
ಸುಂಟಿಕೊಪ್ಪ ಆ.8 NEWS DESK : ಸಾಲವನ್ನು ನಾವುಗಳು ಯಾವ ಉದ್ದೇಶಕ್ಕೆ ಪಡೆಯುತ್ತೇವೆ ಅದನ್ನು ಅದೇ ಉದ್ದೇಶಕ್ಕೆ ವಿನಿಯೋಗಿಸಿದಲ್ಲಿ ಮಾತ್ರ ವೈಯಕ್ತಿಕ ಅಭಿವೃದ್ಧಿಯನ್ನು ಕಂಡುಕೊಂಡಿದ್ದೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನ್ನಪೂರ್ಣ ಸ್ವಸಹಾಯ ಸಂಘದ 17ನೇ ವಾರ್ಷಿಕೋತ್ಸವದಲ್ಲಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ನಾಕೂರು-ಶಿರಂಗಾಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‍ಬೈಲ್ ಕಾರ್ಯಕ್ಷೇತ್ರದ ಅನ್ನಪೂರ್ಣ ಸ್ವ ಸಹಾಯ ಸಂಘದ 17ನೇ ವಾರ್ಷಿಕೋತ್ಸವ ಸಮಾರಂಭವು ಕಾನ್‍ಬೈಲ್‍ನಲ್ಲಿ ಆಯೋಜಿಸಲಾಗಿದ್ದು, ಸಮಾರಂಭದಲ್ಲಿ ಶ್ರೀ.ಕ್ಷೆ.ಧ.ಗ್ರಾ.ಯೋ ವತಿಯಿಂದ ಸಂಘದ ಸದಸ್ಯರಿಗೆ ವಿದ್ಯಾ ನಿಧಿಯಿಂದ ಮಕ್ಕಳ ಉನ್ನತ ಶಿಕ್ಷಣ, ಸ್ವಂತಸೂರು, ವ್ಯಾಪಾರಕ್ಕೆ, ವಾಹನಗಳಿಗೆ ಸಾಲ ಸೌಲಭ್ಯ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ನೀಡುತ್ತಿದೆ. ನಾವು ಸಾಲ ಪಡೆದುಕೊಳ್ಳುವ ಮೊದಲು ಅದರ ಸಾಧಕ ಬಾಧಕಗಳ ಅರಿತುಕೊಂಡು ಅದರಂತೆ ಯೋಜನೆಗಳನ್ನು ರೂಪಿಸಿಕೊಂಡು ಸಾಲವನ್ನು ಪಡೆದುಕೊಂಡಿದ್ದೇವೆ. ಸಾಲ ಪಡೆದ ಮೊಬಲಗನ್ನು ನಾವು ಮುಂದೆಯೇ ನಿರ್ಧರಿಸಿದ ಯೋಜನೆಗೆ ವಿನಿಯೋಗಿಸಿರುವುದರಿಂದ ನಾವುಗಳು ವೈಯಕ್ತಿಕ ಅಭಿವೃದ್ಧಿಯನ್ನು ಹೊಂದಲು ಸಾಧ್ಯ ಎಂದು ಸಂಘದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ನಮ್ಮ ಮಕ್ಕಳು ವಿದ್ಯಾ ನಿಧಿಯಿಂದ ಸಹಾಯಧನ ಸಾಲವನ್ನು ಪಡೆದು ಉನ್ನತ ಶಿಕ್ಷಣವನ್ನು ಪಡೆಯುವುದರೊಂದಿಗೆ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಪೋಷಕರ ಕೀರ್ತಿಯು ಹೆಚ್ಚಾಗಿದೆ ಎಂದು ಸಂಘದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿಯೂ ಸಂಘವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗುವ ಇರಾದೆಯನ್ನು ಹೊಂದಲಾಗಿದೆ. ಪ್ರತಿಯೊಬ್ಬರೂ ಯಾವುದೇ ಸಾಲಗಳನ್ನು ಮಾಡುವ ಸಂದರ್ಭ ಯೋಜನೆಗಳು ಅತೀಮುಖ್ಯ ಮರುಪಾತಿಸುವ ರೂಪುರೇಷಗಳು ಹೊಂದಿ ನಿಗಧಿತ ಸಮಯಕ್ಕೆ ಮರುಪಾವತಿ ಮಾಡುವುದರಿಂದ ಮಾತ್ರ ವೈಯಕ್ತಿಕ ಹಾಗೂ ಸಂಘವು ಅಭಿವೃದ್ಧಿ ಹೊಂದಲು ಸಾಧ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ.ಕ್ಷೆ.ಧ.ಗ್ರಾ.ಯೋ ಸೇವಾ ಪ್ರತಿನಿಧಿ ಯಶೋಧ ಬಸವರಾಜ್ ಮಾತನಾಡಿ ಶ್ರೀ.ಕ್ಷೆ.ಧ.ಗ್ರಾ.ಯೋ ವತಿಯಿಂದ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ನಾವು ಯೋಜನೆಗಳನ್ನು ಪಡೆಯುವಾಗ ಮಾನದಂಡ ನಿರ್ಧಿಷ್ಟವಾದ ಗುರಿಯನ್ನು ಹೊಂದಿರಬೇಕು ಮತ್ತು ಅದನ್ನು ಶ್ರದ್ಧೆಯಿಂದ ನಿರ್ವಹಿಸುವ ಮೂಲಕ ಮರುಪಾವತಿಸಲು ನಿಮಗೆ ಸಹಕಾರಿಯಾಗುತ್ತದೆ. ಯಾವುದೇ ನಿರ್ಧಿಷ್ಟವಾದ ಗುರಿಯನ್ನು ಇರಿಸದೆ ಕಠಿಣ ಪರಿಶ್ರಮವಹಿಸದಿದ್ದರೇ,ನೀವುಗಳು ಮುಂದುವರಿಯಲು ಸಾಧ್ಯವಿಲ್ಲ ಯೋಜನೆಯ ನೀಡಲಾಗುವ ಫಲಾನುಭವಿ ಪಟ್ಟಿಯಿಂದ ವಂಚಿತಗೊಳ್ಳವುದಲ್ಲದೆ ಇತರ ಸದಸ್ಯರಿಗೂ ಸಮಸ್ಯೆಗಳು ಎದುರಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾನ್‍ಬೈಲ್ ಒಕ್ಕೂಟದ ಉಪಾಧ್ಯಕ್ಷೆ ಗೀತಾ ವಹಿಸಿ ಮಾತನಾಡಿದರು. ಈ ಸಂದರ್ಭ ಶ್ರೀ.ಕ್ಷೆ.ಧ.ಗ್ರಾ.ಯೋ ಒಕ್ಕೂಟದ ಕಾರ್ಯದರ್ಶಿ ಪುಷ್ಪಲತಾ, ಶ್ರೀ ಸರಸ್ವತಿ ಹಾಗೂ ಪರಮೇಶ್ವರ ಸ್ವ ಸಹಾಯ ಸಂಘದ ಸದಸ್ಯರು ಇದ್ದರು.








