
ಮಡಿಕೇರಿ NEWS DESK ಆ.17 : ವಿಶ್ವಛಾಯಾಗ್ರಾಹಣ ದಿನಾಚರಣೆ ಅಂಗವಾಗಿ ಕೊಡಗು ಪತ್ರಕತ೯ರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಸ್ಪಧೆ೯ಗಳಲ್ಲಿ ವಿಜೇತರ ವಿವರ ಹೀಗಿದೆ >>> ಅತ್ಯುತ್ತಮ ಮಾನವೀಯ ಛಾಯಾಚಿತ್ರಕ್ಕಾಗಿ ಸಂಘದ ಗೌರವ ಸಲಹಗಾರ ಬಿ.ಜಿ.ಅನಂತಶಯನ ಅವರು ನೀಡಿರುವ ದತ್ತಿ ಪ್ರಶಸ್ತಿಗೆ ಪತ್ರಕರ್ತ ವಿಘ್ನೇಶ್ ಭೂತನಕಾಡು ಅವರು ತೆಗೆದ ಛಾಯಾಚಿತ್ರ ಆಯ್ಕೆಯಾಗಿದೆ. ಅತ್ಯುತ್ತಮ ಸುದ್ದಿ ಚಿತ್ರಕ್ಕಾಗಿ ಸುಂಟಿಕೊಪ್ಪದ ಪತ್ರಕತ೯ ಕೆ.ಎಸ್.ಅನಿಲ್ ಕುಮಾರ್ (ಪ್ರಥಮ) ಹಾಗೂ ವಿಶ್ವಕುಮಾರ್ ಗುಡ್ಡೆಹೊಸೂರು ದ್ವಿತೀಯ ಬಹುಮಾನ ಗಳಿಸಿದ್ದಾರೆ. ಜಲಜಲಜಲಧಾರೆ ವಿಷಯದ ಅತ್ಯುತ್ತಮ ವಿಡಿಯೋ ಸ್ಪಧೆ೯ಯಲ್ಲಿ ಮಡಿಕೇರಿಯ ಮಹಮ್ಮದ್ ಹನೀಫ್ (ಪ್ರಥಮ), ವಿರಾಜಪೇಟೆಯ ಉಷಾಪ್ರೀತಂ (ದ್ವಿತೀಯ) ಆಯ್ಕೆಯಾಗಿದ್ದಾರೆ. ಮಳೆಗಾಲದ ಸಂಕಷ್ಟಗಳು ವಿಷಯದ ಕುರಿತ ಸಾವ೯ಜನಿಕರಿಗಾಗಿನ ರೀಲ್ಸ್ ಸ್ಪಧೆ೯ಯಲ್ಲಿ ಭಾಗೀರಥಿ ಹುಲಿತಾಳ (ಪ್ರಥಮ) ಹಾಗೂ ಕುಶಾಲನಗರದ ರಮ್ಯ ಮಾಚಯ್ಯ (ದ್ವಿತೀಯ) ಆಯ್ಕೆಯಾಗಿದ್ದಾರೆ. ವಿಜೇತರಿಗೆ ಇದೇ ಮಂಗಳವಾರ ವಿಶ್ವಛಾಯಾಗ್ರಹಣ ದಿನದಂದು ಕುಶಾಲನಗರದ ಗೌಡ ಸಮಾಜದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತದೆ. ವಿಶ್ವಛಾಯಾಗ್ರಹಣ ದಿನದ ಸಂದಭ೯ ಕೊಡಗಿನ ಹಿರಿಯ ಛಾಯಾಗ್ರಾಹಕರಾದ ಮಹಮ್ಮದ್ ಹನೀಫ್ ಹಾಗೂ ಸಂದೀಪ್ ಅವರಿಗೆ ಸನ್ನಾನ ನೆರವೇರಲಿದೆ ಎಂದು ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ ಮಾಹಿತಿ ನೀಡಿದ್ದಾರೆ.









