
ಮಡಿಕೇರಿ ಆ.11 NEWS DESK : ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ರಕ್ಷಾಬಂಧನ ಆಚರಿಸಲಾಯಿತು. ಶ್ರೀ ಕಾವೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಶ್ರೀನಾಥ್ ಮಾತನಾಡಿ, ರಕ್ಷಾಬಂಧನ ಕಾರ್ಯಕ್ರಮದ ಹಿನ್ನೆಲೆ ಮತ್ತು ರಾಷ್ಟೀಯ ಸ್ವಯಂ ಸೇವಕ ಸಂಘ ದ ಪಾತ್ರ ದ ಬಗ್ಗೆ ತಿಳಿಸಿದರು. ರಾಷ್ಟೀಯ ಸ್ವಯಂ ಸೇವಕ ಸಂಘದ ನಿಕಟಪೂರ್ವ ಕಾರ್ಯಕರ್ತ ಪ್ರಸನ್ನ ಸಂಘದ ಪ್ರಾರ್ಥನೆ ಮತ್ತು ರಕ್ಷಾಬಂಧನದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ನಂತರ ಪರಸ್ಪರ ರಕ್ಷೆ ಕಟ್ಟಿ ಸಿಹಿ ಹಂಚಿ ಸಂಭ್ರಮಿಸಿದರು.









