
ಮಡಿಕೇರಿ ಆ.7 NEWS DESK : ವಿರಾಜಪೇಟೆ ತಾಲ್ಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿಯ ಕಡಂಗಮರೂರು ಭಾಗದ ಕಾಲೋನಿ ನಿವಾಸಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಟಾರ್ಪಲ್ ವಿತರಿಸಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಕಡಂಗಮರೂರು ಬೂತ್ ಅಧ್ಯಕ್ಷ ಮಂಡೆಪಂಡ ರೋಷನ್, ಬಾಲಟಿಲಂಡ ರಂಜಿ, ಮಂಡೆಟೀರ ಅನಿಲ್, ಮಹಿಳಾ ಘಟಕದ ಅಧ್ಯಕ್ಷ ಕಾವೇರಮ್ಮ, ಕಾಂಗಿರ ಸತೀಶ್, ಕಾಂಗಿರ ರವಿ ಮಾಚಯ್ಯ, ಮಲಂಡ ಜಗದೀಶ್, ಕೆದಮುಳ್ಳೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ನಡಿಕೇರಿಯಂಡ ಮಹೇಶ್, ಪಂಚಾಯಿತಿ ಅಧ್ಯಕ್ಷರಾದ ಜೇಫ್ರಿ ಉತ್ತಪ್ಪ, ಕೆಡಿಪಿ ಸದಸ್ಯರಾದ ಮಾಳೆಟೀರ ಪ್ರಶಾಂತ್, ಬಟಾಕಳಂಡ ರಾಜ, ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.









