
ವಿರಾಜಪೇಟೆ ಆ.12 NEWS DESK : ವಿರಾಜಪೇಟೆ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಕೃಷಿ ಕಾರ್ಯಕ್ರಮದಡಿಯಲ್ಲಿ ಅಮ್ಮತ್ತಿ ವಲಯದ ಬಿಳುಗುಂದ ಕಾರ್ಯಕ್ಷೇತ್ರದ ಡಾ.ಬೋಪಣ್ಣ ಅವರ ಗದ್ದೆಯಲ್ಲಿ ಯಾಂತ್ರಿಕೃತ ಭತ್ತ ಬೇಸಾಯ ವಿಧಾನಗಳ ಬಗ್ಗೆ ಮಾಹಿತಿ ಮತ್ತು ನಾಟಿ ಯಂತ್ರ ಪ್ರಾತ್ಯಕ್ಷಿತೆ ನಡೆಯಿತು. ಕಾರ್ಯಕ್ರಮವನ್ನು ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪಿ.ಹರೀಶ್ ಉದ್ಘಾಟಿಸಿದರು. ಸಿಹೆಚ್‍ಎಸ್‍ಸಿ ಮೇಲ್ವಿಚಾರಕರಾದ ಪ್ರದೀಪ್, ಯಾಂತ್ರಿಕೃತ ಭತ್ತ ಬೇಸಾಯ ಯಂತ್ರಗಳ ಮೂಲಕ ನಾಟಿ ಮಾಡಿದರೆ ಕಡಿಮೆ ಖರ್ಚಿನಲ್ಲಿ ಭತ್ತ ಕೃಷಿ ಮಾಡಲು ಸಾಧ್ಯ. ಇದರೊಂದಿಗೆ ಕಾರ್ಮಿಕರ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ಅಧಿಕಾರಿ ಮೇಘನ ಮಾತನಾಡಿ, ಕೃಷಿ ಇಲಾಖೆಯಿಂದ ಭತ್ತ ಬೇಸಾಯಕ್ಕೆ ಸಿಗುವ ಸಹಾಯಧನ ಮತ್ತು ರೈತರು ಕೃಷಿ ಇಲಾಖೆಗೆ ಯಾವ ರೀತಿಯ ದಾಖಲೆಗಳನ್ನು ನೀಡಬೇಕು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕರಾದ ವಸಂತ್, ವಲಯ ಮೇಲ್ವಿಚಾರಕರಾದ ದಿನೇಶ್, ಒಕ್ಕೂಟದ ಕಾರ್ಯದರ್ಶಿ ನಿರ್ಮಲ, ಪ್ರಗತಿಪರ ಕೃಷಿಕರಾದ ಟಿ.ಎನ್ ಮುತ್ತಣ್ಣ ಎಂ.ಟಿ ದೇವಯ್ಯ, ನವೀನ್, ಸೇವಾ ಪ್ರತಿನಿಧಿ ರಜನಿ, ಸಿ.ಎಸ್.ಸಿ ಸೇವಾದಾರರಾದ ದೃಶ್ಯ, ಗ್ರಾಮಸ್ಥರು ಮತ್ತು ಸಂಘದ ಸದಸ್ಯರು ಇದ್ದರು.









