು ಭೇಟಿ : ಜಿಲ್ಲಾಧಿಕಾರಿ*

ಸೆಪ್ಟೆಂಬರ್ 28, 2026

*ಸಮಾಜಮುಖಿ ಸೇವೆ ಪರಿಗಣಿಸಿ ಕೇಳೇಟಿರ ದೀಪು ದೇವಯ್ಯ ಸನ್ಮಾನ*

ಸೆಪ್ಟೆಂಬರ್ 28, 2026

*ನಾಪೋಕ್ಲು: ‘ಕ್ಲೀನ್ ಅಪ್’ ವತಿಯಿಂದ ಯಶಸ್ವಿ ಸ್ವಚ್ಛತಾ ಅಭಿಯಾನ*

ಸೆಪ್ಟೆಂಬರ್ 28, 2026

*ಅಕ್ಟೋಬರ್ 20ರಂದು ವಿರಾಜಪೇಟೆಯಲ್ಲಿ 19ನೇ ವರ್ಷದ ಅದ್ದೂರಿ ಆಯುಧಪೂಜೆ ಹಾಗೂ ಸಂಗೀತ ರಸಮಂಜರಿ*

ಸೆಪ್ಟೆಂಬರ್ 28, 2026

*ಅ.1ರಂದು ಸಿದ್ದಾಪುರದಲ್ಲಿ ಸಿಎನ್‌ಸಿಯಿಂದ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ*

ಸೆಪ್ಟೆಂಬರ್ 28, 2026

*ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ*

ಸೆಪ್ಟೆಂಬರ್ 28, 2026

*ಮಹಿಳಾ ಸಬಲೀಕರಣಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮಗಳು ಪೂರಕ: ಆನಂದ್ ಸುವರ್ಣ*

ಸೆಪ್ಟೆಂಬರ್ 28, 2026

*ಮಡಿಕೇರಿಯಲ್ಲಿ ಕಾಫಿ ದಸರಾ: ಮಳಿಗೆ ತೆರೆಯಲು ಅವಕಾಶ*

ಸೆಪ್ಟೆಂಬರ್ 28, 2026

*ಮಡಿಕೇರಿಯಲ್ಲಿ ಕೂರ್ಗ್ ವಿಂಗ್ಸ್ ಆಫ್ ಪ್ಯಾಶನ್ ಫಿಟ್ನೆಸ್ ತರಬೇತಿ : 7 ವರ್ಷಗಳ ಅನುಭವ : ತಕ್ಷಣ ಹೆಸರು ನೋಂದಾಯಿಸಿ*

ಸೆಪ್ಟೆಂಬರ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.