
ಮಡಿಕೇರಿ ಆ.4 NEWS DESK : ಮಡಿಕೇರಿ ನಗರದ ರಾಣಿಪೇಟೆಯ ಮುನೇಶ್ವರ ಯುವಕ ಸಂಘದ ವತಿಯಿಂದ ಗಾಂಧಿ ಮೈದಾನದಲ್ಲಿ ನಡೆದ 2ನೇ ವರ್ಷದ 4 ಲೈನ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಮ್ ಫ್ಲ್ಯಾಶ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಡಿ.ಕೆ.ಬಾಯ್ಸ್ ಬಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಸಂತು ಮ್ಯಾಕ್ಸ್ ವೆಲ್ ಬೆಸ್ಟ್ ಬ್ಯಾಟ್ಸ್‍ಮನ್, ಮ್ಯಾನ್ ಆಫ್ ದಿ ಮ್ಯಾಚ್, ರಕ್ಷಿತ್ ಬೆಸ್ಟ್ ಬೌಲರ್ ಹಾಗೂ ಪುನೀತ್ ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿ ಪಡೆದರು. ಮುನೇಶ್ವರ ಯುವಕ ಸಂಘದ ಅಧ್ಯಕ್ಷ ಅಜಿತ್ ಹೆಚ್.ಹೆಚ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹದ ಮಾತುಗಳನ್ನಾಡಿದರು. ಪ್ರಥಮ ಬಹುಮಾನ ರೂ.15 ಸಾವಿರ ಮತ್ತು ದ್ವಿತೀಯ ಬಹುಮಾನ ರೂ.10 ಸಾವಿರ ನೀಡಲಾಯಿತು. ನಗರಸಭಾ ಅಧ್ಯಕ್ಷೆ ಪಿ.ಕಲಾವತಿ, ಸದಸ್ಯ ಮುದ್ದುರಾಜು ಬಿ.ಎನ್, ಮುನೇಶ್ವರ ಯುವಕ ಸಂಘದ ಕಾರ್ಯದರ್ಶಿ ಶ್ರೇಯಸ್ ಹೆಚ್.ಎಲ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.









