Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಆ.8 ರಂದು ಕೊಡಗು ಜಿಲ್ಲಾ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು ಘಟಕದ ಪದಗ್ರಹಣ : ಆದರ್ಶ ಸೇವಾ ರತ್ನ ಪ್ರಶಸ್ತಿ ಪ್ರದಾನ*
  • *ಕೆ.ನಿಡುಗಣೆ ಗ್ರಾಮದ ಸರ್ಕಾರಿ ಗೋಶಾಲೆಗೆ ಸಚಿವ ಪಿ.ಎಂ.ನರೇಂದ್ರಸ್ವಾಮಿ ಭೇಟಿ : ಅಚ್ಚುಕಟ್ಟು ನಿರ್ವಹಣೆಗೆ ಮೆಚ್ಚುಗೆ*
  • *ಚೆಂಬು ಗ್ರಾಮದಲ್ಲಿ ಉಚಿತ ಇಡಿಪಿ ತರಬೇತಿ*
  • *ಮಡಿಕೇರಿಯಲ್ಲಿ ಸ್ತನ್ಯಪಾನ ಸಪ್ತಾಹ : ತಾಯಿಯ ಹಾಲಿನ ಮಹತ್ವದ ಕುರಿತು ಜಾಗೃತಿ*
  • *ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಕ್ಕೆ ಸಚಿವ ಪಿ.ಎಂ.ನರೇಂದ್ರಸ್ವಾಮಿ ಭೇಟಿ : ವಿಶೇಷ ಪೂಜೆ*
  • *ಕೊಡಗು ವಿದ್ಯಾಲಯದಲ್ಲಿ ಅಂತರ್-ಶಾಲಾ ಬೆಳ್ಳಿ ಹಬ್ಬದ ಚೆಸ್ ಪಂದ್ಯಾವಳಿ ಉದ್ಘಾಟನೆ* 
  • *ಸಂಘಟನಾ ಸೃಜನ್ ಅಭಿಯಾನ್ ಮೂಲಕ ಕಾಂಗ್ರೆಸ್ ಸಂಘಟನೆ : ಜಿಲ್ಲಾಧ್ಯಕ್ಷರ ಆಯ್ಕೆಗೆ ಅಭಿಪ್ರಾಯ ಸಂಗ್ರಹ*
  • *ಎಲ್ಲಾ ರಾಜಕೀಯ ಪಕ್ಷಗಳಿಂದ ಕೊಡಗಿನ ಕಡೆಗಣನೆ : ಕೊಡಗು ಗೌಡ ಹಿತ ರಕ್ಷಣಾ ವೇದಿಕೆ ಅಸಮಾಧಾನ*
  • *ಸಂವಿಧಾನದ ಬಗ್ಗೆ ಬದ್ಧತೆ ಇದ್ದರೆ ಮೀಸಲಾತಿ ಕಾನೂನನ್ನು 9ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಿ : ಪ್ರಧಾನಿಗೆ ಸವಾಲು*
  • *ವಿಶ್ವ ಆದಿಮಸಂಜಾತರ ಹಕ್ಕುಗಳ ದಿನ : ಸೆ.9 ರಂದು ಸಿಎನ್‌ಸಿ ಸತ್ಯಾಗ್ರಹ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರಾಜಾಸೀಟ್ ನಲ್ಲಿ ‘ಗ್ಲಾಸ್ ಬ್ರಿಡ್ಜ್’ ಮತ್ತು ‘ಫುಡ್ ಕೋರ್ಟ್’ ಯೋಜನೆ : ನಗರಸಭೆಯಲ್ಲಿ ಪರ, ವಿರೋಧ ವಾಗ್ವಾದ, ಕೋಲಾಹಲ*  
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರಾಜಾಸೀಟ್ ನಲ್ಲಿ ‘ಗ್ಲಾಸ್ ಬ್ರಿಡ್ಜ್’ ಮತ್ತು ‘ಫುಡ್ ಕೋರ್ಟ್’ ಯೋಜನೆ : ನಗರಸಭೆಯಲ್ಲಿ ಪರ, ವಿರೋಧ ವಾಗ್ವಾದ, ಕೋಲಾಹಲ*  

ಆಗಷ್ಟ್ 4, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಆ.4 : ಮಡಿಕೇರಿಯ ರಾಜಾಸೀಟ್‌ನಲ್ಲಿ ‘ಗ್ಲಾಸ್ ಬ್ರಿಡ್ಜ್’ ಮತ್ತು ‘ಫುಡ್ ಕೋರ್ಟ್’ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಗಳು ನಡೆದಿದ್ದರು, ನಗರಸಭೆಯ ಗಮನಕ್ಕೆ ಬಾರದ ಬಗ್ಗೆ ತುರ್ತು ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಈ ಬಗ್ಗೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ ಮತ್ತೆ ಸಭೆ ನಡೆಸಿ ವಿಸ್ತೃತ ಚರ್ಚೆ ನಡೆಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭದಲ್ಲೆ, ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್ ಸೇರಿದಂತೆ ನಾಮನಿರ್ದೇಶಿತ ಸದಸ್ಯರು, ಗ್ಲಾಸ್ ಬ್ರಿಡ್ಜ್ ಮತ್ತು ಫುಡ್ ಕೋರ್ಟ್ ಯೋಜನೆಯನ್ನು ಸರ್ಕಾರ ರೂಪಿಸಿದೆ. ಇದಕ್ಕೆ ವಿರೋಧ ಮಾಡುವ ಉದ್ದೇಶದಿಂದಲೇ ತುರ್ತು ಸಭೆ ಕರೆಯಲಾಗಿದೆ. ಈ ಸಭೆಯನ್ನು ಯಾವುದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ ಎಂದು ವೇದಿಕೆಯ ಮುಂಭಾಗಕ್ಕೆ ಬಂದು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಕಾಂಗ್ರೆಸ್ ಸದಸ್ಯರ ವಿರೋಧಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು, ನಗರಸಭೆಯ ಗಮನಕ್ಕೆ ಬಾರದೆ ಬಹುಕೋಟಿ ಯೋಜನೆಯನ್ನು ಜಾರಿ ಗೊಳಿಸಲಾಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ಸಭೆ ನಡೆಯಲೇಬೇಕೆಂದು ಪಟ್ಟು ಹಿಡಿಯುವ ಮೂಲಕ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಅಧ್ಯಕ್ಷರು, ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ಸದಸ್ಯರಿಗೆ ಅವರವರ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ಕೊಡುವುದಾಗಿ ತಿಳಿಸುವುದರೊಂದಿಗೆ ಸದಸ್ಯರು ತಮ್ಮ ತಮ್ಮ ಆಸನಗಳಿಗೆ ಮರಳಿದರು. ಚರ್ಚೆ ಸಂದರ್ಭ ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್, ಸರ್ಕಾರದ ಯೋಜನೆಯನ್ನು ಸರ್ಕಾರದ ಭಾಗವಾದ ನಗರಸಭೆ ವಿರೋಧಿಸುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತ್ಯುತ್ತರ ನೀಡಿದ ಉಪಾಧ್ಯಕ್ಷ ಮಹೇಶ್ ಜೈನಿ, ಉದ್ದೇಶಿತ ಯೋಜನೆಗೆ ಮಾಜಿ ಸಚಿವ ಎಂ.ಸಿ.ನಾಣಯ್ಯ, ಸಂಸದ ಯದುವೀರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಯೋಜನೆಯಿಂದ ನಿಮಗೆ ವೈಯಕ್ತಿಕ ಲಾಭವಿದೆಯೇ ಎಂದು ಪ್ರಶ್ನಿಸಿದರು. ಬಿ.ವೈ.ರಾಜೇಶ್ ಮಾತನಾಡಿ, ಗ್ಲಾಸ್ ಬ್ರಿಡ್ಜ್ ವಿರೋಧಕ್ಕಾಗಿಯಷ್ಟೆ ಕರೆದಿರುವ ತುರ್ತು ಸಭೆ. ಇದರೊಂದಿಗೆ ಮತ್ತೆರಡು ವಿಷಯಗಳನ್ನು ಸೇರಿಸಲಾಗಿದೆಯಷ್ಟೆ. ಯೋಜನೆಯ ಬಗ್ಗೆ ಮಾಹಿತಿ ಇಲ್ಲದೆ, ತುರ್ತು ಸಭೆ ಕರೆದದ್ದು ಹೇಗೆ, ನಿಮ್ಮ ಸ್ವಂತ ಚಿಂತನೆ ಇಲ್ಲವೆ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದಾಗ ಒಂದಷ್ಟು ಮಾತಿನ ಚಕಮಕಿ ನಡೆಯಿತು. ಎಸ್‌ಡಿಪಿಐ ಸದಸ್ಯ ಮನ್ಸೂರ್ ಮಾತನಾಡಿ, ಅಗತ್ಯ ಮಾಹಿತಿ ಇಲ್ಲವೆಂದಾದರೆ ಗ್ಲಾಸ್ ಬ್ರಿಡ್ಜ್ ಮತ್ತು ಫುಡ್ ಕೋರ್ಟ್ ವಿಚಾರ ಸಭೆಗೆ ಯಾಕೆ ತಂದಿದ್ದೀರ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಕಲಾವತಿ, ಇತ್ತೀಚಿನ ದಿನಗಳಲ್ಲಿ ಮುಂಗಾರಿನ ಅವಧಿಯಲ್ಲಿ ಬರೆ ಕುಸಿತ ಮೊದಲಾದವು ಸಂಭವಿಸುತ್ತಿದೆ. ರಾಜಾಸೀಟಿನಲ್ಲಿ ಗ್ಲಾಸ್ ಬ್ರಿಡ್ಜ್ ಬರುವುದರಿಂದ ತೊಂದರೆಯಾಗಬಹುದು, ಎಲ್ಲರಿಗೂ ಒಳ್ಳೆಯಯದಾಗಲಿ ಎನ್ನುವುದು ನಮ್ಮ ಉದ್ದೇಶ, ಈ ಕಾರಣಕ್ಕೆ ತುರ್ತು ಸಭೆ ಕರೆದಿರುವುದಾಗಿ ಸ್ಪಷ್ಟಪಡಿಸಿದರು. ಎಸ್‌ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ರಾಜಾಸೀಟಿನಲ್ಲಿ ಜಿಪ್ ಲೈನ್ ಆರಂಭದ ಸಂದರ್ಭ ನಗರಸಭೆಯ ಗಮನಕ್ಕೆ ತರಲಿಲ್ಲ, ಉದ್ಘಾಟನೆಗೆ ಮಾತ್ರ ಕರೆಯಲಾಗಿತ್ತು. ಇದೀಗ ಗ್ಲಾಸ್ ಬ್ರಿಡ್ಜ್ ಬಗ್ಗೆಯೂ ನಗರಸಭೆಗೆ ಮಾಹಿತಿ ನೀಡಿಲ್ಲ. ಈ ಹಿನ್ನೆಲೆ ಗ್ಲಾಸ್ ಬ್ರಿಡ್ಜ್ ಬೇಡವೆಂದಾದರೆ ಜಿಪ್ ಲೈನ್ ಸಹ ಬೇಡವೆಂದು ನಿರ್ಧಾರ ಮಾಡುವಂತೆ ಒತ್ತಾಯಿಸಿದರು. ಬಿಜೆಪಿ ಸದಸ್ಯ ಉಮೇಶ್ ಸುಬ್ರಮಣಿ ಮಾತನಾಡಿ, ರಾಜಾಸೀಟ್ ಪಕ್ಕದಲ್ಲೆ ಇರುವ ಇಂದಿರಾನಗರ, ಚಾಮುಂಡೇಶ್ವರಿ ನಗರಗಳು ಮಳೆಯಿಂದ ಸಂಕಷ್ಟಕ್ಕೆ ಸಿಲುಕುವ ಸೂಕ್ಷ್ಮ ವಲಯಗಳು. ಮುಂಗಾರಿನ ಅವಧಿಯಲ್ಲಿ ಮನೆಗಳನ್ನು ತೆರವುಗೊಳಿಸುವಂತೆ ಹಲವರಿಗೆ ನೋಟಿಸನ್ನು ಹಿಂದೆ ನೀಡಲಾಗಿದೆ. ಇದರ ಪಕ್ಕದಲ್ಲೆ ಇರುವ ರಾಜಾಸೀಟು ಸಹ ಬೆಟ್ಟ ಪ್ರದೇಶವೆ ಆಗಿದೆ. ಅಲ್ಲಿ ಗ್ಲಾಸ್ ಬ್ರಿಡ್ಜ್ ಯೋಜನೆ ಜಾರಿ ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದರ ನಿರ್ಮಾಣದಿಂದ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಈ ಸಂದರ್ಭ ಉದ್ಭವಿಸುವ ಪಾರ್ಕಿಂಗ್ ಸಮಸ್ಯೆ ಬಗೆಹರಿಸುವವರಾರು. ಸರ್ಕಾರಕ್ಕೆ ಲಾಭವಾಗುತ್ತದೆ ಎನ್ನುವ ಕಾರಣಕ್ಕೆ ಯೋಜನೆ ಬೆಂಬಲಿಸಲು ಬರುವುದಿಲ್ಲ, ನಮ್ಮ ತೀವ್ರ ವಿರೋಧವಿದೆ ಎಂದರು. ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ, ಶಾಸಕರ ಪ್ರಯತ್ನದಿಂದ ಕೋಟ್ಯಾಂತರ ವೆಚ್ಚದ ಗ್ಲಾಸ್ ಬ್ರಿಡ್ಜ್ ಬರುತ್ತಿದೆ ಎಂದರೆ ಸಂತೋಷ. ಇದನ್ನು ರಾಜಾಸೀಟಿನಲ್ಲಿ ನಿರ್ಮಿಸಲು ಸಾಧ್ಯವಿಲ್ಲ ಎಂದಾದರೆ ಬೇರೆ ಕಡೆ ಮಾಡಲಿ ಎಂದು ಸಲಹೆ ನೀಡಿದರು. ಯೋಜನೆಯ ಜಾರಿಯ ಹಂತದಲ್ಲಿ ನಗರಸಭೆಯ ಕನಿಷ್ಟ ಅಭಿಪ್ರಾಯವನ್ನು ಪಡೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸುದೀರ್ಘ ಚರ್ಚೆಯ ಬಳಿಕ ನಗರಸಭೆಯ ಗಮನಕ್ಕೆ ತಾರದೆ ಯೋಜನೆಯ ಅನುಷ್ಟಾನಕ್ಕೆ ಮುಂದಾಗಿರುವುದಕ್ಕೆ ವಿರೋಧವನ್ನು ವ್ಯಕ್ತಪಡಿಸುವ ಮತ್ತು ಅಗತ್ಯ ಮಾಹಿತಿಯನ್ನು ಪಡೆದ ಬಳಿಕ ಮತ್ತೆ ಸಭೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಆ.8 ರಂದು ಕೊಡಗು ಜಿಲ್ಲಾ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು ಘಟಕದ ಪದಗ್ರಹಣ : ಆದರ್ಶ ಸೇವಾ ರತ್ನ ಪ್ರಶಸ್ತಿ ಪ್ರದಾನ*

ಆಗಷ್ಟ್ 6, 2026

*ಕೆ.ನಿಡುಗಣೆ ಗ್ರಾಮದ ಸರ್ಕಾರಿ ಗೋಶಾಲೆಗೆ ಸಚಿವ ಪಿ.ಎಂ.ನರೇಂದ್ರಸ್ವಾಮಿ ಭೇಟಿ : ಅಚ್ಚುಕಟ್ಟು ನಿರ್ವಹಣೆಗೆ ಮೆಚ್ಚುಗೆ*

ಆಗಷ್ಟ್ 6, 2026

*ಚೆಂಬು ಗ್ರಾಮದಲ್ಲಿ ಉಚಿತ ಇಡಿಪಿ ತರಬೇತಿ*

ಆಗಷ್ಟ್ 6, 2026

*ಕೆ.ನಿಡುಗಣೆ ಗ್ರಾಮದ ಸರ್ಕಾರಿ ಗೋಶಾಲೆಗೆ ಸಚಿವ ಪಿ.ಎಂ.ನರೇಂದ್ರಸ್ವಾಮಿ ಭೇಟಿ : ಅಚ್ಚುಕಟ್ಟು ನಿರ್ವಹಣೆಗೆ ಮೆಚ್ಚುಗೆ*

ಆಗಷ್ಟ್ 6, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಆ.6 NEWS DESK : ನಗರದ ಕೆ.ನಿಡುಗಣೆ ಗ್ರಾಮದ ಸರ್ಕಾರಿ ಗೋಶಾಲೆಗೆ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ ಅವರು ಭೇಟಿ ನೀಡಿ…

*ಚೆಂಬು ಗ್ರಾಮದಲ್ಲಿ ಉಚಿತ ಇಡಿಪಿ ತರಬೇತಿ*

ಆಗಷ್ಟ್ 6, 2026

*ಮಡಿಕೇರಿಯಲ್ಲಿ ಸ್ತನ್ಯಪಾನ ಸಪ್ತಾಹ : ತಾಯಿಯ ಹಾಲಿನ ಮಹತ್ವದ ಕುರಿತು ಜಾಗೃತಿ*

ಆಗಷ್ಟ್ 6, 2026

*ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಕ್ಕೆ ಸಚಿವ ಪಿ.ಎಂ.ನರೇಂದ್ರಸ್ವಾಮಿ ಭೇಟಿ : ವಿಶೇಷ ಪೂಜೆ*

ಆಗಷ್ಟ್ 6, 2026

*ಕೊಡಗು ವಿದ್ಯಾಲಯದಲ್ಲಿ ಅಂತರ್-ಶಾಲಾ ಬೆಳ್ಳಿ ಹಬ್ಬದ ಚೆಸ್ ಪಂದ್ಯಾವಳಿ ಉದ್ಘಾಟನೆ* 

ಆಗಷ್ಟ್ 6, 2026

*ಸಂಘಟನಾ ಸೃಜನ್ ಅಭಿಯಾನ್ ಮೂಲಕ ಕಾಂಗ್ರೆಸ್ ಸಂಘಟನೆ : ಜಿಲ್ಲಾಧ್ಯಕ್ಷರ ಆಯ್ಕೆಗೆ ಅಭಿಪ್ರಾಯ ಸಂಗ್ರಹ*

ಆಗಷ್ಟ್ 6, 2026

*ಎಲ್ಲಾ ರಾಜಕೀಯ ಪಕ್ಷಗಳಿಂದ ಕೊಡಗಿನ ಕಡೆಗಣನೆ : ಕೊಡಗು ಗೌಡ ಹಿತ ರಕ್ಷಣಾ ವೇದಿಕೆ ಅಸಮಾಧಾನ*

ಆಗಷ್ಟ್ 6, 2026

*ಸಂವಿಧಾನದ ಬಗ್ಗೆ ಬದ್ಧತೆ ಇದ್ದರೆ ಮೀಸಲಾತಿ ಕಾನೂನನ್ನು 9ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಿ : ಪ್ರಧಾನಿಗೆ ಸವಾಲು*

ಆಗಷ್ಟ್ 6, 2026

*ವಿಶ್ವ ಆದಿಮಸಂಜಾತರ ಹಕ್ಕುಗಳ ದಿನ : ಸೆ.9 ರಂದು ಸಿಎನ್‌ಸಿ ಸತ್ಯಾಗ್ರಹ*

ಆಗಷ್ಟ್ 6, 2026

**ದಕ್ಷಿಣ ಕೊಡಗಿನಲ್ಲಿ ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ : ಶಾಸಕರು ತನಿಖೆಗೆ ಒಪ್ಪಿಸಲಿ : ಬಿಜೆಪಿ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯ**

ಆಗಷ್ಟ್ 6, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.