Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಂಬಿರಂಡ ರಾಖಿ ಪೂವಣ್ಣ ಅವರಿಗೆ ‘ಅಧ್ಯಾಪಕ ಭೂಷಣ’ ಪ್ರಶಸ್ತಿ*
  • *ವಿರಾಜಪೇಟೆಯಲ್ಲಿ ಕಾವೇರಿ ಗಣೇಶೋತ್ಸವ: ಒಗ್ಗಟ್ಟಿನಿಂದ ಹಿಂದೂ ಸಮಾಜ ಬಲಪಡಿಸಲು ಕರೆ*
  • *ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕಾವೇರಿ ಶಾಲೆಯ ವಾಲಿಬಾಲ್ ತಂಡ*
  • *ನಾಪೋಕ್ಲುವಿನ ಸಹಕಾರ ಮಹಿಳಾ ಸಮಾಜದ ವಾರ್ಷಿಕ ಮಹಾಸಭೆ*
  • *ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಆಗ್ರಹ; ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡುವಂತೆ ಡಾ. ಕಾವೇರಪ್ಪ ಒತ್ತಾಯ*
  • *ಇಂದಿರಾನಗರ ಅಂಗನವಾಡಿ ಕೇಂದ್ರದಲ್ಲಿ ‘ಪೋಷಣ್ ಅಭಿಯಾನ’ ಕಾರ್ಯಕ್ರಮ*
  • *ಕಡೋಡಿ ಶ್ರೀ ಮಹಾವಿಷ್ಣು ಸನ್ನಿಧಿಯಲ್ಲಿ ಸೋಣ ತಿಂಗಳ ಕಾಲಾಯ ಸೇವೆ ಸಂಪನ್ನ*
  • *ಮಾದಾಪುರ ಕಾಲೇಜಿನಲ್ಲಿ ಎನ್ನೆಸ್ಸೆಸ್ ಸಂಸ್ಥಾಪನಾ ದಿನ; ಶಿಸ್ತು, ಸೇವಾ ಮನೋಭಾವ ಬೆಳೆಸುವುದು ಎನ್ನೆಸ್ಸೆಸ್ ಗುರಿ: ಪ್ರಾಂಶುಪಾಲ ಚಂದ್ರ*
  • *ಖುತುಬುಲ್ ಆರಿಫೀನ್ ರಾತೀಬ್ ಸಂಘದ ವತಿಯಿಂದ 111ನೇ ವರ್ಷದ ಗ್ರಾಂಡ್ ರಾತೀಬ್ ಮಜ್ಲಿಸ್*
  • *ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೂಡಿಗೆ ಡಯಟ್ ಸಂಸ್ಥೆಯಿಂದ ಎಂ.ಚಂದ್ರಕಾಂತ್ ರಿಗೆ ಆತ್ಮೀಯ ಬೀಳ್ಕೊಡುಗೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೂಡಿಗೆ ಡಯಟ್ ಸಂಸ್ಥೆಯಿಂದ ಎಂ.ಚಂದ್ರಕಾಂತ್ ರಿಗೆ ಆತ್ಮೀಯ ಬೀಳ್ಕೊಡುಗೆ*

ಆಗಷ್ಟ್ 4, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕುಶಾಲನಗರ ಆ.4 NEWS DESK : ಕುಶಾಲನಗರ ತಾಲ್ಲೂಕಿನ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ‌ ನಿರ್ದೇಶಕ (ಅಭಿವೃದ್ಧಿ)ರಾಗಿ ನಿವೃತ್ತಿ ಹೊಂದಿದ ಪ್ರಾಂಶುಪಾಲ ಎಂ.ಚಂದ್ರಕಾಂತ್  ಅವರಿಗೆ  ಡಯಟ್ ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಡಯಟ್ ಸಂಸ್ಥೆಯ ಅಧಿಕಾರಿಗಳು, ಕಛೇರಿಯ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತಿಗೊಂಡ ಪ್ರಾಂಶುಪಾಲ ಚಂದ್ರಕಾಂತ್ ಅವರನ್ನು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದಪ್ರಾಂಶುಪಾಲ ಎಂ.ಚಂದ್ರಕಾಂತ್,  ತಾವುಗಳು ಶಿಕ್ಷಣ ಇಲಾಖೆಯ ವಿವಿಧ ಸ್ತರದ ಹುದ್ದೆಗಳ ಜತೆಗೆ ಈ ಡಯಟ್ ಸಂಸ್ಥೆಯಲ್ಲಿ 2 ವರ್ಷಗಳ ಕಾಲ‌ ಪ್ರಾಂಶುಪಾಲರಾಗಿ ಉತ್ತಮ ಸೇವೆ ಸಲ್ಲಿಸಲು ಹಾಗೂ ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಸಹಕರಿಸಿದ್ದಕ್ಕೆ  ಕೃತಜ್ಞತೆ ಸಲ್ಲಿಸಿದರು. ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ವೃದ್ಧಿಸಲು ಹಾಗೂ 2024 ನೇ ಜನವರಿಯಲ್ಲಿ  ಜಿಲ್ಲೆಯಲ್ಲಿ ನಡೆದ ಶಾಲಾ ಮಕ್ಕಳ ರಾಷ್ಟ್ರೀಯ ಹಾಕಿ ಟೂರ್ನಿಯನ್ನು ಯಶಸ್ವಿಯಾಗಿ ಸಂಘಟಿಸಲು  ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕ ವೃಂದ ಹಾಗೂ ಜಿಲ್ಲೆಯ ಕ್ರೀಡಾಭಿಮಾನಿಗಳು ನೀಡಿದ ಸಹಕಾರ ಅವಿಸ್ಮರಣೀಯವಾದುದು ಎಂದರು. ಅಭಿನಂದನಾ ಭಾಷಣ ಮಾಡಿದ ಜಿಲ್ಲಾ ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಹೇಮಂತ್ ರಾಜ್ , ಡಯಟ್ ಸಂಸ್ಥೆಯ ಕಾರ್ಯಭಾರದೊಂದಿಗೆ   ಜಿಲ್ಲಾ ಡಿಡಿಪಿಐ ಆಗಿ ಹೆಚ್ಚುವರಿಯಾಗಿ ಸೇವೆ ಸಲ್ಲಿಸಿದ ಪ್ರಾಂಶುಪಾಲರಾದ ಚಂದ್ರಕಾಂತ್ ಅವರು  2024 ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಯಲ್ಲಿ ರಾಜ್ಯದಲ್ಲಿ ಜಿಲ್ಲೆಗೆ ನಾಲ್ಕನೇ ಸ್ಥಾನ ಗಳಿಸುವುದರೊಂದಿಗೆ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಗುಣಮಟ್ಟದ ಫಲಿತಾಂಶ ಗಳಿಸುವಲ್ಲಿ ಕೊಡಗು ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಉತ್ತಮ ಶೈಕ್ಷಣಿಕ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿರುವುದು ಹೆಮ್ಮೆಯ ಸಂಗತಿ ಎಂದರು. ಸಂಸ್ಥೆಯ ಹಿರಿಯ ಉಪನ್ಯಾಸಕಿ ಬಿ.ಎನ್.ಪುಷ್ಪ ಮಾತನಾಡಿ, ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ಪ್ರಾಂಶುಪಾಲರಾದ ಚಂದ್ರಕಾಂತ್ ಅವರು, ಸಂಸ್ಥೆಯ ಪ್ರಾಂಶುಪಾಲರಾದ ಚಂದ್ರಕಾಂತ್ ಅವರು, ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಜತೆಗೆ ಶಿಕ್ಷಕರ ತರಬೇತಿ ಕಾರ್ಯಗಳು ಸೇರಿದಂತೆ  ಸಂಸ್ಥೆಯ ಏಳ್ಗೆಗೆ ತಮ್ಮನ್ನು  ತೊಡಗಿಸಿಕೊಂಡಿದ್ದರು ಎಂದರು. ಸಂಸ್ಥೆಯ ನಿವೃತ್ತ  ಪ್ರಾಂಶುಪಾಲರಾದ ಎ.ಶ್ರೀಧರನ್ ಮಾತನಾಡಿ, ಸಂಸ್ಥೆಯ ಪ್ರಾಂಶುಪಾಲರಾದ ಚಂದ್ರಕಾಂತ್ ಅವರು,ಸಂಸ್ಥೆಯ ಅಧಿಕಾರಿಗಳು, ವಿದ್ಯಾರ್ಥಿ ವೃಂದ ಹಾಗೂ ಸಿಬ್ಬಂದಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು. ಹಿರಿಯ ಉಪನ್ಯಾಸಕರಾದ ಕೆ.ಎನ್.ಶಿವಕುಮಾರ್, ಉಪನ್ಯಾಸಕಿ ಗೀತಾ ಎನ್.ವಿ.ಸ್ವಾಮಿ, ಉಪನ್ಯಾಸಕರಾದ ವಿ.ವಿಜಯ್,  ಕೆ.ಎಸ್.ನಳಿನಾಕ್ಷಿ,ಪಿ.ಪಿ.ಗಾಯತ್ರಿ, ಎಂ.ಲತಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸೋಮವಾರಪೇಟೆ ಬಿಇಓ ಎಸ್.ಭಾಗ್ಯಮ್ಮ,  ಸುಳ್ಯ ಬಿಇಓ ಎಂ.ಕೃಷ್ಣಪ್ಪ, ಹುಣಸೂರು ಬಿಇಓ ಎಸ್.ಪಿ.ಮಹಾದೇವ, ನಿವೃತ್ತ ಬಿಇಓ ಶಿವಣ್ಣ,ಆಲೂರು ಅಕ್ಷರ ದಾಸೋಹ ಯೋಜನೆಯ ಅಧಿಕಾರಿ ಸಿದ್ದೇಶ್ ಕುಮಾರ್,  ಡಾ ಸದಾಶಿವಯ್ಯ ಎಸ್ ಪಲ್ಲೇದ್, ಪ್ರೌಢಶಾಲಾ ಶಿಕ್ಷಕರ ಸಂಘಟನೆಯ ಪ್ರಮುಖರಾದ ಪಿ.ನವೀನ್ ಕುಮಾರ್, ಎಂ.ಟಿ.ದಯಾನಂದ ಪ್ರಕಾಶ್, ಟಿ.ವಿ.ಶೈಲಾ, ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಯ್ಯ, ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಸಿ ಆರ್ ಪಿ‌ ಕೆ.ಶಾಂತಕುಮಾರ್, ವಿವಿಧ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ಡಯಟ್ ಸಂಸ್ಥೆಯ ಸಿಬ್ಬಂದಿ ಸೇರಿ ಪ್ರಾಂಶುಪಾಲರಾದ ಚಂದ್ರಕಾಂತ್ ಅವರನ್ನು ಅಭಿನಂದಿಸಿ ಗೌರವಿಸಿದರು. ಸಂಸ್ಥೆಯಲ್ಲಿನ ಸೇವಾವಧಿಯ ದಿನಗಳು ಮತ್ತು ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೊಂದಿಗೆ ಹೊಂದಿದ  ಪ್ರೀತಿ- ವಿಶ್ವಾಸದ ಒಡನಾಟವನ್ನು   ಮೆಲುಕು ಹಾಕಿದ ಪ್ರಾಂಶುಪಾಲರಾದ ಎಂ ಚಂದ್ರಕಾಂತ್, ಡಯಟ್ ಸಂಸ್ಥೆಯು ಜಿಲ್ಲಾ  ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿದ್ದು, ಶಿಕ್ಷಕರು ತರಬೇತಿ ಪಡೆದು ತಮ್ಮ ಜ್ಞಾನ ವೃದ್ಧಿಸಲು ಸಹಕಾರಿಯಾಗಿದೆ. ಸಂಸ್ಥೆಯ  ಅಧೀಕ್ಷಕಿ ಭವಿ ಪೊನ್ನಪ್ಪ, ಜಿ.ಟಿ.ಜಯಂತಿ, ಸಿಬ್ಬಂದಿ ಹಾಗ ಪ್ರಶಿಕ್ಷಣಾರ್ಥಿಗಳು ಇದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

*ಕಂಬಿರಂಡ ರಾಖಿ ಪೂವಣ್ಣ ಅವರಿಗೆ ‘ಅಧ್ಯಾಪಕ ಭೂಷಣ’ ಪ್ರಶಸ್ತಿ*

ಸೆಪ್ಟೆಂಬರ್ 27, 2026

*ವಿರಾಜಪೇಟೆಯಲ್ಲಿ ಕಾವೇರಿ ಗಣೇಶೋತ್ಸವ: ಒಗ್ಗಟ್ಟಿನಿಂದ ಹಿಂದೂ ಸಮಾಜ ಬಲಪಡಿಸಲು ಕರೆ*

ಸೆಪ್ಟೆಂಬರ್ 27, 2026

*ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕಾವೇರಿ ಶಾಲೆಯ ವಾಲಿಬಾಲ್ ತಂಡ*

ಸೆಪ್ಟೆಂಬರ್ 27, 2026

*ವಿರಾಜಪೇಟೆಯಲ್ಲಿ ಕಾವೇರಿ ಗಣೇಶೋತ್ಸವ: ಒಗ್ಗಟ್ಟಿನಿಂದ ಹಿಂದೂ ಸಮಾಜ ಬಲಪಡಿಸಲು ಕರೆ*

ಸೆಪ್ಟೆಂಬರ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಸೆ.27: ಪುಣ್ಯಭೂಮಿಯ ಶಕ್ತಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಅರಿತು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬರ…

*ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕಾವೇರಿ ಶಾಲೆಯ ವಾಲಿಬಾಲ್ ತಂಡ*

ಸೆಪ್ಟೆಂಬರ್ 27, 2026

*ನಾಪೋಕ್ಲುವಿನ ಸಹಕಾರ ಮಹಿಳಾ ಸಮಾಜದ ವಾರ್ಷಿಕ ಮಹಾಸಭೆ*

ಸೆಪ್ಟೆಂಬರ್ 27, 2026

*ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಆಗ್ರಹ; ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡುವಂತೆ ಡಾ. ಕಾವೇರಪ್ಪ ಒತ್ತಾಯ*

ಸೆಪ್ಟೆಂಬರ್ 27, 2026

*ಇಂದಿರಾನಗರ ಅಂಗನವಾಡಿ ಕೇಂದ್ರದಲ್ಲಿ ‘ಪೋಷಣ್ ಅಭಿಯಾನ’ ಕಾರ್ಯಕ್ರಮ*

ಸೆಪ್ಟೆಂಬರ್ 27, 2026

*ಕಡೋಡಿ ಶ್ರೀ ಮಹಾವಿಷ್ಣು ಸನ್ನಿಧಿಯಲ್ಲಿ ಸೋಣ ತಿಂಗಳ ಕಾಲಾಯ ಸೇವೆ ಸಂಪನ್ನ*

ಸೆಪ್ಟೆಂಬರ್ 27, 2026

*ಮಾದಾಪುರ ಕಾಲೇಜಿನಲ್ಲಿ ಎನ್ನೆಸ್ಸೆಸ್ ಸಂಸ್ಥಾಪನಾ ದಿನ; ಶಿಸ್ತು, ಸೇವಾ ಮನೋಭಾವ ಬೆಳೆಸುವುದು ಎನ್ನೆಸ್ಸೆಸ್ ಗುರಿ: ಪ್ರಾಂಶುಪಾಲ ಚಂದ್ರ*

ಸೆಪ್ಟೆಂಬರ್ 27, 2026

*ಖುತುಬುಲ್ ಆರಿಫೀನ್ ರಾತೀಬ್ ಸಂಘದ ವತಿಯಿಂದ 111ನೇ ವರ್ಷದ ಗ್ರಾಂಡ್ ರಾತೀಬ್ ಮಜ್ಲಿಸ್*

ಸೆಪ್ಟೆಂಬರ್ 27, 2026

*ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.