
ಮಡಿಕೇರಿ ಆ.14 NEWS DESK : ನಗರದ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು. ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.16 ರಂದು ರಾತ್ರಿ 10 ಗಂಟೆಗೆ ದೇವಾಲಯದಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನೆ ಹಾಗೂ ಕೀರ್ತನೆಗಳು ನಡೆಯಲಿದ್ದು, ಮಧ್ಯರಾತ್ರಿ ಮಹಾಪೂಜೆ ಜರುಗಲಿದೆ. ಭಕ್ತಾಧಿಗಳು ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ. :: ಮೊಸರು ಕುಡಿಕೆ ಒಡೆಯುವುದು, ಛದ್ಮವೇಷ ಸ್ಪರ್ಧೆ :: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.23 ರಂದು ಅಪರಾಹ್ನ 4 ಗಂಟೆಗೆ ದೇವಾಲಯದಲ್ಲಿ ಮೊಸರು ಕುಡಿಕೆ ಒಡೆಯುವುದು ಮತ್ತು ಮಕ್ಕಳಿಗೆ ಶ್ರೀ ಕೃಷ್ಣ, ರಾಧೆ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿದೆ. ಭಾಗವಹಿಸುವ ಮಕ್ಕಳು ತಮ್ಮ ಹೆಸರನ್ನು 9482192248, 9731411523, 8095858864 ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು.








