
ಮಡಿಕೇರಿ ಆ.5 NEWS DESK : ಭಾರತ ಮುಖ್ಯ ಹಾಕಿ ತಂಡದಲ್ಲಿ ಕೊಡಗಿನ ಆಟಗಾರ ಚಂದೂರ ಬಿ.ಪೂವಣ್ಣ ಅವರು ಆಯ್ಕೆಯಾಗಿದ್ದಾರೆ. ಹಾಕಿ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿರುವ ಭಾರತೀಯ ತಂಡವನ್ನು ಪ್ರಕಟಿಸಿದ್ದು, ಕರ್ನಾಟಕ ರಾಜ್ಯದಿಂದ ತಂಡದಲ್ಲಿ ಪೂವಣ್ಣ ಮಾತ್ರ ಸ್ಥಾನ ಪಡೆಯುವ ಮೂಲಕ ಕೊಡಗಿಗೆ ಕೀರ್ತಿ ತಂದಿದ್ದಾರೆ. ಇತ್ತೀಚೆಗೆ ಪೂವಣ್ಣ ಯುರೋಪ್ ಪ್ರವಾಸ ಕೈಗೊಂಡಿದ್ದ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದರು. ಜೂನಿಯರ್ ಇಂಡಿಯಾ ತಂಡವನ್ನು ಈ ಹಿಂದೆ ಪ್ರತಿನಿಧಿಸಿದ್ದರು. ಪೂವಣ್ಣ ಮೂಲತಃ ಕಂಡಂಗಾಲದ ನಿವಾಸಿ ಚಂದೂರ ಎಸ್.ಪ್ರಭು (ಬಾಬಿ) ಹಾಗೂ ಅನಿಲ (ತಾಮನೆ-ಮಲ್ಲೇಂಗಡ) ದಂಪತಿಯ ಪುತ್ರ.








