Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗು ಕಲಾವಿದರ ಸಂಘದ ಅಧ್ಯಕ್ಷರಾಗಿ ವಾಂಚಿರ ವಿಠಲ್ ನಾಣಯ್ಯ ಆಯ್ಕೆ*
  • *ಕೊಡಗು ಕಲಾವಿದರ ಸಂಘದಿಂದ ಎ.ಟಿ.ರಘು ಪುಣ್ಯ ಸ್ಮರಣೆ : ಪುಸ್ತಕ ಬಿಡುಗಡೆ, ಸಮಿತಿ ಪುನರ್‌ರಚನೆ*
  • *ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ : ಉದಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸ್ಪಷ್ಟನೆ*
  • *ಮುಂದಿನ ಒಂದು ವಾರ ರಾಜ್ಯಾದ್ಯಂತ ಮಳೆ ಅಬ್ಬರ ಸಾಧ್ಯತೆ: ಯಾವೆಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ? ಹವಾಮಾನ ಇಲಾಖೆ ರಿಪೋರ್ಟ್*
  • *ಗೋದಾವರಿ ನದಿಯಲ್ಲಿ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ದಾರುಣ ಅಂತ್ಯ*
  • *ಸುಂಟಿಕೊಪ್ಪ : ಶ್ರೀ ಕುರಂಭ (ಭಗವತಿ) ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಾರ್ಷಿಕ ಮಹಾಪೂಜೆ*
  • *ಗೌಡಳ್ಳಿಯಲ್ಲಿ ಫುಟ್ಬಾಲ್ ಪಂದ್ಯಾವಳಿ ಉದ್ಘಾಟನೆ*
  • *ಕೊಡಗರಹಳ್ಳಿ : ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಯುಗಾದಿ*
  • *ಬಾಳುಗೋಡಿನಲ್ಲಿ ಲೇಔಟ್ ಕಾನೂನುಬದ್ಧವಾಗಿದೆ*
  • *ಒತ್ತುವರಿಯಾಗಿರುವ ದೇವಾಲಯದ ಜಾಗವನ್ನು ಒತ್ತುವರಿದಾರರು ಸ್ವಯಂ ಇಚ್ಛೆಯಿಂದ ತೆರವುಗೊಳಿಸಬೇಕು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅಮ್ಮತ್ತಿಯಲ್ಲಿ ಕಥೆ ಹೇಳುವ ಸ್ಪಧೆ೯ : ಜನಪದ ಮೂಲದ ಕಥೆಗಳನ್ನು ಎಂದಿಗೂ ಮರೆಯದಿರಿ : ಬಾಚರಣಿಯಂಡ ಪಿ.ಅಪ್ಪಣ್ಣ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅಮ್ಮತ್ತಿಯಲ್ಲಿ ಕಥೆ ಹೇಳುವ ಸ್ಪಧೆ೯ : ಜನಪದ ಮೂಲದ ಕಥೆಗಳನ್ನು ಎಂದಿಗೂ ಮರೆಯದಿರಿ : ಬಾಚರಣಿಯಂಡ ಪಿ.ಅಪ್ಪಣ್ಣ*

ಆಗಷ್ಟ್ 4, 20253 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಆ.4 NEWS DESK  : ಜಾನಪದ ಕಥೆಗಳು ಪ್ರಕೃತಿಯಲ್ಲಿನ ನೈಜ ಪುಪ್ಪಗಳಂತೆ ಸದಾ ಪರಿಮಳ ಬೀರುತ್ತಾ ಕಥಾ ಲೋಕದಲ್ಲಿ ಕಂಗೊಳಿಸುತ್ತದೆ. ಹೀಗಾಗಿ ಜಾನಪದ ಕಥೆಗಳು ಜನರ ಕಥೆಗಳಾಗಿ ಅತ್ಯಂತ ಮಹತ್ವ ಪಡೆಯುತ್ತದೆ. ಜಾನಪದೀಯ ಮೂಲದ ಕಥೆಗಳನ್ನು ಎಂದಿಗೂ ಮರೆಯಬಾರದು ಎಂದು ತ್ರಿಭಾಷಾ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಕಥೆಗಾರರಿಗೆ ಕರೆ ನೀಡಿದ್ದಾರೆ. ಕೊಡಗು ಪತ್ರಕತ೯ರ ಸಂಘದ ಆಶ್ರಯದಲ್ಲಿ ವಿರಾಜಪೇಟೆ ತಾಲ್ಲೂಕು ಪತ್ರಕತ೯ರ ಸಂಘ ಮತ್ತು ಕಾಮಧೇನು ಗೋಶಾಲೆ ಟ್ರಸ್ಟ್ ಸಂಯುಕ್ತಾಶ್ರದಲ್ಲಿ ಅಮ್ಮತ್ತಿಯ ಕಾವಾಡಿಯಲ್ಲಿನ ಗೋಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಥಾ ಸಮಯ – ಕಥೆ ಹೇಳುವ ಸ್ಪಧೆ೯ಯ ತೀಪು೯ಗಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. 1940 ರ ದಶಕದಲ್ಲಿ ಖ್ಯಾತ ಕಲಾವಿದ ಕರೀಂಖಾನ್ ಅವರು ಜಾನಪದ ಕಲೆ, ಸಾಹಿತ್ಯಕ್ಕೆ ಹೊಸ ರೂಪು ನೀಡಿದರು. ಅನಂತರವೇ ಕನಾ೯ಟಕದಲ್ಲಿ ಜಾನಪದ ಕಥೆ, ಕವನಗಳಿಗೆ ಆದ್ಯತೆ ದೊರಕಿತ್ತು ಎಂದೂ ಬಾಚರಣಿಯಂಡ ಅಪ್ಪಣ್ಣ ಸ್ಮರಿಸಿದರು. ನಾಡಿನ ಹೆಮ್ಮೆಯ ಕಥೆಗಾರರಾಗಿದ್ದ ಪೂಣ೯ಚಂದ್ರ ತೇಜಸ್ವಿ ನಮ್ಮಿಂದ ಮರೆಯಾಗಿದ್ದರೂ ಅವರ ಸಾಹಿತ್ಯ ಕೖತಿಗಳು ಸದಾ ಲೇಖಕರಿಗೆ ನವಚೈತನ್ಯ ನೀಡುವಂತಿದೆ. ಇಂಥ ಸಾಹಿತ್ಯ ಕೖತಿಗಳನ್ನು ವಿದ್ಯಾಥಿ೯ಗಳು ಹೆಚ್ಚು ಓದಿ ಜ್ಞಾನವಂತರಾಗಬೇಕೆಂದೂ ಅವರು ಕರೆ ನೀಡಿದರು. ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಕಥಾ ಸಮಯ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿ, ಮೊಬೈಲ್ ಕಾಲಘಟ್ಟದಲ್ಲಿ ಕಥೆ ಹೇಳಲು ಅಮ್ಮ- ಅಪ್ಪನಿಗೆ ವ್ಯವಧಾನವಿಲ್ಲ. ಕಥೆ ಕೇಳಲೂ ಮೊಬೈಲ್ ಗುಂಗಿನಲ್ಲಿ ಮುಳುಗಿರುವ ಮಕ್ಕಳಿಗೆ ಆಸಕ್ತಿ ಇಲ್ಲದಂತಾಗಿದೆ. ಇಂಥ ಕಾಲದಲ್ಲಿ ಕಥಾ ಸಮಯದಂಥ ಕಾಯ೯ಕ್ರಮಗಳು ಮಕ್ಕಳಲ್ಲಿ ಕಥೆ ಹೇಳುವ ಮತ್ತು ಕಥೆಗಳನ್ನು ಕೇಳುವ ಹೊಸ ಚಿಂತನೆ ಸೃಷ್ಟಿಸುವಂತಾಗಬೇಕೆಂದು ಸಲಹೆ ನೀಡಿದರು. ಜಾನಪದದ ಕಥೆಯ ಹಾಡಾಗಿರುವ ಧರಣಿ ಮಂಡಲವು ಎಂದೆಂದಿಗೂ ಗೋವುಗಳ ಮಹತ್ವ ಸಾರುತ್ತವೆ. ಕಥಾ ಸಮಯ ಕಾಯ೯ಕ್ರಮ ಗೋಶಾಲೆಯಲ್ಲಿಯೇ ಆಯೋಜಿತವಾಗಿರುವುದು ವಿಶೇಷ ಎಂದೂ ಅನಿಲ್ ಹೇಳಿದರು.  ಹಿರಿಯ ಲೇಖಕ ಬಾರಿಯಂಡ ಜೋಯಪ್ಪ ಮಾತನಾಡಿ, ಕಾಲ ಬದಲಾದರೂ ಇತಿಹಾಸವನ್ನು ಮರೆಯದೇ ಇತಿಹಾಸದ ಪ್ರಮುಖ ಕಥೆಗಳನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರಲ್ಲದೇ, ಹಳೇ ಕಾಲದಲ್ಲಿ ದಟ್ಟಾರಣ್ಯದ ನಡುವೇ ಒಂಟಿ ಮನೆಗಳಲ್ಲಿ ಜನ ವಾಸವಾಗಿದ್ದರೂ ವನ್ಯಜೀವಿಗಳ ಸಮಸ್ಯೆ ಕಾಡುತ್ತಿರಲಿಲ್ಲ. ಆದರೆ ಬದಲಾದ ಕಾಲದಲ್ಲಿ ನಾಡಿಗೇ ವನ್ಯಜೀವಿಗಳು ನುಗ್ಗಿ ದಾಂಧಲೆ ಸೖಷ್ಟಿಸುತ್ತಿವೆ. ವನ್ಯಜೀವಿ- ಮಾನವನ ನಡುವಿನ ಸೌಹಾಧ೯ ಸಂಬಂಧಿತ ಕಥೆಗಳೂ ಇಂದಿನ ಅಗತ್ಯದಂತಿದೆ ಎಂದರು. ಕಥಾ ಸಮಯದಂಥ ಚಿಂತನೆಗೊಡ್ಡುವ ಕಾಯ೯ಕ್ರಮಗಳು ಅತ್ಯಂತ ಮೌಲ್ಯಯುತವಾಗಿದೆ ಎಂದೂ ಅವರು ಬಣ್ಣಿಸಿದರು. ಅಸೀಮಾ ಮಾಸ ಪತ್ರಿಕೆಯ ಸಂಪಾದಕ ಮಾಣಿಪಂಡ ಸಂತೋಷ್ ತಮ್ಮಯ್ಯ ಮಾತನಾಡಿ, ಸೖಷ್ಟಿಯ ಪ್ರತೀ ಅಂಶದಲ್ಲಿಯೂ ಒಂದೊಂದು ಕಥೆಯಿದೆ. ಬೇರೊಬ್ಬರ ಕಣ್ಣಲ್ಲಿ ಪ್ರತೀಯೋವ೯ರೂ ಒಂದು ಕಥೆಯಾಗುತ್ತೇವೆ ಎಂದರಲ್ಲದೇ ಕೂಡುಕುಟುಂಬ ಪದ್ದತಿ ಕಡಮೆಯಾಗುತ್ತಿರುವ ಈ ದಿನಗಳಲ್ಲಿ ಮಕ್ಕಳ ಕಥೆಗಳಲ್ಲ ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅತ್ತೆ, ನಾದಿನಿಯ ಪಾತ್ರಗಳೇ ಕಾಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಂಥ ಸಂಬಂಧಗಳ ಬಗ್ಗೆ ಮಕ್ಕಳಿಗೆ ಗೊತ್ತೇ ಇಲ್ಲದಾದಾಗ ಆ ಪಾತ್ರಗಳನ್ನು ಕಥೆಗಳಲ್ಲಿ ಹೇಗೆ ಸೃಷ್ಟಿಸಲು ಸಾಧ್ಯ ಎಂದೂ ಕಳವಳ ವ್ಯಕ್ತಪಡಿಸಿದರು. ಕಥೆ ಬರೆಯುವವರು ವಿಮಶ೯ಕರ ವಿಮಶೆ೯ಗಳಿಗೆ ಮನಸ್ಸು ನೋಯಿಸಿಕೊಂಡು ಹೊಸ ಕಥೆಗಳನ್ನು ಬಲಿಗೊಡದಿರಿ. ಕಥೆಗಳು ಪಾತ್ರಗಳಾಗದೇ ಕಥೆಗಳು ಜೀವಂತವಾಗಿರುವಂತೆ ಕಥೆಗಾರರು ಬರೆಯಿರಿ ಎಂದೂ ಸಂತೋಷ್ ತಮ್ಮಯ್ಯ ಸಲಹೆ ಮಾಡಿದರು. ವಿರಾಜಪೇಟೆ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಮಾತನಾಡಿ, ಕಥೆಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ವಿನೂತನ ರೀತಿಯಲ್ಲಿ ಕಥಾ ಸಮಯ ಆಯೋಜಿಸಿದ್ದು ನಿರೀಕ್ಷೆಗೂ ಮೀರಿದ ಸ್ಪಂದನ ದೊರಕಿದೆ ಎಂದರು. ವಿದ್ಯಾಥಿ೯ಗಳಲ್ಲಿ ಕಥೆ ಬರೆಯಲು ಇಂಥ ಕಾಯ೯ಕ್ರಮ ಪ್ರೋತ್ಸಾಹ ನೀಡುತ್ತದೆ ಎಂದೂ ಅವರು ಹೇಳಿದರು. ಕೊಡಗು ಪತ್ರಕತ೯ರ ಸಂಘದ ಗೌರವ ಸಲಹೆಗಾರ ಬಿ.ಜಿ. ಅನಂತಶಯನ ಮಾತನಾಡಿ, ಯಾವುದೇ ಬರಹ ಆಗಿರಲಿ ಅದರಲ್ಲಿ ಭಾಷಾ ಸೌಂದಯ೯, ಭಾಷೆಯ ಗಟ್ಟಿತನ ಮುಖ್ಯವಾಗಬೇಕು. ಕ್ರಿಯಾತ್ಮಕತೆ ಕಥೆಗಳ ಮೂಲವಾಗಿರಬೇಕು. ಬಾವಿಯೊಳಗಿನ ಕಪ್ಪೆಯಂತೆ ಕಥೆಗಾರನ ಕಥಾ ಸೃಷ್ಯಿ ಇರದೇ ಪ್ರತೀ ಕಥೆಯಲ್ಲಿಯೂ ನಾವೀನ್ಯತೆ ಕಂಗೊಳಿಸಬೇಕೆಂದು ಸಲಹೆ ನೀಡಿದರು. ಕೊಡಗು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಮಾತನಾಡಿ, ಮಕ್ಕಳಿಗೆ ಕಥೆ ಹೇಳುವ ಮತ್ತು ಕೇಳುವ ಆಸಕ್ತಿ ಇಂದಿಗೂ ಉಳಿದುಕೊಂಡಿದೆ. ಪ್ರತೀ ಕಥೆಯಲ್ಲಿಯೂ ಸಂದೇಶ ಹಾಸುಹೊಕ್ಕಾಗಿರಬೇಕು. ಕಥಾ ಸಮಯದಂಥ ಕಾಯ೯ಕ್ರಮಗಳು ವಿದ್ಯಾಥಿ೯ಗಳ ಪಾಲಿಗೆ ಕಥೆ ಬರೆಯುವ ಕಥಾ ಶಿಬಿರಗಳಂತಿರಬೇಕೆಂದು ಹೇಳಿದರು. ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ರಾಮಚಂದ್ರ ಭಟ್ ಮಾತನಾಡಿ, ಗೋವುಗಳ ಪಾಲನೆಯಿಂದ ಮನೆ ಸಮೖದ್ದವಾಗುತ್ತದೆ. ಗೋಶಾಲೆಯಲ್ಲಿ ಹುಟ್ಟುಹಬ್ಬ, ವಿವಾಹ ವಾಷಿ೯ಕೋತ್ಸವದಂಥ ಕಾಯ೯ಕ್ರಮಗಳನ್ನು ಆಯೋಜಿಸಿ ಗೋವುಗಳ ಜತೆ ಸೌಹಾದ೯ತೆ ಬೆಳೆಸಿಕೊಳ್ಳಬೇಕು ನಮಗೆ ಗೋವು ಉತ್ಪನ್ನಗಳು ಬೇಕು. ಆದರೆ ಗೋವಿನ ಸಂರಕ್ಷಣೆ ಬೇಡ ಎಂಬ ಧೋರಣೆ ಸರಿಯಿಲ್ಲ ಎಂದೂ ಅವರು ಹೇಳಿದರು. ಗೋವುಗಳ ಸಂರಕ್ಷಣೆಯಾಗದೇ ಹೋದಲ್ಲಿ ಧಮ೯ವೂ ಸಂರಕ್ಷಣೆಯಾಗದು ಎಂಬುದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕೆಂದೂ ಅವರು ಹೇಳಿದರು. ಗೋವುಗಳ ಜತೆ ಬೆಸುಗೆಯೇ ಒಂದು ಕಥೆಯಾಗುತ್ತದೆ. ಗೋವುಗಳ ನಾಶವಾದರೆ ಅದೂ ಮತ್ತೊಂದು ದುರಂತದ ಕಥೆಯಾದೀತು ಎಂದೂ ಅವರು ಎಚ್ಚರಿಸಿದರು. ಹಿರಿಯ ಪಕ್ಷಿ ತಜ್ಞ ಡಾ.ಎಸ್.ವಿ. ನರಸಿಂಹನ್ ಮಾತನಾಡಿ, ಕಥೆ ರಚನೆಯಲ್ಲಿ ಸ್ವಂತಿಕೆ ಹೆಚ್ಚಾಗಿರಲಿ ಎಂದು ಸಲಹೆ ನೀಡಿದರು. ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ ನ ಟ್ರಸ್ಟಿ ಕೆ.ಕೆ. ಶ್ಯಾಮ,,ವಿರಾಜಪೇಟೆ ತಾಲೂಕು ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ಉಷಾ ಪ್ರೀತಮ್ ಸ್ವಾಗತಿಸಿ, ನಿರೂಪಿಸಿದರು. ಕೊಡಗು ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ, ವೀರಾಜಪೇಟೆ ತಾಲೂಕು ಸಂಘದ ನಿದೇ೯ಶಕರು, ಸದಸ್ಯರು, ಜಿಲ್ಲಾ ಸಂಘದ ನಿದೇ೯ಶಕರಾದ ಶಿವಪ್ಪ, ಗುರುದಶ೯ನ್, ಸಂಘದ ಸದಸ್ಯರು, ಗೋಶಾಲಾ ಸಂರಕ್ಷಣಾ ಟ್ರಸ್ಟ್ ಪ್ರಮುಖರು ಹಾಜರಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ವಿದ್ಯಾಥಿ೯ಗಳು, ಸಾವ೯ಜನಿಕರು ಹಾಜರಿದ್ದು ಕಥೆಗಳನ್ನು ವಾಚಿಸಿದ್ದು ವಿಶೇಷವಾಗಿತ್ತು.

ಕಥಾ ಸಮಯ ಸ್ಪಧಾ೯ ವಿಜೇತರು ::  ಸಾವ೯ಜನಿಕ ವಿಭಾಗ – ಪ್ರಥಮ – ಕಿಗ್ಗಾಲು ಗಿರೀಶ್ , ದ್ವಿತೀಯ – ಮೀದೇರೀರ ಕವಿತಾ ರಾಮು, ತೃತೀಯ – ಕೂಡಕಂಡಿ ಓಂಶ್ರೀ ದಯಾನಂದ, ಕಾಲೇಜು ವಿಭಾಗ – ಪ್ರಥಮ – ಮದನ್ ಚೇರಂಬಾಣೆ. ದ್ವಿತೀಯ- ರಾಧಿಕಾ. ತೃತೀಯ – ರಕ್ಷಿತಾ ಪ್ರಾಥಮಿಕ , ಪ್ರೌಡಶಾಲಾ ಶಾಲಾ ವಿಭಾಗ – ಪ್ರಥಮ – ಡೀನ್ಸ್ ಸಾಲ್ವೋ ಡಿಸೋಜಾ, ದ್ವಿತೀಯ – ಹಷ್ಮಿತಾ, ತೃತೀಯ ಎಂ.ಪಿ.ತಷ್ಮಿತ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡಗು ಕಲಾವಿದರ ಸಂಘದ ಅಧ್ಯಕ್ಷರಾಗಿ ವಾಂಚಿರ ವಿಠಲ್ ನಾಣಯ್ಯ ಆಯ್ಕೆ*

ಮಾರ್ಚ್ 21, 2026

*ಕೊಡಗು ಕಲಾವಿದರ ಸಂಘದಿಂದ ಎ.ಟಿ.ರಘು ಪುಣ್ಯ ಸ್ಮರಣೆ : ಪುಸ್ತಕ ಬಿಡುಗಡೆ, ಸಮಿತಿ ಪುನರ್‌ರಚನೆ*

ಮಾರ್ಚ್ 21, 2026

*ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ : ಉದಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸ್ಪಷ್ಟನೆ*

ಮಾರ್ಚ್ 21, 2026

*ಕೊಡಗು ಕಲಾವಿದರ ಸಂಘದಿಂದ ಎ.ಟಿ.ರಘು ಪುಣ್ಯ ಸ್ಮರಣೆ : ಪುಸ್ತಕ ಬಿಡುಗಡೆ, ಸಮಿತಿ ಪುನರ್‌ರಚನೆ*

ಮಾರ್ಚ್ 21, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.21 : ಕೊಡಗು ಕಲಾವಿದರ ಸಂಘದ ವತಿಯಿಂದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಹಾಗೂ…

*ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ : ಉದಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸ್ಪಷ್ಟನೆ*

ಮಾರ್ಚ್ 21, 2026

*ಮುಂದಿನ ಒಂದು ವಾರ ರಾಜ್ಯಾದ್ಯಂತ ಮಳೆ ಅಬ್ಬರ ಸಾಧ್ಯತೆ: ಯಾವೆಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ? ಹವಾಮಾನ ಇಲಾಖೆ ರಿಪೋರ್ಟ್*

ಮಾರ್ಚ್ 20, 2026

*ಗೋದಾವರಿ ನದಿಯಲ್ಲಿ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ದಾರುಣ ಅಂತ್ಯ*

ಮಾರ್ಚ್ 20, 2026

*ಸುಂಟಿಕೊಪ್ಪ : ಶ್ರೀ ಕುರಂಭ (ಭಗವತಿ) ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಾರ್ಷಿಕ ಮಹಾಪೂಜೆ*

ಮಾರ್ಚ್ 20, 2026

*ಗೌಡಳ್ಳಿಯಲ್ಲಿ ಫುಟ್ಬಾಲ್ ಪಂದ್ಯಾವಳಿ ಉದ್ಘಾಟನೆ*

ಮಾರ್ಚ್ 20, 2026

*ಕೊಡಗರಹಳ್ಳಿ : ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಯುಗಾದಿ*

ಮಾರ್ಚ್ 20, 2026

*ಬಾಳುಗೋಡಿನಲ್ಲಿ ಲೇಔಟ್ ಕಾನೂನುಬದ್ಧವಾಗಿದೆ*

ಮಾರ್ಚ್ 20, 2026

*ಒತ್ತುವರಿಯಾಗಿರುವ ದೇವಾಲಯದ ಜಾಗವನ್ನು ಒತ್ತುವರಿದಾರರು ಸ್ವಯಂ ಇಚ್ಛೆಯಿಂದ ತೆರವುಗೊಳಿಸಬೇಕು*

ಮಾರ್ಚ್ 20, 2026

*ನಿಧನ ಸುದ್ದಿ*

ಮಾರ್ಚ್ 20, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.