
ಮಡಿಕೇರಿ ಆ.14 NEWS DESK : ತುಮಕೂರಿನಲ್ಲಿ ಇನ್ಫನೈಟ್ ಡಾನ್ಸ್ ಸ್ಟುಡಿಯೋ ವತಿಯಿಂದ 6ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ 50,000/- ನಗದು ಹಾಗೂ ಟ್ರೋಫಿ ಯನ್ನು ತನ್ನದಾಗಿಸಿಕೊಂಡಿದೆ. ಸ್ಪರ್ಧೆಯ ತೀರ್ಪುಗಾರರಾಗಿ ಡಾನ್ಸ್ ಕರ್ನಾಟಕ ಡಾನ್ಸ್ ನಾ ಶಶಿ ಮಾಸ್ಟರ್, ಜಗ್ಗ ಮಾಸ್ಟರ್, ರಾಹುಲ್ ರಾವ್, ಶೋಭಿತ ಕಾರ್ಯನಿರ್ವಹಿಸಿದರು. ಮೈಸೂರಿನ ಜಗನ್ ಮೋಹನ್ ಪ್ಯಾಲೇಸ್ ನಲ್ಲಿ ವಿ ಪಿ ನ್ ಹಾಗೂ ಯು ಸ್ ಏ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಪಡೆದುಕೊಂಡಿದೆ, ಇದರ ತೀರ್ಪುಗರರಾಗಿ ಡಿ ಕೆ ಡಿ ಯ ಅರುಣ್ ಮಾಸ್ಟರ್ ಕಾರ್ಯನಿರ್ವಹಿಸಿದರು. ಸತತ ಮೂರು ಪ್ರಥಮ ಸ್ಥಾನ ಪಡೆಯುವ ಮೂಲಕ ಕಿಂಗ್ಸ್ ವಿದ್ಯಾರ್ಥಿಗಳು ಹ್ಯಾಟ್ರಿಕ್ ವಿಜಯ ಪಡೆದಿದ್ದಾರೆ. ತಂಡದ ಕೊರಿಯೋಗ್ರಾಫರ್ ಮಹೇಶ್ ಹಾಗೂ ಕಿರಣ್ ನೇತೃತ್ವದಲ್ಲಿ ವರುಣವಿ, ಪ್ರಜ್ಞಾ, ಯಶ್ವಿತ, ದೀಪಿಕ್ಷಾ, ಹುಂಶಿಕ, ವರ್ಷಿಣಿ ಶೆಟ್ಟಿ, ತ್ರಿಶ, ಸೋನಾಕ್ಷಿ, ತನಿಶ್, ವಿವೇಕ್, ಅಕ್ಷರ, ಒಶಿನ್ ಮುತ್ತಮ್ಮ, ಮೊನಾಲಿ, ಯಶಸ್, ತುಷಾರ್, ಹಿಮಾನಿ, ಅಭಿ, ಸಿಂಚನ, ಪ್ರಾಣಮ್ಯ, ಶಶಾಂಕ್ ಪೊನ್ನಪ್ಪ, ಈಶಾಂತ್, ಕನ್ನಿಕೆ, ಕಿಶನ್, ವಿವೇಕ್, ಸುಧಾರ್ಮ, ಸುಧರ್ಶನ್ ಭಾಗವಹಿಸಿದ್ದರು.









