
ಸುಂಟಿಕೊಪ್ಪ ಆ.12 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‍ಬೈಲ್ ಒಕ್ಕೂಟ ಮತ್ತು ಮಹಿಳಾ ಸ್ವ ಸಹಾಯ ಸಂಘಗಳ ವತಿಯಿಂದ ಕಾನ್‍ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಒಕ್ಕೂಟ ಹಾಗೂ ಸಂಘಗಳ ಪದಾಧಿಕಾರಿಗಳು ಶಾಲೆಯ ಆವರಣದ ಸುತ್ತ ಬೆಳೆದಿದ್ದ ಕಾಡುಗಿಡಗಳನ್ನು ಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಅಧ್ಯಕ್ಷೆ ಭವ್ಯ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‍ಬೈಲ್ ಕಾರ್ಯಕ್ಷೇತ್ರದ ಮಹಿಳಾ ಸ್ವ ಸಹಾಯ ಸಂಘಗಳಾದ ಜನನಿ, ಮೂಕಾಂಬಿಕ, ಅನ್ನಪೂರ್ಣ, ಶ್ರೀ ಸರಸ್ವತಿ, ನೇತಾಜಿ ಹಾಗೂ ಪರಮೇಶ್ವರ ಸಂಘಗಳ ಪ್ರಬಂಧಕರು ಹಾಗೂ ಸಂಘದ ಸದಸ್ಯರುಗಳು ಆವರಣದಲ್ಲಿ ಬೆಳೆದಿದ ಕಾಡು ಗಿಡ ಗಂಟಿ, ಪ್ಲಾಸ್ಟಿಕ್ ಇನ್ನಿತರರ ತ್ಯಾಜ್ಯಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಛಾತ ಕಾರ್ಯವನ್ನು ನೇರವೇರಿಸಿದರು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಉಪಾಧ್ಯಕ್ಷೆ ಗೀತಾ, ಒಕ್ಕೂಟ ಕಾರ್ಯದರ್ಶಿ ಪುಷ್ಪಲತ, ಸೇವಾ ಪ್ರತಿನಿಧಿ ಯಶೋಧ, ಶಾಲಾ ಸಮಿತಿ ಸದಸ್ಯರುಗಳಾದ ನಾಗರಾಜು, ತಿಮ್ಮಪ್ಪ ಸೇರಿದಂತೆ ಸ್ವಸಹಾಯ ಸಂಘದ ಸದಸ್ಯರು ಇದ್ದರು.









