

ಮಡಿಕೇರಿ NEWS DESK ಆ.10 : ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿ ವತಿಯಿಂದ ಆ.17 ರಂದು ಮೂರ್ನಾಡಿನಲ್ಲಿ 6 ವರ್ಷದೊಳಗಿನ ಮಕ್ಕಳಿಗಾಗಿ ಶ್ರೀಕೃಷ್ಣ ಛದ್ಮವೇಷ ಸ್ಪರ್ಧೆ ಹಾಗೂ 25 ವರ್ಷ ಮೇಲ್ಪಟ್ಟ ದಂಪತಿಗಳಿಗಾಗಿ ರಾಧಾಕೃಷ್ಣ ಛದ್ಮವೇಷ ಸ್ಪರ್ಧೆ ನಡೆಯಲಿದೆ. ಮೂರ್ನಾಡಿನ ಪ್ರಕೃತಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ಆಯೋಜಿಸಿರುವ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದ ಸಂದರ್ಭ ಛದ್ಮವೇಷ ಸ್ಪರ್ಧೆಗಳು ನಡೆಯಲಿವೆ. 6 ವರ್ಷದೊಳಗಿನ ಮಕ್ಕಳು ಶ್ರೀಕೃಷ್ಣನ ಛದ್ಮವೇಷವನ್ನು ಮಾತ್ರ ಧರಿಸಬೇಕು. 25 ವರ್ಷ ಮೇಲ್ಪಟ್ಟ ದಂಪತಿಗಳು ಹಾವಾಭಾವದೊಂದಿಗೆ ರಾಧಾಕೃಷ್ಣ ಛದ್ಮವೇಷ ಪ್ರದರ್ಶಿಸಬೇಕು. ಈ ಸ್ಪರ್ಧಾ ವಿಭಾಗದಲ್ಲಿ ವಯಸ್ಸಿನ ಮಿತಿ ಇರುವುದಿಲ್ಲ. ಆಸಕ್ತರು ಆ.12 ರೊಳಗೆ ಹೆಸರನ್ನು ನೋದಾಯಿಸಿಕೊಳ್ಳಬೇಕು. ವಿಜೇತರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ನ ಮೂರ್ನಾಡು ಘಟಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸಿ.ಪಿ.ಚಂಗಪ್ಪ 9449073036, ಎಂ.ಕೆ.ಪ್ರವೀಣ 7019095524, ಮಮತ ಶ್ರೀಹರಿ 9686960327 ನ್ನು ಸಂಪರ್ಕಿಸಬಹುದಾಗಿದೆ.








