
ಮಡಿಕೇರಿ ಆ.4 NEWS DESK : ಕುಶಾಲನಗರದ ಅತ್ತೂರಿನ ಜ್ಞಾನಗಂಗಾ ಶಾಲೆಯ ಮೂವರು ಶಿಕ್ಷಕರಿಗೆ ಮೈಸೂರಿನಲ್ಲಿ ಪರೀಕ್ಷಾ ಸ್ಫೂರ್ತಿ ಗುರು ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪರೀಕ್ಷಾ ಸ್ಫೂರ್ತಿ ಫೌಂಡೇಷನ್ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸರಸ್ವತಿ ಪುರಂ ನ ಜೆಎಸ್‍ಎಸ್ ಮಹಿಳಾ ಕಾಲೇಜ್ ನ ನವಜ್ಯೋತಿ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜ್ಞಾನಗಂಗಾ ವಸತಿ ಶಾಲೆಯ ಕನ್ನಡ ಶಿಕ್ಷಕರಾದ ಭಾಸ್ಕರ್ ಹೆಚ್, ಅರುಣ್ ಕುಮಾರ್ ಕೆ.ಇ ಹಾಗೂ ಜಲಾವತಿ ಎ.ಎ ಅವರು ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕರಿಸಿದರು. ಕಳೆದ ವರ್ಷ ನಡೆದ ಸಿಬಿಎಸ್‍ಸಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ತಂದುಕೊಟ್ಟ ಹೆಗ್ಗಳಿಕೆ ಈ ಮೂವರು ಶಿಕ್ಷಕರದ್ದಾಗಿದೆ.









