
ನಾಪೋಕ್ಲು ಆ.14 NEWS DESK : ಕೊಟ್ಟಮುಡಿ ಕೆ.ಎಂ.ಜೆ, ಎಸ್.ವೈ.ಎಸ್, ಎಸ್.ಎಸ್.ಎಫ್ ಕೊಟ್ಟಮುಡಿ ಶಾಖೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ನಾಪೋಕ್ಲು, ಬೆಟ್ಟಗೇರಿ, ಮಡಿಕೇರಿ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಕೊಟ್ಟಮುಡಿ ಮರ್ಕಝ್ ಸಂಸ್ಥೆಯಿಂದ ಕೊಟ್ಟಮುಡಿ, ಮೂರ್ನಾಡು ಜಂಕ್ಷನ್ ವರೆಗೆ ರಸ್ತೆಯ ಎರಡು ಬದಿಗಳಲ್ಲಿ ತುಂಬಿಕೊಂಡಿದ್ದ ಕಾಡು ಗಿಡಗಂಟಿಗಳನ್ನು ಕಡಿದು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ವಚ್ಚತಾ ಕಾರ್ಯದಲ್ಲಿ ಎಸ್‍ವೈಎಸ್ ಕೊಟ್ಟಮುಡಿ ಶಾಖೆ ಅಧ್ಯಕ್ಷ ಹುಸೈನ್ ಝುಹ್ರಿ, ಉಪಾಧ್ಯಕ್ಷ ಮೈಸಿ ಕತ್ತಣೀರ, ಕಾರ್ಯದರ್ಶಿ ರಫೀಕ್ ಅಝ್ಹರಿ, ಕೊಡಗು ಜಿಲ್ಲಾ ಇಸಾಬ ಕಾರ್ಯದರ್ಶಿ ಬಷೀರ್, ಮಡಿಕೇರಿ ಡಿವಿಷನ್ ಇಸಾಬ ಕಾರ್ಯದರ್ಶಿ ಅಶ್ಕರ್ ಸಖಾಫಿ, ಕೆ.ಎಂ.ಜೆ ಉಪಾಧ್ಯಕ್ಷ ಶಾದುಲಿ ಹಾಜಿ, ಆರ್.ಎಂ.ಹಸೈನಾರ್, ಸದಸ್ಯರುಗಳಾದ ಖಲೀಲ್ ಹಿಮಮಿ, ಹಮೀದ್ ಮಮ್ಮು, ಮೂಸಾನ್, ಅಬೂಬಕರ್, ಹಂಸ ಬೀಟಿಬಾಣೆ, ಬಸೀಪ, ಝಕರಿಯ್ಯ, ಹಮೀದ್ ಬಲಿಪುರ, ಬಷೀರ್, ಹಸೈನಾರ್ ಬಲಿಪುರ, ಸಿ.ಎ.ಹಸೈನಾರ್, ಆಬಿದ್ ಮತ್ತು ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.








