Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ವಿರಾಜಪೇಟೆಯಲ್ಲಿ ಕಟ್ಟಡ ಕಾರ್ಮಿಕರ 2ನೇ ಜಿಲ್ಲಾ ಸಮ್ಮೇಳನ : ಸೌಲಭ್ಯಕ್ಕಾಗಿ ಸಂಘಿಕ ಹೋರಾಟ ಅಗತ್ಯ : ಸಂಕೇತ್ ಪೂವಯ್ಯ ಕರೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆಯಲ್ಲಿ ಕಟ್ಟಡ ಕಾರ್ಮಿಕರ 2ನೇ ಜಿಲ್ಲಾ ಸಮ್ಮೇಳನ : ಸೌಲಭ್ಯಕ್ಕಾಗಿ ಸಂಘಿಕ ಹೋರಾಟ ಅಗತ್ಯ : ಸಂಕೇತ್ ಪೂವಯ್ಯ ಕರೆ

ಆಗಷ್ಟ್ 13, 20253 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ವಿರಾಜಪೇಟೆ ಆ.13 NEWS DESK : ಕಟ್ಟಡ ಕಾರ್ಮಿಕರ ತಮ್ಮ ಪಾಲಿನ ಹಕ್ಕುಗಳನ್ನು ಹಾಗೂ ಸೌಲಭ್ಯ ಪಡೆಯಬೇಕಾದರೆ ಸಾಂಘಿಕ ಹೋರಾಟ ಅಗತ್ಯತೆಯಿದೆ ಎಂದು ಅರಣ್ಯ ಇಲಾಖೆ ನೌಕರರ ಸಂಘದ ರಾಜ್ಯಾಧ್ಯಕ್ಷ ಹಾಗೂ ವನ್ಯಜೀವಿ ಮಂಡಳಿಯ ರಾಜ್ಯ ಸದಸ್ಯರಾದ ಸಂಕೇತ್ ಪೂವಯ್ಯ ಕರೆ ನೀಡಿದರು. ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ, ಸಿಐಟಿಯು, ಸಿ.ಡಬ್ಲ್ಯೂ.ಎಫ್.ಐ ವತಿಯಿಂದ ವಿರಾಜಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರ 2ನೇ ಜಿಲ್ಲಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಕಾರ್ಮಿಕರ ಸಮ್ಮೇಳನಗಳನ್ನು ಮಾಡುವ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಸರಕಾರಕ್ಕೆ ತಿಳಿಸುವ ಕೆಲಸವನ್ನು ಕಾರ್ಮಿಕರಿಗೆ ಸಂಘಟನೆ ಮಾಡುತ್ತಿದೆ. ಕಟ್ಟಡ ಕಾರ್ಮಿಕರಿಗಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೋಂದಣಿಯಾಗುವ ಮೂಲಕ ಸರಕಾರದ ಸಲವತ್ತುಗಳನ್ನು ಪಡೆದುಕೊಳ್ಳಬೇಕೆಂದರು. ನಮ್ಮ ಜಿಲ್ಲೆಯಲ್ಲಿ ಕಟ್ಟಡ ರಂಗದಲ್ಲಿ ಕೆಲಸ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಹೊರರಾಜ್ಯದ ಕಾರ್ಮಿಕರು ದುಡಿಯುತ್ತಿದ್ದಾರೆ. ಈ ಕಾರ್ಮಿಕರನ್ನು ಕಡಿಮೆ ದರದಲ್ಲಿ ಮತ್ತು ಹೆಚ್ಚು ಸಮಯದ ಕೆಲಸವನ್ನು ಮಾಡಿಸುವುದರೊಂದಿಗೆ ಶೋಷಣೆ ಮಾಡುತ್ತಿರುವುದು ಒಂದು ಕಡೆಯಾದರೆ ಜಿಲ್ಲೆಯಲ್ಲಿ ಕಟ್ಟಡ ರಂಗವನ್ನು ಅವಲಂಬಿಸಿ ಬದುಕನ್ನು ಕಟ್ಟಿಕೊಳ್ಳುತ್ತಿರುವ ದೊಡ್ಡ ಸಂಖ್ಯೆಯ ಸ್ಥಳೀಯ ಕಾರ್ಮಿಕರ ಸ್ಥಿತಿ ಅತಂತ್ರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಟ್ಟಡ ಕಾರ್ಮಿಕರ ಸಂಘಟನೆಯ ರಾಜ್ಯ ಖಜಾಂಚಿ ಲಿಂಗರಾಜು ಮಾತನಾಡಿ ನಮ್ಮ ದೇಶದ ಎಲ್ಲಾ ಕಾರ್ಮಿಕರ ಹಕ್ಕುಗಳಿಗಾಗಿ ಸತತವಾದ ಹೋರಾಟಗಳನ್ನು ನಡೆಸುತ್ತಿದೆ. ದೇಶದಲ್ಲಿ ಕೃಷಿ ರಂಗವನ್ನು ಬಿಟ್ಟರೆ ಅತಿ ಹೆಚ್ಚು ಕಾರ್ಮಿಕರು ದುಡಿಯುತ್ತಿರುವ ಕಟ್ಟಡ ಕಾರ್ಮಿಕರನ್ನು ಕೂಡ ಸಂಘಟಿಸಲಾಗುತ್ತಿದೆ. ಅವರ ಹಕ್ಕುಗಳಿಗಾಗಿ ಚಳುವಳಿಗಳನ್ನು ನಡೆಸಲಾಗುತ್ತಿದೆ. ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಾಗಿ ಹಕ್ಕುಗಳಿಗಾಗಿ ನಡೆಸಿದ ಹೋರಾಟದ ಭಾಗವಾಗಿ 1996ರಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಕಾನೂನು ಜಾರಿಗೆ ಬಂತು. ಆದರೆ ಇಂದು ದೇಶದಲ್ಲಿ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಸರಕಾರಗಳು ಕಾನೂನುಗಳ ತಿದ್ದುಪಡಿ ತಂದು ಕಟ್ಟಡ ಕಾರ್ಮಿಕರ ಕಾನೂನುಗಳನ್ನು ದುರ್ಬಲಗೊಳಿಸಿ ಕಲ್ಯಾಣ ಮಂಡಳಿಯನ್ನು ಮುಚ್ಚಿಸಲು ಹೊರಟಿದೆ. ಪರಿಣಾಮ ಲಾಕ್ಡೌನ್ ಸಂದರ್ಭದಲ್ಲಿ ಆದಂತಹ ಆರ್ಥಿಕ ಬಿಕಟ್ಟಿನಿಂದ ಹೊರಬರಲು ಪ್ರಯತ್ನಿಸುವ ಈ ದಿನಗಳಲ್ಲಿ ಆಡಳಿತದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾಪೆರ್Çರೇಟರ್ಗಳ ಪರವಾದ ಆರ್ಥಿಕ ನೀತಿಗಳಿಂದ ಕಟ್ಟಡ ರಂಗಕ್ಕೂ ಈ ಕಟ್ಟಡ ನಿರ್ಮಾಣ ಕೆಲಸಗಳನ್ನು ನಂಬಿ ಬದುಕುತ್ತಿರುವ ದೊಡ್ಡ ಸಂಖ್ಯೆಯ ಕಾರ್ಮಿಕರ ಬದುಕು ಅತಂತ್ರವಾಗುವ ಭೀತಿ ಎದುರಾಗಿದೆ ಎಂದರು. ವಕೀಲರು, ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಟನೆಯ ಗೌರವಾಧ್ಯಕ್ಷ ಐ.ಆರ್. ಪ್ರಮೋದ್ ಮಾತನಾಡಿ, ದಿನನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಔಷಧಿಗಳ ಬೆಲೆ ಏರಿಕೆಯಿಂದ ಕಟ್ಟಡ ಕಾರ್ಮಿಕರ ಬದುಕು ಇನ್ನಷ್ಟು ದುಸ್ತರವಾಗಿದೆ. ಕಟ್ಟಡ ನಿರ್ಮಾಣ ರಂಗದಲ್ಲಿ ನಿರ್ಮಾಣ ವಸ್ತುಗಳ ಬೆಲೆ ಏರಿಕೆಯಿಂದಾಗಿ, ಕಟ್ಟಡ ನಿರ್ಮಾಣದ ಕಾಮಗಾರಿಗಳು ಹೆಚ್ಚು ಹೆಚ್ಚು ನಡೆಯದೇ ಇರುವುದರಿಂದ ನಿರ್ಮಾಣ ಕೆಲಸಗಳನ್ನು ನಂಬಿ ಬದುಕುತ್ತಿರುವ ಕಾರ್ಮಿಕರ ಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ ಎಂದರು. ಸಿಐಟಿಯು ಕೊಡಗು ಜಿಲ್ಲಾಧ್ಯಕ್ಷ ಪಿ.ಆರ್ ಭರತ್ ಮಾತನಾಡಿ ಕಟ್ಟಡ ರಂಗದ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ಸಿಗುವ ಹಾಗೆ ಸರಕಾರಗಳು ಕ್ರಮ ವಹಿಸಬೇಕಾಗಿದೆ ಮತ್ತು ಸರಕಾರಗಳ ತಪ್ಪಾದ ಆರ್ಥಿಕ ನೀತಿಗಳನ್ನು ರೀತಿಯಲ್ಲಿ ನಮ್ಮ ಹೋರಾಟಗಳನ್ನು ಹೆಚ್ಚು ಹೆಚ್ಚು ಸಂಘಟಿಸಬೇಕಾಗಿದೆ ಮತ್ತು ಕಾರ್ಮಿಕ ವರ್ಗ ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ನಿರಂತರವಾದ ಹೋರಾಟಗಳನ್ನು ನಡೆಸುತ್ತಾ ಬಂದಿರುವ ಸಿಐಟಿಯುನ ಹೋರಾಟಗಳಿಗೆ ಬೆಂಬಲವಾಗಿ ನಿಲ್ಲಬೇಕಾಗಿದೆ ಎಂದರು. ತೋಟ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ಎಂ.ಡಿ ಕುಟ್ಟಪ್ಪನ್, ನರಲ್ ಸಿ ಯೂನಿಯನ್ ಇದರ ಅಧ್ಯಕ್ಷ ಎಚ್.ಬಿ ರಮೇಶ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಎ.ಸಿ ಸಾಬು ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಮಿಕರನ್ನು ರಕ್ಷಿಸಬೇಕಾದ ಸರಕಾರಗಳು ಕಟ್ಟಡ ಕಾರ್ಮಿಕರ ಕಲ್ಯಾಣ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕೋಟ್ಯಾಂತರ ರೂಪಾಯಿಗಳನ್ನು ಕಾರ್ಮಿಕರಿಗೆ ಕಿಟ್ಟುಗಳ ಹೆಸರಿನಲ್ಲಿ ಬೇರೆಯವರಿಗೆ ಉಪಯೋಗ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕೂಡ ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರು ಎದುರಿಸುತ್ತಿರುವ ಮರಳಿನ ಅಬಾವ ದೊಡ್ಡ ಪ್ರಮಾಣದಲ್ಲಿದೆ. ದಿನನಿತ್ಯ ಕಟ್ಟಡ ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರಕಾರ ಕಾರ್ಮೀಕರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಕಾರ್ಮೀಕರಿಗೆ ಸಿಬೇಕಾದ ಎಲ್ಲಾ ಸೌಲತ್ತುಗಳನ್ನು, ಕಾಮೀಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಉತ್ತಾಯಿಸಿದರು. ವೇದಿಕೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಪದ್ಮಿನಿ ಶ್ರೀಧರ್, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ಹಮೀದ್, ಖಾಸಿಂ, ಬೈಜು, ಕೆ.ಕೆ. ಹರಿದಾಸ್, ಮಂಗಳ, ಉಷಾ, ಬಿಸಿಯೂಟ ಸಂಘಟನೆಯ ಜಿಲ್ಲಾ ಮುಖಂಡರಾದ ಕುಸುಮ ಸೇರಿದಂತೆ ಹಲವರು ಇದ್ದರು. ಸಮ್ಮೇಳನದ ಅಂಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಸಂಘದ ದ್ವಜಾರೋಹಣ ಮಾಡಲಾಯಿತು. ಸಮ್ಮೇಳನದಲ್ಲಿ 5 ತಾಲೂಕಿನ ವಿವಿಧ ಗ್ರಾಮಗಳಿಂದ ಕಾರ್ಮಿಕರು ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಿದರು. :: ಒತ್ತಾಯ :: ಕಟ್ಟಡ ಕಾರ್ಮಿಕರ ಸಮ್ಮೇಳನದಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳ ಶೈಷಣಿಕ ಧನ ಸಹಾಯ ಬಿಡುಗಡೆ, ಆರೋಗ್ಯ ಸಂಜೀವಿನಿ ಜಾರಿಗೆ, ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಧನ ಸಹಾಯ ಬಿಡುಗಡೆ ಹಾಗೂ ಬಾಕಿ ಇರುವ ಮದುವೆ, ವೈದ್ಯಕೀಯ ಮರಣ ಹಣವನ್ನು ಸರಕಾರ ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಯಿತು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿಯಲ್ಲಿ ಜಾನಪದ ದಸರಾ ಸಂಭ್ರಮ: ಜಾನಪದ ಕಲಾಪ್ರಕಾರಗಳ ಪ್ರದರ್ಶನಕ್ಕೆ ಮನಸೋತ ಜನತೆ; ಜಾನಪದ ಸಂಸ್ಕೃತಿಯ ಉಳಿವಿಗೆ ಹೆಚ್ಚಿನ ಕಾಳಜಿ ಅಗತ್ಯ: ಶಾಸಕ ಎ.ಎಸ್.ಪೊನ್ನಣ್ಣ ಕರೆ; ಕಲಾವಿದರು ಹಾಗೂ ಜಾನಪದ ವಸ್ತು ಸಂಗ್ರಹಕಾರರಿಗೆ ಸನ್ಮಾನ

ಅಕ್ಟೋಬರ್ 18, 2026

ಕಾವೇರಿ ತೀರ್ಥೋದ್ಭವದಂದು ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅಭಿಮಾನಿ ಬಳಗದಿಂದ ಸೇವಾ ಕಾರ್ಯ : 3 ಸಾವಿರಕ್ಕೂ ಅಧಿಕ ಭಕ್ತರಿಗೆ ಹಣ್ಣು, ತಂಪು ಪಾನೀಯ, ಕಾಫಿ ವಿತರಣೆ

ಅಕ್ಟೋಬರ್ 18, 2026

ಬಲಮುರಿಯಲ್ಲಿ ಇಂದು ಕಾವೇರಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ ಪೂರ್ಣ; ವಿಶೇಷ ಪೂಜೆ, ಕಾವೇರಿ ಮಹಾ ಆರತಿ ಹಾಗೂ ಅನ್ನಸಂತರ್ಪಣೆ ಆಯೋಜನೆ

ಅಕ್ಟೋಬರ್ 18, 2026

ಕಾವೇರಿ ತೀರ್ಥೋದ್ಭವದಂದು ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅಭಿಮಾನಿ ಬಳಗದಿಂದ ಸೇವಾ ಕಾರ್ಯ : 3 ಸಾವಿರಕ್ಕೂ ಅಧಿಕ ಭಕ್ತರಿಗೆ ಹಣ್ಣು, ತಂಪು ಪಾನೀಯ, ಕಾಫಿ ವಿತರಣೆ

ಅಕ್ಟೋಬರ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.18 : ಕಾವೇರಿ ತೀರ್ಥೋದ್ಭವದ ದಿನವಾದ ಶನಿವಾರ ಕಾವೇರಿ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಎ.ಎಸ್.ಪೊನ್ನಣ್ಣ ಹಾಗೂ…

ಬಲಮುರಿಯಲ್ಲಿ ಇಂದು ಕಾವೇರಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ ಪೂರ್ಣ; ವಿಶೇಷ ಪೂಜೆ, ಕಾವೇರಿ ಮಹಾ ಆರತಿ ಹಾಗೂ ಅನ್ನಸಂತರ್ಪಣೆ ಆಯೋಜನೆ

ಅಕ್ಟೋಬರ್ 18, 2026

ಕ್ಲೀನ್ ಕಕ್ಕಬ್ಬೆ ಅಭಿಯಾನ ಯಶಸ್ವಿ: 3,670 ಕೆ.ಜಿ. ತ್ಯಾಜ್ಯ ತೆರವು; ನಾಲಡಿ ಕಸಮುಕ್ತ; ಮರಂದೋಡು ಗ್ರಾಮವೂ ಬಹುತೇಕ ಸ್ವಚ್ಛ

ಅಕ್ಟೋಬರ್ 18, 2026

ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿ: 118 ಕವಿಗಳ ಮಹಾಸಂಗಮ; ಜೆನ್-ಜಿ ಹಾಗೂ ಬಾಲಕವಿಗಳಿಂದ ಕವನ ವಾಚನ; ವಿವಿಧ ಭಾಷೆ, ಸಂಸ್ಕೃತಿಗಳ ಸಾಹಿತ್ಯ ಅಭಿವ್ಯಕ್ತಿಗೆ ವೇದಿಕೆ

ಅಕ್ಟೋಬರ್ 18, 2026

ರಾಜ್ಯಮಟ್ಟದ ಯೋಗ ದಸರಾ ಸ್ಪರ್ಧೆಯಲ್ಲಿ ಸುಮೇಶ್ ಕೆ.ಪಿ.ಗೆ ದ್ವಿತೀಯ ಸ್ಥಾನ; ಪಾಲಿಬೆಟ್ಟದ ಚೆಶೈರ್ ಹೋಮ್ ವಿಶೇಷ ಶಾಲೆಯ ವಿದ್ಯಾರ್ಥಿಗೆ ಬೆಳ್ಳಿ ಪದಕ, ನಗದು ಬಹುಮಾನ

ಅಕ್ಟೋಬರ್ 18, 2026

ತಲಕಾವೇರಿಯಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವ

ಅಕ್ಟೋಬರ್ 17, 2026

ಮೂರ್ನಾಡಿನಲ್ಲಿ ಅ.20ರಂದು 33ನೇ ವರ್ಷದ ಅದ್ದೂರಿ ಆಯುಧ ಪೂಜೆ ಮಹೋತ್ಸವ; ವಾಹನಗಳ ಮೆರವಣಿಗೆ, ಬೊಂಬೆ ಕುಣಿತ ಆಕರ್ಷಣೆ; ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಹಾಗೂ ಮಾಜಿ ಸೈನಿಕರಿಗೆ ಸನ್ಮಾನ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ವಿರಾಜಪೇಟೆಯಲ್ಲಿ ಅ.20ರಂದು ಅದ್ದೂರಿ ಆಯುಧ ಪೂಜೆ: ಬೈಕ್ ಸಾಹಸ ಪ್ರದರ್ಶನ, ಸಂಗೀತ ರಸಮಂಜರಿ ವಿಶೇಷ ಆಕರ್ಷಣೆ

ಅಕ್ಟೋಬರ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.