
ನಾಪೋಕ್ಲು ಆ.6 NEWS DESK : ರೋಟರಿ ಮಿಸ್ಟಿಹಿಲ್ಸ್ ಸಂಸ್ಥೆ ಹಾಗೂ ನಾಪೋಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಮಿಸ್ಟಿ ಹಿಲ್ಸ್ ಇಂಟರಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಇಂಟರಾಕ್ಟ್ ಕ್ಲಬ್ ವಿಶ್ವದಾದ್ಯಂತ ಹೆಸರುಗಳಿಸಿ ಸಮಾಜ ಸೇವೆಯನ್ನು ನಡೆಸುತ್ತಾ ಬಂದಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಸ್ವಾಮಿ ವಿವೇಕಾನಂದರು ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ತಿಳಿಸಿದ್ದಾರೆ. ಅವುಗಳನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕೆಂದರು. ರೋಟರಿ ಕ್ಲಬ್ ಸದಸ್ಯ ರೊಟರಿಯನ್ ಮೋಹನ್ ಪ್ರಭು ಮಾತನಾಡಿ, ಸಂಸ್ಥೆಯ ಕಾರ್ಯ ವೈಖರಿಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಬಿ.ಎಂ.ಶಾರದ ಮಾತನಾಡಿ, ಇಂಟರಾಕ್ಟ್ ಕ್ಲಬ್ಬಿನ ಸದಸ್ಯರು ತಮ್ಮ ಕಾರ್ಯವೈಖರಿಗಳ ಮೂಲಕ ಎಲ್ಲರಿಗೂ ಮಾದರಿಯಾಗಿರಬೇಕು ಎಂದರು . ರೋಟರಿ ಕಬ್ಬಿನ ಸದಸ್ಯ ರತ್ನಾಕರ ರೈ ಮಾತನಾಡಿ ಕ್ಲಬ್ ನ ಕಾರ್ಯಕ್ರಮಗಳು ವೇದಿಕೆ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರದೆ ಬದಲಾವಣೆಯ ಚಳುವಳಿಯಾಗಿ ಮಾರ್ಪಡಬೇಕು ಎಂದರು. ಶಿಕ್ಷಕಿಯರಾದ ಕೆ.ಎಸ್. ಶೋಭ, ಡಿ.ಜೆ ಸ್ಮಿತಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀರಾಮಟ್ರಸ್ಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರಾದ ನಿವೃತ್ತ ಪ್ರಾಂಶುಪಾಲ ಪ್ರೊ. ಕಲ್ಯಾಟಂಡ ಪೂಣಚ್ಚ, ಬಿದ್ದಾಟಂಡ ಮುತ್ತಣ್ಣ, ರೊಟರಿ ಕ್ಲಬ್ ಸದಸ್ಯರಾದ ಎಸ್ ಎಸ್.ಪೂವಯ್ಯ, ಬಿ.ಕೆ.ಕಾರ್ಯಪ್ಪ, ರತನ್ ಪೊನ್ನಣ್ಣ, ರೋಟರಿ ಮಿಸ್ಟಿಹಿಲ್ಸ್ ಸದಸ್ಯರು, ಇಂಟರಾಕ್ಟ್‍ಕ್ಲಬ್ ನ ಅಧ್ಯಕ್ಷೆ ವಿದ್ಯಾರ್ಥಿಗಳಾದ ಕೆ.ಎಸ್.ಆಶಿಕಾ, ಕಾರ್ಯದರ್ಶಿ ಸೋನಾಲ್, ಖಜಾಂಚಿ ಬಿ.ಎಸ್.ಶಮಿಕ, ಉಪಾಧ್ಯಕ್ಷೆ ಎಂ.ಎಸ್.ಸನ, ಹಿಂದಿನ ಸಾಲಿನ ವಿದ್ಯಾರ್ಥಿ ಅಧ್ಯಕ್ಷೆ ಪಿ.ವೈ.ಹಸ್ನ ಹಾಜರಿದ್ದರು. ವಿದ್ಯಾರ್ಥಿಗಳಾದ ಶಮಿಕ, ನಿಯ ಚಂಗಪ್ಪ, ಶ್ರಾವ್ಯ ಪ್ರಾರ್ಥಿಸಿದರು. ಧನ್ವಿನ್ ಸ್ವಾತಿಕ್ ಎಂ. ಸ್ವಾಗತಿಸಿದರು. ನಜ ಆಇಶ, ಫಾತಿಮತ್ ಹನ, ಎಸ್.ಜಿ.ಶ್ರಾವ್ಯ ಅತಿಥಿಗಳ ಪರಿಚಯ ಮಾಡಿದರು. ಫಾತಿಮಾ ರಿಧ, ಭೋಜಮ್ಮ, ನಿಯ ಚಂಗಪ್ಪ ವಿದ್ಯಾರ್ಥಿ ನಾಯಕರ ಪರಿಚಯವನ್ನು ಮಾಡಿದರು. ಫಾತಿಮಾ, ಎಂ.ಎನ್.ನಿಶ ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್.ಶಮಿಕ ವಂದಿಸಿದರು.
ವರದಿ : ದುಗ್ಗಳ ಸದಾನಂದ









