
ನಾಪೋಕ್ಲು ಆ.14 NEWS DESK : ಶಿಕ್ಷಣ ಇಲಾಖೆಯಲ್ಲಿ 31ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸ.ಹಿ.ಪ್ರಾ.ಶಾಲೆ ಪಡಿಯಾಣಿಯಲ್ಲಿ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕರಾದ ಕೆ.ಸಿ.ದಮೇಂದ್ರ ಅವರನ್ನು ಬೀಳ್ಕೊಡಲಾಯಿತು. ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ., ವಿದ್ಯಾರ್ಥಿಗಳು, ಮಡಿಕೇರಿ ತಾಲೂಕಿನ ಶಿಕ್ಷಕರ ಸಂಘ, ಬಿ.ಆರ್.ಸಿ. ವತಿಯಿಂದ ಕೆ.ಸಿ.ದಮೇಂದ್ರ ದಂಪತಿಗಳಿಗೆ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ನಿವೃತ್ತಿ ಹೊಂದಿದ ಕೆ.ಸಿ.ದಮೇಂದ್ರ ಶಾಲೆಗೆ ಮರದ ಕಪಾಟನ್ನು ಕೊಡುಗೆಯಾಗಿ ನೀಡಿದರು. ಸಮಾರಂಭದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕರಾದ ಬೋಜಮ್ಮ, ಸಹ ಶಿಕ್ಷಕಿಯರಾದ ಕೆ.ಎ.ಹೇಮಮಾಲಿನಿ, ಕೆ.ಜೆ.ರಾಧಾ, ಕೆ.ಎಂ.ಬುಶೀರ, ನಿವೃತ್ತ ದೈಹಿಕ ಶಿಕ್ಷಕಿ ಎಂ.ಬಿ.ಭಾರತಿ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಮೋಹನ್ ಪೆರಾಜೆ ಮತ್ತು ಸದಸ್ಯರು, ಬಿ.ಆರ್.ಸಿ ಮಂಜುಳಾ ಚಿತ್ರಾಪುರ, ಪ್ರಸಾದ್, ಎಸ್.ಡಿ.ಎಂ.ಸಿ ಪದಾಧಿಕಾರಿ ಸದಸ್ಯರು, ಶಿಕ್ಷಕರು, ಪೋಷಕರು ಹಾಜರಿದ್ದರುರು.
ವರದಿ : ದುಗ್ಗಳ ಸದಾನಂದ.








