
ನಾಪೋಕ್ಲು ಆ.7 NEWS DESK : ದೆಹಲಿಯಲ್ಲಿ ಆ.15 ರಂದು ನಡೆಯುವ ಸ್ವಾತಂತ್ರೋತ್ಸವಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿರುವ ಯಶಸ್ವಿ ರೈ ಅವರನ್ನು ಕಾಂತೂರು ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತಿ ಅಧ್ಯಕ್ಷ ಕುಶನ್ ರೈ, ಉಪಾಧ್ಯಕ್ಷರಾದ ಬಿ.ಎಸ್.ರೇಖಾ, ಪಿ.ಡಿ.ಓ ಚಂದ್ರಮೌಳಿ, ಸದಸ್ಯರಾದ ವಿಜು ತಿಮ್ಮಯ, ಸೌಮ್ಯ ಸತೀಶ್, ರೀತಾ ಸುದರ್ಶನ್, ಸುಮಾ ಸುಂದರಿ, ಪುಷ್ಪ, ದಿವ್ಯ ಮಿತ್ತೂರ್, ಯಶ್ವಿನ್, ರಘು, ಹೀರ ಸುಬ್ಬಯ್ಯ, ಶೃತಿ, ಲತ, ಶರ್ಮಿಳಾ, ಮೀನಾಕ್ಷಿ ದೇವಯ್ಯ ಮತ್ತು ಸಿಬ್ಬಂದಿಗಳಾದ ನಿರೂಪ, ಶಶಿ, ಲಿಖಿತ, ಕೋಮಲ, ದಿನೇಶ ಮತ್ತು ತಾಯಿ ಜಯಂತಿ ರೈ ಹಾಜರಿದ್ದರು. ಯಶಸ್ವಿ ರೈ ಕಾಂತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಡಗ ಗ್ರಾಮದ ನಿವಾಸಿ ಬಿ.ಬಿ.ಜಯಂತಿ ಮತ್ತು ಲವಕುಮಾರ್ ದಂಪತಿಗಳ ದ್ವಿತೀಯ ಪುತ್ರ
ವರದಿ : ದುಗ್ಗಳ ಸದಾನಂದ.








