

ಮಡಿಕೇರಿ NEWS DESK ಆ.9 : ಮಡಿಕೇರಿ ನಗರದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಟ್ರಸ್ಟಿಗಳು, ದಸರಾ ಉತ್ಸವ ಸಮಿತಿಯ ಮಾಜಿ ಗೌರವ ಅಧ್ಯಕ್ಷರು ಹಾಗೂ ಅಂಬಿಕಾ ವೀಡಿಯೋಸ್ ನ ಮಾಲೀಕರೂ ಆದ ಅಜ್ಜಿನಂಡ ಗಣೇಶ್ ಅಯ್ಯಣ್ಣ (68) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಸಮಾಜ ಸೇವಕಿ ಮೊಹಂತಿ ಗಣೇಶ್ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಮೃತ ಗಣೇಶ್ ಅವರ ಅಂತ್ಯಕ್ರಿಯೆ ಆ.10 ರಂದು ಮಡಿಕೇರಿಯ ಕೊಡವ ಸಮಾಜದ ರುದ್ರಭೂಮಿಯಲ್ಲಿ ನಡೆಯಲಿದೆ.





































