Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಮಡಿಕೇರಿ ಕೊಡವ ಸಮಾಜದಲ್ಲಿ ಕಕ್ಕಡ-18 ಸಂಭ್ರಮ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಕೊಡವ ಸಮಾಜದಲ್ಲಿ ಕಕ್ಕಡ-18 ಸಂಭ್ರಮ

ಆಗಷ್ಟ್ 4, 20253 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಆ.4 NEWS DESK : ಮಡಿಕೇರಿ ಕೊಡವ ಸಮಾಜ, ಪೊಮ್ಮಕ್ಕಡ ಒಕ್ಕೂಟ, ಮಡಿಕೇರಿ ಕೊಡವ ಕೇರಿಗಳ ಸಹಯೋಗದಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ ಕಕ್ಕಡ ನಮ್ಮೆಯ ಒತ್ತೋರ್ಮೆ ಕೂಟ ನಡೆಯಿತು. ಕೊಡಗಿನ ಎಲ್ಲೆಡೆ ಆ.3ರಂದು ಸಾಂಪ್ರದಾಯಿಕವಾಗಿ ಆಚರಿಸಲಾಗುವ ಕಕ್ಕಡ ಸಂಪ್ರದಾಯವನ್ನು ಪುರುಷರು, ಮಹಿಳೆಯರು‌ ಮಕ್ಕಳು ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ರೀಡೆಯನ್ನು  ಆಯೋಜಿಸಲಾಗಿತ್ತು. ಅತಿಥಿಗಳಿಂದ ಪೊಮ್ಮಡ ಕೂಟದ ಬ್ಯಾಡ್ಜ್ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕಕ್ಕಡ‌ ನಮ್ಮೆ ಒಂದು‌ ಸಂಭ್ರಮಾಚರಣೆಯಾಗಿದೆ. ಮಡಿಕೇರಿ‌ ಪೊಮ್ಮಕ್ಕಡ‌ ಕೂಟದ ಕಟ್ಟಡ ನಿರ್ಮಾಣಕ್ಕೆ 20 ಲಕ್ಕ ಅನುದಾನ ಹಾಗೂ ತಡೆಗೋಡೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಹಿಂದೆ ಪ್ರಾಯೋಗಿಕ ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯಯುತರಾಗಿದ್ದರು. ಈಗಿನ ಆಹಾರ ಪದ್ದತಿ ಬದಲಾವಣೆಗೊಂಡಿದೆ ಆದ್ದರಿಂದ ಎಲ್ಲರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ‌ ಮಾತನಾಡಿ, ಕೊಡಗಿನ ಮೂಲ ಸಂಸ್ಕೃತಿಯಂತೆ ಮಳೆಗಾಲ‌ಪ್ರಾರಂಭವಾದೊಡನೆ ಗದ್ದೆಯಲ್ಲಿ ಉಳುಮೆ ಮಾಡಿ ಭತ್ತ ಬೆಳೆದು ಸೇವಿಸುತ್ತಿದ್ದರು. ಆ ಸಮಯದಲ್ಲಿ ಕಕ್ಕಡ ತಿಂಗಳಲ್ಲಿ ಮಳೆಯ ಚಳಿಗಾಳಿಗೆ ಮೈಯನ್ನು ಬೆಚ್ಚಗಿಸಿಕೊಳ್ಳಲು ಕಕ್ಕಡ 18 ರಂದು ವಿಶೇಷ ಖಾದ್ಯವನ್ನು ಸೇವಿಸುವುದೇ ಈ ಆಚರಣೆಯ ವಿಶೇಷ ಎಂದರು. ಕಾರ್ಯ ಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ವಂದಿಸಿದರು.
ಕಕ್ಕಡ ವಿಶೇಷ ಖಾಧ್ಯಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿ ಸಮಾಜ ಸೇವಕಿ ಅಜ್ಜಿಕುಟ್ಟೀರ ಕಾಂಚನ್ ಪೊನ್ನಣ್ಣ‌ ಮಾತನಾಡಿ, ಕಕ್ಕಡ ಆಚರಣೆ ಕೊಡಗಿನ ಸಂಪ್ರದಾಯಕ್ಕೆ ದ್ಯೋತಕ ವಾಗಿದೆಂದರು. ಮಡಿಕೇರಿ‌ ಪೊಮ್ಮಕ್ಕ ಕೂಟದ ಕಾರ್ಯಕ್ಕೆ ಶ್ಲಾಘಿಸಿದರು. ನಮ್ಮ ಪೂರ್ವಿಕರು ನಮಗೆ ಬದುಕಿನ ಶಿಸ್ತಿನ ಜೊತೆಗೆ ಆಹಾರ ಪದ್ದತಿಯಲ್ಲಿಯೂ ಕೂಡ ಶಿಸ್ತನ್ನು ಬಳುವಳಿಯಾಗಿ ನೀಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗಿನ ಪರಿಸರ ಹಾಗೂ ಹವಾಗುಣಕ್ಕನ್ನುಸಾರವಾಗಿ, ಕಾಲಕಾಲಕ್ಕೆ ವಿವಿಧ ಬಗೆಯ ಆಹಾರ ಬಳಕೆ ಮಾಡುವ ವಿಶಿಷ್ಟ ಸಂಪ್ರದಾಯವನ್ನು ನಮ್ಮ ಪೂರ್ವಜರು ನೂರಾರು ವರ್ಷಗಳ ಹಿಂದೆಯೇ ತಿಳಿದುಕೊಂಡಿದ್ದರು ಎಂದರೆ, ಅವರ ಜಾಣ್ಮೆ ಹಾಗೂ ವೈಜ್ಞಾನಿಕ ಚಿಂತನೆಯನ್ನು ನಾವು ಮೆಚ್ಚಲೇ ಬೇಕು. ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ವೈವಿಧ್ಯಮಯ ಆಹಾರ ಬಳಕೆ ಮಾಡುತ್ತಿದ್ದು, ಇವುಗಳನ್ನು ಕಕ್ಕಡ ನಮ್ಮೆಯಲ್ಲಿ ಪ್ರದರ್ಶನಮಾಡಿ ನಮ್ಮ ಪರಂಪರೆಯನ್ನು ಮುಂದಿನ ಪೀಳಗೆಗೆ ಶಾಶ್ವತವಾಗಿ ಉಳಿಸಲು ಪೊಮ್ಮಕ್ಕಡ ಕೂಟದ ಪ್ರಯತ್ನ ಶ್ಲಾಘನೀಯ ಹಾಗೂ ಅತ್ಯಂತ ಸಮಯೋಚಿತ ಎಂದು ಕಾಂಚನ್ ಪೊನ್ನಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.  ವಿಧಾಪರಿತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಮಾತನಾಡಿ, ಕೊಡವ ಸಮಾಜದ ಅಭಿವೃದ್ಧಿಗೆ ಕೊಡಗಿನ ಎರಡು ಶಾಸಕರು ಸಹಕಾರ ನೀಡುತ್ತಿದ್ದು ಎಲ್ಲರು ಕೈಜೋಡಿಸ ಬೇಕೆಂದರು. ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತ ಬೊಳ್ಳಪ್ಪ ಮಾತನಾಡಿ, ಊರು‌ ನಾಡು ಕೇರಿ ಮಂದ್ ಮಾನಿಯಲ್ಲಿ ಕಲಿತ ಸಂಸ್ಕೃತಿ,ಆಚಾರ, ವಿಚಾರಗಳು ಇಂದು ಸಂಪ್ರದಾಯವಾಗಿ ನಡೆದು ಬಂದದ್ದು ವಿಶೇಷವಾಗಿದೆ. ಮಡಿಕೇರಿ ಕೊಡವ ಸಮಾಜದ ಪೊಮ್ಮಕಡ ಕೂಟದಲ್ಲಿ ಸ್ಥಳೀಯ ಮಹಿಳೆಯರು ಸದಸ್ಯರಾಗಿದ್ದು, ವಿವಿಧ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಪೊಮ್ಮಕ್ಕಡ ಕೂಟದ ಸದಸ್ಯರು ಹಾಗು ಮಕ್ಕಳಿಂದ ವಿವಿಧ ನೃತ್ಯ ಪ್ರದರ್ಶನ ಗೊಂಡಿತ್ತು. ಕಕ್ಕಡ ತಿಂಗಳ ವಿಶೇಷದ ಬಗ್ಗೆ ಅಜ್ಜಿಕುಟ್ಟೀರ ಸುನಿತಾ ಗಿರೀಶ್ ವಿಚಾರ ಮಂಡನೆ ಮಾಡಿದರು. ಸ್ಪರ್ಧಾ ತೀರ್ಪುಗಾರರಾಗಿ ಹಂಚೆಟ್ಟಿರ ಮನುಮುದ್ದಪ್ಪ, ನೆರವಂಡ ಡ್ಯೂಕ್, ಮೂವೇರ ಅನು ಸುರೇಶ್, ಚೌರಿರ ಹ್ರಶಿಕ ಶ್ಯಾಂ ನೆರವೆರಿಸಿದರು. ಪಾಲೆಯಂಡ ಕಾವ್ಯ ಪ್ರಾರ್ಥಿಸಿ ಕೊಡವ ಸಮಾಜ ಉಪಾಧ್ಯಕ್ಷ ರಾದ ಕೇಕಡ ವಿಜುದೇವಯ್ಯಸ್ವಾಗತಿಸಿ ಉಳ್ಳಿಯಂಡ ಸಚಿತ ಗಂಗಮ್ಮ ವಂದಿಸಿ ಚೋಕಿರ ಅನಿತಾ ನಿರೂಪಿಸಿದರು. ಅಂಜಪರವಂಡ ಉಷಾ ಅತಿಥಿಗಳ‌ ಪರಿಚಯಿಸಿದರು.
ವೇದಿಯಲ್ಲಿ ಪದ್ಮಶ್ರೀ ವಿಜೇತೆ ಡಾ.ಐಮುಡಿಯಂಡ‌ ರಾಣಿ ಮಾಚಯ್ಯ, ಅಜ್ಜಿಕುಟ್ಟೀರ ಸುನಿತಾಗಿರೀಶ್, ಮಂಡುವಂಡ ಮುತ್ತಪ್ಪ, ಶಾಂತೆಯಂಡ ವೀಣಾ ಅಚ್ಚಯ್ಯ,ಪೊಮ್ಮಕ್ಕಡ ಕೂಟದ ಅಧ್ಯಕ್ಷ ಕನ್ನಂಡ ಕವಿತ ಬೊಳ್ಳಪ್ಪ, ಕಾಂಚನ್ ಪೊನ್ನಣ್ಣ,ಡಾ.ಮಂತರ್ ಗೌಡ, ಕೇಕಡ ವಿಜುದೇವಯ್ಯ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿ‌ ಕೊಡವ ಸಮಾಜದ ಪದಾಧಿಕಾರಿಗಳು, ಮಡಿಕೇರಿ ಕೊಡವ ಕೇರಿಯ ಪದಾಧಿಕಾರಿಗಳು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಸದಸ್ಯರು ಹಾಜರಿದ್ದರು. ವಿವಿಧ ಕ್ರೀಡೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  ಕಕ್ಕಡ ಮದ್ದ್ ಪಾಯಸ, ಮದ್ದ್ ಪುಟ್ಟ್,ಞಂಡ್ಕರಿ, ಪಂದಿಕರಿ, ಕೋಳಿಕರಿ, ಮಾಂಗೆಕರಿ, ಚೆಕ್ಕೆಕುರುಪಜ್ಜಿ, ಕೈಪುಳಿ ಪಜ್ಜಿ,‌ ಮುದ್ರೆ ಕಣ್ಣಿ, ಕೊಯಿಲೆ ಮೀನ್ ಕರಿ, ನಾಡ್ ಕುಮ್ಮು ಕರಿ, ಬೈಂಬಳೆ ಕರಿ, ಕೋವುಲೆ ಪುಟ್ಟ್, ಮರಕೇಂಬ್ ಪುಟ್ಟ್ ….ಹೀಗೆ ಹಲವು ಬಗ್ಗೆಯ ಕಕ್ಕಡ ತಿಂಗಳ ಖಾಧ್ಯಗಳ ಪ್ರದರ್ಶನ ಕೊಡವ ಸಮಾಜದಲ್ಲಿ ಗಮನ ಸೆಳೆದವು.

ವರದಿ: ಪುತ್ತರಿರ ಕರುಣ್ ಕಾಳಯ್ಯ 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿಯಲ್ಲಿ ಜಾನಪದ ದಸರಾ ಸಂಭ್ರಮ: ಜಾನಪದ ಕಲಾಪ್ರಕಾರಗಳ ಪ್ರದರ್ಶನಕ್ಕೆ ಮನಸೋತ ಜನತೆ; ಜಾನಪದ ಸಂಸ್ಕೃತಿಯ ಉಳಿವಿಗೆ ಹೆಚ್ಚಿನ ಕಾಳಜಿ ಅಗತ್ಯ: ಶಾಸಕ ಎ.ಎಸ್.ಪೊನ್ನಣ್ಣ ಕರೆ; ಕಲಾವಿದರು ಹಾಗೂ ಜಾನಪದ ವಸ್ತು ಸಂಗ್ರಹಕಾರರಿಗೆ ಸನ್ಮಾನ

ಅಕ್ಟೋಬರ್ 18, 2026

ಕಾವೇರಿ ತೀರ್ಥೋದ್ಭವದಂದು ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅಭಿಮಾನಿ ಬಳಗದಿಂದ ಸೇವಾ ಕಾರ್ಯ : 3 ಸಾವಿರಕ್ಕೂ ಅಧಿಕ ಭಕ್ತರಿಗೆ ಹಣ್ಣು, ತಂಪು ಪಾನೀಯ, ಕಾಫಿ ವಿತರಣೆ

ಅಕ್ಟೋಬರ್ 18, 2026

ಬಲಮುರಿಯಲ್ಲಿ ಇಂದು ಕಾವೇರಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ ಪೂರ್ಣ; ವಿಶೇಷ ಪೂಜೆ, ಕಾವೇರಿ ಮಹಾ ಆರತಿ ಹಾಗೂ ಅನ್ನಸಂತರ್ಪಣೆ ಆಯೋಜನೆ

ಅಕ್ಟೋಬರ್ 18, 2026

ಕಾವೇರಿ ತೀರ್ಥೋದ್ಭವದಂದು ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅಭಿಮಾನಿ ಬಳಗದಿಂದ ಸೇವಾ ಕಾರ್ಯ : 3 ಸಾವಿರಕ್ಕೂ ಅಧಿಕ ಭಕ್ತರಿಗೆ ಹಣ್ಣು, ತಂಪು ಪಾನೀಯ, ಕಾಫಿ ವಿತರಣೆ

ಅಕ್ಟೋಬರ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.18 : ಕಾವೇರಿ ತೀರ್ಥೋದ್ಭವದ ದಿನವಾದ ಶನಿವಾರ ಕಾವೇರಿ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಎ.ಎಸ್.ಪೊನ್ನಣ್ಣ ಹಾಗೂ…

ಬಲಮುರಿಯಲ್ಲಿ ಇಂದು ಕಾವೇರಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ ಪೂರ್ಣ; ವಿಶೇಷ ಪೂಜೆ, ಕಾವೇರಿ ಮಹಾ ಆರತಿ ಹಾಗೂ ಅನ್ನಸಂತರ್ಪಣೆ ಆಯೋಜನೆ

ಅಕ್ಟೋಬರ್ 18, 2026

ಕ್ಲೀನ್ ಕಕ್ಕಬ್ಬೆ ಅಭಿಯಾನ ಯಶಸ್ವಿ: 3,670 ಕೆ.ಜಿ. ತ್ಯಾಜ್ಯ ತೆರವು; ನಾಲಡಿ ಕಸಮುಕ್ತ; ಮರಂದೋಡು ಗ್ರಾಮವೂ ಬಹುತೇಕ ಸ್ವಚ್ಛ

ಅಕ್ಟೋಬರ್ 18, 2026

ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿ: 118 ಕವಿಗಳ ಮಹಾಸಂಗಮ; ಜೆನ್-ಜಿ ಹಾಗೂ ಬಾಲಕವಿಗಳಿಂದ ಕವನ ವಾಚನ; ವಿವಿಧ ಭಾಷೆ, ಸಂಸ್ಕೃತಿಗಳ ಸಾಹಿತ್ಯ ಅಭಿವ್ಯಕ್ತಿಗೆ ವೇದಿಕೆ

ಅಕ್ಟೋಬರ್ 18, 2026

ರಾಜ್ಯಮಟ್ಟದ ಯೋಗ ದಸರಾ ಸ್ಪರ್ಧೆಯಲ್ಲಿ ಸುಮೇಶ್ ಕೆ.ಪಿ.ಗೆ ದ್ವಿತೀಯ ಸ್ಥಾನ; ಪಾಲಿಬೆಟ್ಟದ ಚೆಶೈರ್ ಹೋಮ್ ವಿಶೇಷ ಶಾಲೆಯ ವಿದ್ಯಾರ್ಥಿಗೆ ಬೆಳ್ಳಿ ಪದಕ, ನಗದು ಬಹುಮಾನ

ಅಕ್ಟೋಬರ್ 18, 2026

ತಲಕಾವೇರಿಯಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವ

ಅಕ್ಟೋಬರ್ 17, 2026

ಮೂರ್ನಾಡಿನಲ್ಲಿ ಅ.20ರಂದು 33ನೇ ವರ್ಷದ ಅದ್ದೂರಿ ಆಯುಧ ಪೂಜೆ ಮಹೋತ್ಸವ; ವಾಹನಗಳ ಮೆರವಣಿಗೆ, ಬೊಂಬೆ ಕುಣಿತ ಆಕರ್ಷಣೆ; ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಹಾಗೂ ಮಾಜಿ ಸೈನಿಕರಿಗೆ ಸನ್ಮಾನ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ವಿರಾಜಪೇಟೆಯಲ್ಲಿ ಅ.20ರಂದು ಅದ್ದೂರಿ ಆಯುಧ ಪೂಜೆ: ಬೈಕ್ ಸಾಹಸ ಪ್ರದರ್ಶನ, ಸಂಗೀತ ರಸಮಂಜರಿ ವಿಶೇಷ ಆಕರ್ಷಣೆ

ಅಕ್ಟೋಬರ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.