Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕೊಡಗಿನಲ್ಲೂ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರಕ್ಕೆ ಬೆಂಬಲ : ಪ್ರಯಾಣಿಕರ ಸಂಖ್ಯೆ ವಿರಳ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕೊಡಗಿನಲ್ಲೂ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರಕ್ಕೆ ಬೆಂಬಲ : ಪ್ರಯಾಣಿಕರ ಸಂಖ್ಯೆ ವಿರಳ

ಆಗಷ್ಟ್ 5, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ NEWS DESK ಆ.5 : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ನೌಕರರು ರಾಜ್ಯವ್ಯಾಪಿ ನಡೆಸುತ್ತಿರುವ ಮುಷ್ಕರಕ್ಕೆ ಕೊಡಗು ಜಿಲ್ಲೆಯಲ್ಲೂ ಬೆಂಬಲ ವ್ಯಕ್ತವಾಯಿತು. ಇಂದು ಬೆಳಿಗ್ಗೆ 8 ಗಂಟೆಯ ನಂತರ ಸಂಚಾರವನ್ನು ಸ್ಥಗಿತಗೊಳಿಸಿದ ಬಸ್ ಗಳು ಬಸ್ ನಿಲ್ದಾಣಗಳಲ್ಲೇ ಸಾಲುಗಟ್ಟಿ ನಿಂತವು. ಬಸ್ ಮುಷ್ಕರದ ಕುರಿತು ಮೊದಲೇ ಮಾಹಿತಿ ಇದ್ದ ಕಾರಣ ಬಸ್ ನಿಲ್ದಾಣಗಳಲ್ಲಿ ವಿರಳ ಸಂಖ್ಯೆಯ ಪ್ರಯಾಣಿಕರಿದ್ದರು. ಮಾಹಿತಿ ಇಲ್ಲದ ಪ್ರಯಾಣಿಕರು ವಿವಿಧ ಊರಿಗಳಿಗೆ ತೆರಳಲು ಕಾದು ಕುಳಿತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪುತ್ತೂರು ಡಿಪೋದ ಮಡಿಕೇರಿ ಘಟಕದ ಮೂಲಕ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಗೆ ಒಟ್ಟು 130 ಬಸ್ ಮಾರ್ಗಗಳಿದ್ದು, ಈ ಪೈಕಿ 64 ಮಾರ್ಗಗಳು ಮಡಿಕೇರಿ ಘಟಕದಿಂದ ನಿರ್ವಹಿಸಲಾಗುತ್ತಿದೆ. ಬಸ್ ಸೇವೆ ಬಂದ್ ಹಿನ್ನೆಲೆಯಲ್ಲಿ ಬಹುತೇಕ ಬಸ್‌ಗಳ ಸಂಚಾರ ಸ್ಥಗಿತವಾಗಿತ್ತು. ಹೊರ ಭಾಗಗಳಿಂದ ನಿಲ್ದಾಣಕ್ಕೆ ಆಗಮಿಸಿದ ಬಸ್‌ಗಳು ಸಂಚಾರಿ ನಿಯಂತ್ರಕರಲ್ಲಿ ನೋಂದಾಯಿಸಿಕೊಂಡ ನಂತರ ಇಲ್ಲಿಯೇ ಉಳಿದುಕೊಂಡವು. ಮುಷ್ಕರಕ್ಕೆ ಚಾಲಕರು ಹಾಗೂ ನಿರ್ವಾಹಕರು ಕೈ ಜೋಡಿಸಿದರು. ಖಾಸಗಿ ಮತ್ತು ಸರಕಾರಿ ಒಪ್ಪಂದದಲ್ಲಿ ಸಂಚರಿಸುವ ಪವರ್ ಪ್ಲಸ್ ಬ್ಯಾಟರಿ ಚಾಲಿತ ಬಸ್ ಮಾತ್ರ ಪ್ರಯಾಣಿಕರನ್ನು ತುಂಬಿಕೊಂಡು ಮಡಿಕೇರಿ ನಿಲ್ದಾಣದಿಂದ ಬೆಂಗಳೂರು ಕಡೆಗೆ ತೆರಳಿದವು. ಬಸ್ ಡಿಪೋ ಮತ್ತು ನಿಲ್ದಾಣಗಳಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟಾಗದಂತೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಮುಷ್ಕರದ ಪರಿಣಾಮ ಸರಕಾರಿ ಕಚೇರಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಹಾಜರಾತಿಯ ಕೊರತೆ ಕಂಡು ಬರಲಿಲ್ಲ. *ಖಾಸಗಿ ವಾಹನಗಳಿಗೆ ನಿರಾಶೆ* ಕೆಎಸ್‌ಆರ್‌ಟಿಸಿ ಬಸ್ ಸೇವೆ ಸ್ಥಗಿತವಾಗಿದ್ದ ಹಿನ್ನೆಲೆಯಲ್ಲಿ ಎಲ್ಲಾ ಬಸ್ ನಿಲ್ದಾಣಗಳ ಮೂಲಕ ಖಾಸಗಿ ಬಸ್‌ಗಳು, ಮಿನಿ ಬಸ್, ಮ್ಯಾಕ್ಸಿ ಕ್ಯಾಬ್, ಟೆಂಪೋ ಟ್ರಾವೆಲರ್‌ಗಳಿಗೆ ಪ್ರಯಾಣಿಕರನ್ನು ಕರೆದೊಯ್ಯಲು ಸಾರಿಗೆ ಇಲಾಖೆ ಅವಕಾಶ ಒದಗಿಸಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ಕೂಡ ಕೆಎಸ್‌ಆರ್‌ಟಿಸಿ ನಿಲ್ದಾಣದ ಮುಂಭಾಗ ಮಡಿಕೇರಿ-ಕುಶಾಲನಗರ, ಮಡಿಕೇರಿ-ಸುಳ್ಯ, ಮಡಿಕೇರಿ-ಮೈಸೂರು ಮಾರ್ಗಗಳಲ್ಲಿ ಸಂಚರಿಸಿದವು. ಖಾಸಗಿ ಬಸ್‌ಗಳ ಪ್ರಯಾಣ ದರ ಪ್ರಯಾಣಿಕರಿಗೆ ಸ್ವಲ್ಪ ದುಬಾರಿಯಾಗಿ ಪರಿಣಮಿಸಿದರೂ ಅನಿವಾರ್ಯವಾಗಿ ಪ್ರಯಾಣ ಬೆಳೆಸಿದರು. ಸರಕಾರದ ರಸ್ತೆ ತೆರಿಗೆ ನೀತಿ, ಬಿಡಿ ಭಾಗಗಳ ದುಬಾರಿ ದರ, ಕಾರ್ಮಿಕರು ಹಾಗೂ ವಾಹನ ನಿರ್ವಹಣೆಗಳಿಗೆ ಹೋಲಿಸಿದರೆ ಖಾಸಗಿ ಬಸ್‌ಗಳ ಸೇವೆ ಭಾರೀ ದುಬಾರಿ ಆಗಿರಲಿಲ್ಲ ಎಂದು ತಮ್ಮ ಸೇವೆಯನ್ನು ಖಾಸಗಿ ಬಸ್ ಗಳ ಪ್ರಮುಖರು ಸಮರ್ಥಿಸಿಕೊಂಡರು. ಕೆಎಸ್‌ಆರ್‌ಟಿಸಿ ಬಸ್ ಗಳು ರಸ್ತೆಗಿಳಿಯುವುದಿಲ್ಲ ಎನ್ನುವ ಮಾಹಿತಿ ಮೊದಲೇ ಇದ್ದ ಕಾರಣ ಪ್ರಯಾಣಿಕರು ನಿರೀಕ್ಷಿತ ಪ್ರಮಾಣದಲ್ಲಿ ಬಾರದೆ ಖಾಸಗಿ ವಾಹನಗಳು ನಿರಾಶೆ ಅನುಭವಿಸಿದವು. ಕೆಎಸ್‌ಆರ್‌ಟಿಸಿ ಬಸ್ ಗಳಲ್ಲಿ ಶಕ್ತಿ ಯೋಜನೆಯ ಮೂಲಕ ಉಚಿತ ಸೇವೆ ಪಡೆಯುತ್ತಿರುವ ಮಹಿಳಾ ಪ್ರಯಾಣಿಕರು ಇಂದು ಬಾರದೆ ಇರುವುದು ಕೂಡ ಪ್ರಮುಖ ಕಾರಣವಾಗಿದೆ. ಕೆಎಸ್‌ಆರ್‌ಟಿಸಿಯ ಮಡಿಕೇರಿ ವಿಭಾಗೀಯ ನಿಯಂತ್ರಕ ಈರ್ಸಪ್ಪ ಸುದ್ದಿಗಾರರೊಂದಿಗೆ ಮಾತನಾಡಿ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಲವು ಮಾರ್ಗಗಳಲ್ಲಿ ಬಸ್‌ಗಳ ಸಂಚಾರ ಮುಷ್ಕರದ ನಡುವೆಯೂ ನಡೆದಿದೆ. ಮಡಿಕೇರಿ-ಕುಶಾಲನಗರ ನಡುವೆ ಬಸ್ ಸೇವೆಯನ್ನೂ ಒದಗಿಸಲಾಗಿದೆ. ಗುತ್ತಿಗೆ ಚಾಲಕರು ಮತ್ತು ತರಬೇತಿ ಚಾಲಕರನ್ನು ಕೂಡ ಈ ಮುಷ್ಕರದ ಸಂದರ್ಭ ಬಳಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಕೆಎಸ್‌ಆರ್‌ಟಿಸಿ ಬಸ್ ಸೇವೆ ಸಂಬಂಧ ಅಹಿತಕರ ಘಟನೆಗಳು ನಡೆದಿಲ್ಲ ಎಂದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿಯಲ್ಲಿ ಜಾನಪದ ದಸರಾ ಸಂಭ್ರಮ: ಜಾನಪದ ಕಲಾಪ್ರಕಾರಗಳ ಪ್ರದರ್ಶನಕ್ಕೆ ಮನಸೋತ ಜನತೆ; ಜಾನಪದ ಸಂಸ್ಕೃತಿಯ ಉಳಿವಿಗೆ ಹೆಚ್ಚಿನ ಕಾಳಜಿ ಅಗತ್ಯ: ಶಾಸಕ ಎ.ಎಸ್.ಪೊನ್ನಣ್ಣ ಕರೆ; ಕಲಾವಿದರು ಹಾಗೂ ಜಾನಪದ ವಸ್ತು ಸಂಗ್ರಹಕಾರರಿಗೆ ಸನ್ಮಾನ

ಅಕ್ಟೋಬರ್ 18, 2026

ಕಾವೇರಿ ತೀರ್ಥೋದ್ಭವದಂದು ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅಭಿಮಾನಿ ಬಳಗದಿಂದ ಸೇವಾ ಕಾರ್ಯ : 3 ಸಾವಿರಕ್ಕೂ ಅಧಿಕ ಭಕ್ತರಿಗೆ ಹಣ್ಣು, ತಂಪು ಪಾನೀಯ, ಕಾಫಿ ವಿತರಣೆ

ಅಕ್ಟೋಬರ್ 18, 2026

ಬಲಮುರಿಯಲ್ಲಿ ಇಂದು ಕಾವೇರಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ ಪೂರ್ಣ; ವಿಶೇಷ ಪೂಜೆ, ಕಾವೇರಿ ಮಹಾ ಆರತಿ ಹಾಗೂ ಅನ್ನಸಂತರ್ಪಣೆ ಆಯೋಜನೆ

ಅಕ್ಟೋಬರ್ 18, 2026

ಕಾವೇರಿ ತೀರ್ಥೋದ್ಭವದಂದು ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅಭಿಮಾನಿ ಬಳಗದಿಂದ ಸೇವಾ ಕಾರ್ಯ : 3 ಸಾವಿರಕ್ಕೂ ಅಧಿಕ ಭಕ್ತರಿಗೆ ಹಣ್ಣು, ತಂಪು ಪಾನೀಯ, ಕಾಫಿ ವಿತರಣೆ

ಅಕ್ಟೋಬರ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.18 : ಕಾವೇರಿ ತೀರ್ಥೋದ್ಭವದ ದಿನವಾದ ಶನಿವಾರ ಕಾವೇರಿ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಎ.ಎಸ್.ಪೊನ್ನಣ್ಣ ಹಾಗೂ…

ಬಲಮುರಿಯಲ್ಲಿ ಇಂದು ಕಾವೇರಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ ಪೂರ್ಣ; ವಿಶೇಷ ಪೂಜೆ, ಕಾವೇರಿ ಮಹಾ ಆರತಿ ಹಾಗೂ ಅನ್ನಸಂತರ್ಪಣೆ ಆಯೋಜನೆ

ಅಕ್ಟೋಬರ್ 18, 2026

ಕ್ಲೀನ್ ಕಕ್ಕಬ್ಬೆ ಅಭಿಯಾನ ಯಶಸ್ವಿ: 3,670 ಕೆ.ಜಿ. ತ್ಯಾಜ್ಯ ತೆರವು; ನಾಲಡಿ ಕಸಮುಕ್ತ; ಮರಂದೋಡು ಗ್ರಾಮವೂ ಬಹುತೇಕ ಸ್ವಚ್ಛ

ಅಕ್ಟೋಬರ್ 18, 2026

ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿ: 118 ಕವಿಗಳ ಮಹಾಸಂಗಮ; ಜೆನ್-ಜಿ ಹಾಗೂ ಬಾಲಕವಿಗಳಿಂದ ಕವನ ವಾಚನ; ವಿವಿಧ ಭಾಷೆ, ಸಂಸ್ಕೃತಿಗಳ ಸಾಹಿತ್ಯ ಅಭಿವ್ಯಕ್ತಿಗೆ ವೇದಿಕೆ

ಅಕ್ಟೋಬರ್ 18, 2026

ರಾಜ್ಯಮಟ್ಟದ ಯೋಗ ದಸರಾ ಸ್ಪರ್ಧೆಯಲ್ಲಿ ಸುಮೇಶ್ ಕೆ.ಪಿ.ಗೆ ದ್ವಿತೀಯ ಸ್ಥಾನ; ಪಾಲಿಬೆಟ್ಟದ ಚೆಶೈರ್ ಹೋಮ್ ವಿಶೇಷ ಶಾಲೆಯ ವಿದ್ಯಾರ್ಥಿಗೆ ಬೆಳ್ಳಿ ಪದಕ, ನಗದು ಬಹುಮಾನ

ಅಕ್ಟೋಬರ್ 18, 2026

ತಲಕಾವೇರಿಯಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವ

ಅಕ್ಟೋಬರ್ 17, 2026

ಮೂರ್ನಾಡಿನಲ್ಲಿ ಅ.20ರಂದು 33ನೇ ವರ್ಷದ ಅದ್ದೂರಿ ಆಯುಧ ಪೂಜೆ ಮಹೋತ್ಸವ; ವಾಹನಗಳ ಮೆರವಣಿಗೆ, ಬೊಂಬೆ ಕುಣಿತ ಆಕರ್ಷಣೆ; ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಹಾಗೂ ಮಾಜಿ ಸೈನಿಕರಿಗೆ ಸನ್ಮಾನ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ವಿರಾಜಪೇಟೆಯಲ್ಲಿ ಅ.20ರಂದು ಅದ್ದೂರಿ ಆಯುಧ ಪೂಜೆ: ಬೈಕ್ ಸಾಹಸ ಪ್ರದರ್ಶನ, ಸಂಗೀತ ರಸಮಂಜರಿ ವಿಶೇಷ ಆಕರ್ಷಣೆ

ಅಕ್ಟೋಬರ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.