Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಂಬಿರಂಡ ರಾಖಿ ಪೂವಣ್ಣ ಅವರಿಗೆ ‘ಅಧ್ಯಾಪಕ ಭೂಷಣ’ ಪ್ರಶಸ್ತಿ*
  • *ವಿರಾಜಪೇಟೆಯಲ್ಲಿ ಕಾವೇರಿ ಗಣೇಶೋತ್ಸವ: ಒಗ್ಗಟ್ಟಿನಿಂದ ಹಿಂದೂ ಸಮಾಜ ಬಲಪಡಿಸಲು ಕರೆ*
  • *ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕಾವೇರಿ ಶಾಲೆಯ ವಾಲಿಬಾಲ್ ತಂಡ*
  • *ನಾಪೋಕ್ಲುವಿನ ಸಹಕಾರ ಮಹಿಳಾ ಸಮಾಜದ ವಾರ್ಷಿಕ ಮಹಾಸಭೆ*
  • *ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಆಗ್ರಹ; ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡುವಂತೆ ಡಾ. ಕಾವೇರಪ್ಪ ಒತ್ತಾಯ*
  • *ಇಂದಿರಾನಗರ ಅಂಗನವಾಡಿ ಕೇಂದ್ರದಲ್ಲಿ ‘ಪೋಷಣ್ ಅಭಿಯಾನ’ ಕಾರ್ಯಕ್ರಮ*
  • *ಕಡೋಡಿ ಶ್ರೀ ಮಹಾವಿಷ್ಣು ಸನ್ನಿಧಿಯಲ್ಲಿ ಸೋಣ ತಿಂಗಳ ಕಾಲಾಯ ಸೇವೆ ಸಂಪನ್ನ*
  • *ಮಾದಾಪುರ ಕಾಲೇಜಿನಲ್ಲಿ ಎನ್ನೆಸ್ಸೆಸ್ ಸಂಸ್ಥಾಪನಾ ದಿನ; ಶಿಸ್ತು, ಸೇವಾ ಮನೋಭಾವ ಬೆಳೆಸುವುದು ಎನ್ನೆಸ್ಸೆಸ್ ಗುರಿ: ಪ್ರಾಂಶುಪಾಲ ಚಂದ್ರ*
  • *ಖುತುಬುಲ್ ಆರಿಫೀನ್ ರಾತೀಬ್ ಸಂಘದ ವತಿಯಿಂದ 111ನೇ ವರ್ಷದ ಗ್ರಾಂಡ್ ರಾತೀಬ್ ಮಜ್ಲಿಸ್*
  • *ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಗದ್ದೆಹಳ್ಳದಲ್ಲಿ ಗದ್ದೆ ಆಟ ಸಮಾರೋಪ : ಟೀಂ ಕಾರ್ಗಿಲ್ ಪ್ರಥಮ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಗದ್ದೆಹಳ್ಳದಲ್ಲಿ ಗದ್ದೆ ಆಟ ಸಮಾರೋಪ : ಟೀಂ ಕಾರ್ಗಿಲ್ ಪ್ರಥಮ*

ಆಗಷ್ಟ್ 4, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಸುಂಟಿಕೊಪ್ಪ ಆ.5 NEWS DESK : ಯಾವುದೇ ಒಂದು ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಿ ಹೊರಹೊಮ್ಮಲು ಕ್ರೀಡಾಕೂಟ ಪ್ರಮುಖ ಸಾಧನ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹೇಳಿದ್ದಾರೆ. ಸುಂಟಿಕೊಪ್ಪ ಗದ್ದೆಹಳ್ಳದ ವೈ.ಎಂ.ಕರುಂಬಯ್ಯ ಅವರ ಗದ್ದೆಯಲ್ಲಿ ಪ್ರಪಥಮ ಬಾರಿಗೆ ಆಯೋಜಿತವಾಗಿದ್ದ “ಗದ್ದೆಹಳ್ಳದಲ್ಲಿ ಗದ್ದೆ ಆಟ ಮಳೆಗಾಲದ ಹಬ್ಬ 2025” ರ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಭತ್ತದ ಬೇಸಾಯ ಹಿನ್ನಡೆ ಕಂಡಿರುವ ಈ ದಿನಗಳಲ್ಲಿ ಹಿರಿಯರಾದ ವೈ.ಎಂ.ಕರುಂಬಯ್ಯ ಅವರು ಯುವಜನತೆ ಮಹಿಳೆಯರು, ಪುರುಷರು, ಮತ್ತು ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಏಕತೆ, ಪದ್ಧತಿ, ಪರಂಪರೆ ಮತ್ತು ಸಮಾಜದ ಒಗ್ಗಟ್ಟನ್ನು ಕಾಪಾಡಿಕೊಳ್ಳುವ ಧ್ಯೇಯ ವಾಕ್ಯದೊಂದಿಗೆ ಈ ಹಬ್ಬವನ್ನು ಆಯೋಜಿಸಿದ್ದು, ಅತ್ಯಂತ ಮಹತ್ವ ಪೂರ್ಣವಾಗಿದೆ ಪ್ರಶಂಸಿದರು. ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಸಮಾಜ ಸರ್ವಜನಾಂಗದ ಶಾಂತಿಯ ತೋಟವಾಗಿ ಹೊರಹೊಮ್ಮುತ್ತದೆ ಎಂದು ಹೇಳಿದರು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಕೆಸರುಗದ್ದೆ ಕ್ರೀಡಾಕೂಟ ಎಂಬುದು ಪ್ರಕೃತಿ ಮಣ್ಣು ಚಿಕಿತ್ಸೆಯಾಗಿದ್ದು, ನಮ್ಮ ಹಿರಿಯರು ಆಯಾಕಾಲಘಟ್ಟದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯುತ್ತಮ ಚಿಕಿತ್ಸಾ ಕ್ರಮಗಳನ್ನು ಕಂಡುಕೊಂಡಿದ್ದರು. ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಜಾತಿ, ಮತ, ಜನಾಂಗ ನಡುವೆ ವಿವಿಧತೆಯಲ್ಲಿ ಏಕತೆಯನ್ನು ತರಲು ಕ್ರೀಡಾಕೂಟ ಪ್ರಬಲ ಸಾಧನ ಎಂದು ಅಪ್ಪಚ್ಚು ರಂಜನ್ ಬಣ್ಣಿಸಿದರು. ಹಿರಿಯರಾದ ವೈ.ಎಂ.ಕರುಂಬಯ್ಯ ಮಾತನಾಡಿ, ಗದ್ದೆಹಳ್ಳದಲ್ಲಿ ಗದ್ದೆಆಟ ನಿರಂತರವಾಗಿ ನಡೆಯಲು ನಾವೆಲ್ಲಾರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಇದೇ ಪರಿಸರದಿಂದ ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಆಟಗಾರ್ತಿಯಾಗಿ ಪಟ್ಟೆಮನೆ ನವನಿತ ಉದಯಕುಮಾರ್ ಹೊರಮ್ಮಿದ್ದನ್ನು ಅಪ್ಪಚ್ಚು ರಂಜನ್ ಸ್ಮರಿಸಿದರಲ್ಲದೆ ಈ ಕ್ರೀಡಾಕೂಟದ ಕ್ರೀಡಾ ಪ್ರತಿಭೆಗಳು ಹೊರ ಬರಲು ಮುನ್ನುಡಿ ಬರೆಯಲು ಎಂದು ಆಶೀಸಿದರು. ಕಾರ್ಯಕ್ರಮದ ಆಯೋಜಕರುಗಳಾದ ನಿಡ್ಯಮನೆ ತೃಶಲ್ ಸನ್ಮಾನ್, ಪಟ್ಟೆಮನೆ ಹರ್ಷ, ಬೈಮನೆ ಚರಣ್, ಪಟ್ಟೆಮನೆ ಚರಣ್, ಮೀನಾ ಚೇತನ್, ಪಟ್ಟೆಮನೆ ಹರ್ಷ, ಗಹನ ಪಾರ್ಥ, ಪವಿತ್ರ ದಿವಾಕರ್, ಆರ್.ರಮೇಶ್ ಪಿಳ್ಳೆ,  ಭಾರ್ಗವ, ಪಾರ್ಥ ಎ.ಬಿ., ಸುಮನ ಎನ್.ಎಂ, ತೀರ್ಪುಗಾರರಾಗಿ ಚಂದ್ರಶೇಖರ್ ಪೂಜಾರಿ, ಮಂಜು, ಕುಸುಮ, ಮೋಹನ (ಮಹೇಂದ್ರ) ಸೇರಿದಂತೆ ಮತ್ತಿತರರು ಇದ್ದರು. ಸಮಾರಂಭದ ವೇದಿಕೆಯಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯೆ ಮಂಜುಳ (ರಾಸಥಿ), ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಆಟಗಾರ್ತಿ ಪಟ್ಟೆಮನೆ ನವನೀತ ಮತ್ತಿತರರು ಇದ್ದರು.  ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ 8 ಪುರುಷರ ವಿಭಾಗದಲ್ಲಿ ಟೀಂ ಕಾರ್ಗಿಲ್ ಪ್ರಥಮ ಹಾಗೂ ಗದ್ದೆಹಳ್ಳದ ಟೀಂ ಡಾಲ್ಪಿನ್ ತಂಡ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ 4 ತಂಡಗಳು ಭಾಗವಹಿಸಿದ್ದು ಗದ್ದೆಹಳ್ಳ ಮಹಿಳೆಯರು ಪ್ರಥವi ಹಾಗೂ ದ್ವಿತೀಯ ಸ್ಥಾನವನ್ನು ಬಾಳೆಕಾಡು ತಂಡದವರು ಪಡೆದುಕೊಂಡರು. ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಪಟುಗಳಿಗೆ ಓಟದ ಸ್ಪರ್ದೆ, ರಿಲೇ ಓಟ, ಹಗ್ಗ ಜಗ್ಗಾಟ, ಫನ್‍ಗೇಮ್ಸ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿದ ಸ್ಪರ್ಧಿಗಳಿಗೆ ಮತ್ತು ತಂಡದವರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

Follow us Follow us
Share. WhatsApp Facebook Twitter Email Telegram Copy Link

Related Posts

*ಕಂಬಿರಂಡ ರಾಖಿ ಪೂವಣ್ಣ ಅವರಿಗೆ ‘ಅಧ್ಯಾಪಕ ಭೂಷಣ’ ಪ್ರಶಸ್ತಿ*

ಸೆಪ್ಟೆಂಬರ್ 27, 2026

*ವಿರಾಜಪೇಟೆಯಲ್ಲಿ ಕಾವೇರಿ ಗಣೇಶೋತ್ಸವ: ಒಗ್ಗಟ್ಟಿನಿಂದ ಹಿಂದೂ ಸಮಾಜ ಬಲಪಡಿಸಲು ಕರೆ*

ಸೆಪ್ಟೆಂಬರ್ 27, 2026

*ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕಾವೇರಿ ಶಾಲೆಯ ವಾಲಿಬಾಲ್ ತಂಡ*

ಸೆಪ್ಟೆಂಬರ್ 27, 2026

*ವಿರಾಜಪೇಟೆಯಲ್ಲಿ ಕಾವೇರಿ ಗಣೇಶೋತ್ಸವ: ಒಗ್ಗಟ್ಟಿನಿಂದ ಹಿಂದೂ ಸಮಾಜ ಬಲಪಡಿಸಲು ಕರೆ*

ಸೆಪ್ಟೆಂಬರ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಸೆ.27: ಪುಣ್ಯಭೂಮಿಯ ಶಕ್ತಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಅರಿತು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬರ…

*ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕಾವೇರಿ ಶಾಲೆಯ ವಾಲಿಬಾಲ್ ತಂಡ*

ಸೆಪ್ಟೆಂಬರ್ 27, 2026

*ನಾಪೋಕ್ಲುವಿನ ಸಹಕಾರ ಮಹಿಳಾ ಸಮಾಜದ ವಾರ್ಷಿಕ ಮಹಾಸಭೆ*

ಸೆಪ್ಟೆಂಬರ್ 27, 2026

*ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಆಗ್ರಹ; ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡುವಂತೆ ಡಾ. ಕಾವೇರಪ್ಪ ಒತ್ತಾಯ*

ಸೆಪ್ಟೆಂಬರ್ 27, 2026

*ಇಂದಿರಾನಗರ ಅಂಗನವಾಡಿ ಕೇಂದ್ರದಲ್ಲಿ ‘ಪೋಷಣ್ ಅಭಿಯಾನ’ ಕಾರ್ಯಕ್ರಮ*

ಸೆಪ್ಟೆಂಬರ್ 27, 2026

*ಕಡೋಡಿ ಶ್ರೀ ಮಹಾವಿಷ್ಣು ಸನ್ನಿಧಿಯಲ್ಲಿ ಸೋಣ ತಿಂಗಳ ಕಾಲಾಯ ಸೇವೆ ಸಂಪನ್ನ*

ಸೆಪ್ಟೆಂಬರ್ 27, 2026

*ಮಾದಾಪುರ ಕಾಲೇಜಿನಲ್ಲಿ ಎನ್ನೆಸ್ಸೆಸ್ ಸಂಸ್ಥಾಪನಾ ದಿನ; ಶಿಸ್ತು, ಸೇವಾ ಮನೋಭಾವ ಬೆಳೆಸುವುದು ಎನ್ನೆಸ್ಸೆಸ್ ಗುರಿ: ಪ್ರಾಂಶುಪಾಲ ಚಂದ್ರ*

ಸೆಪ್ಟೆಂಬರ್ 27, 2026

*ಖುತುಬುಲ್ ಆರಿಫೀನ್ ರಾತೀಬ್ ಸಂಘದ ವತಿಯಿಂದ 111ನೇ ವರ್ಷದ ಗ್ರಾಂಡ್ ರಾತೀಬ್ ಮಜ್ಲಿಸ್*

ಸೆಪ್ಟೆಂಬರ್ 27, 2026

*ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.