Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಯುದ್ಧ ಕಾಲದಲ್ಲಿ ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ : ಬಿಜೆಪಿ ಅಸಮಾಧಾನ*
  • *ಭಾಗಮಂಡಲ ಹೋಬಳಿಯಲ್ಲಿ ಮಾ.21 ರಂದು ಶಾಸಕ ಎ.ಎಸ್.ಪೊನ್ನಣ್ಣರಿಂದ ಜನಸ್ಪಂದನಾ ಕಾರ್ಯಕ್ರಮ*
  • *ಯುಗಾದಿ, ರಂಜಾನ್ ರಜೆ ಮುಗಿಸಿ ಬರೋಕೆ ಬಂತು ಸ್ಪೆಷಲ್ ಟ್ರೈನ್!: ಯಾವ ಊರಿಗೆ ಯಾವ ಸಮಯ? ಇಲ್ಲಿದೆ ಕಂಪ್ಲೀಟ್ ‘ವೇಳಾಪಟ್ಟಿ’*
  • *ರಾಜ್ಯಕ್ಕೆ ತಟ್ಟಿದ ಇರಾನ್ ಯುದ್ಧದ ಬಿಸಿ: ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಶೇ. 80ರಷ್ಟು ಕಡಿತ; ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು!*
  • *20-03-2026 ಶುಕ್ರವಾರ ರಂಜಾನ್ – ಈದುಲ್ ಫಿತ್ರ್ ಶವ್ವಾಲ್ – 01*
  • *ಒತ್ತೋರ್ಮೆರ ಕೊಡವ ಕೂಟದ ಅಧ್ಯಕ್ಷರಾಗಿ ಚೆಟ್ಟೋಳಿರ ಶರತ್ ಸೋಮಣ್ಣ ಆಯ್ಕೆ*
  • *ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ನಿಧನ*
  • *ಒತ್ತೋರ್ಮೆರ ಕೊಡವ ಕೂಟದ ಅಧ್ಯಕ್ಷರಾಗಿ ಚೆಟ್ಟೋಳಿರ ಶರತ್ ಸೋಮಣ್ಣ ಆಯ್ಕೆ*
  • *ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ : ಸ್ಥಳದಲ್ಲೇ ಸವಾರ ಸಾವು : ಮತ್ತೊಬ್ಬರಿಗೆ ಗಂಭೀರ ಗಾಯ*
  • *ರಾಷ್ಟ್ರೀಯ ಹೆದ್ದಾರಿ ಬದಿಯ ಹಣ್ಣಿನ ಅಂಗಡಿ ಮತ್ತು ಗೂಡಂಗಡಿಗಳನ್ನು ಮಾ.23 ರೊಳಗೆ ತೆರವುಗೊಳಿಸಲು ಕಟ್ಟುನಿಟ್ಟಿನ ಸೂಚನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕ ಉದ್ಘಾಟನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕ ಉದ್ಘಾಟನೆ*

ಆಗಷ್ಟ್ 19, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ಆ.19 NEWS DESK : ಭವ್ಯ ರಾಷ್ಟ್ರದ ನಿರ್ಮಾಣದಲ್ಲಿ ಎನ್‌ಎಸ್‌ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಪಾತ್ರ ಅಪಾರವಾಗಿದೆ ಎಂದು ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್.ಸಾಲ್ಡಾನ್ಹಾ ಅವರು ಅಭಿಪ್ರಾಯಪಟ್ಟರು. ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎನ್ ಎಸ್ ಎಸ್ ಸಮಾಜ ಸೇವೆಯನ್ನು ಕಲಿಸಿದರೆ, ಯುವ ರೆಡ್ ಕ್ರಾಸ್ ಆರೋಗ್ಯದ ಪಾಠವನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಪ್ರಾಮಾಣಿಕತೆ, ಜವಾಬ್ದಾರಿಯುತ ಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಅರಿತಾಗ ಮಾತ್ರ ನೈಜ ಸೇವೆಯು ಸಮಾಜಕ್ಕೆ ದೊರಕುತ್ತದೆ. ಆ ನಿಟ್ಟಿನಲ್ಲಿ ಭವಿಷ್ಯದ ಹಿತದೃಷ್ಟಿಯಿಂದ ಸರ್ವರೂ ಸದೃಢ ರಾಷ್ಟ್ರದ ನಿರ್ಮಾಣಕ್ಕೆ ಮುಂದಾಗಬೇಕು. ಯಂಗ್ ಇಂಡಿಯಾ ಬಲಿಷ್ಠವಾಗಬೇಕೆಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಸಂತ ಅನ್ನಮ್ಮ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ.ಫಾ.ಮದಲೈ ಮುತ್ತು, ಸೇವಾ ಮನೋಭಾವನೆ ಎಂಬುವುದು ಎಲ್ಲರಲ್ಲಿಯೂ ಬರಬೇಕು. ಪರರ ಹಿತಕ್ಕಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಬೇಕು. ಶಿಸ್ತನ್ನು ಪರಿಪಾಲಿಸುವುದರ ಜೊತೆಗೆ ಸಂಸ್ಥೆಗೂ ಹಾಗೂ ಪೋಷಕರಿಗೂ ಕೀರ್ತಿಯನ್ನು ತರಬೇಕೆಂದು ಸಲಹೆ ನೀಡಿದರು. ಸಕ್ರಿಯವಾಗಿ ಕಾಲೇಜಿನ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕೆಂದು ಕಿವಿಮಾತು ಹೇಳಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ ಮಾತನಾಡಿ, ಈ ಎರಡೂ ಘಟಕಗಳು ನಮ್ಮ ಕಾಲೇಜಿನಲ್ಲಿ ಕ್ರಿಯಾಶೀಲ ಘಟಕಗಳಾಗಿದ್ದು ಇತ್ತೀಚಿಗೆ ನ್ಯಾಕ್ ಸಂಸ್ಥೆಯವರಿಂದ ಘಟಕಗಳ ಕಾರ್ಯಚಟುವಟಿಕೆಗಳಿಗೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ ಎಂದರು. ಈ ಘಟಕಗಳಿಂದ ಮತ್ತಷ್ಟು ವಿನೂತನ ಕಾರ್ಯಕ್ರಮಗಳು ಹೊರ ಹೊಮ್ಮಲ್ಲಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿ ಮಾತನಾಡಿ, ಎನ್ ಎಸ್ ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳು ನಮ್ಮ ವಿದ್ಯಾಸಂಸ್ಥೆಯಲ್ಲಿ ಪ್ರಮುಖವಾದ ಘಟಕಗಳಾಗಿದ್ದು, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ ಎಂದರು. ವಿದ್ಯಾಸಂಸ್ಥೆ ಹಾಗೂ ಸಂಸ್ಥೆಯ ಹೊರಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತಿದೆ ಎಂದು ಹೇಳಿದರು. ಕಾಲೇಜಿನ ಎನ್ ಎಸ್ ಎಸ್ ಘಟಕದ ಅಧಿಕಾರಿಗಳಾದ ಬಿ.ಎನ್.ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೇಸ್ ಸ್ವಾಗತಿಸಿದರು, ವಿದ್ಯಾರ್ಥಿನಿ ಪ್ರಕೃತಿ ನಿರೂಪಿಸಿದರು, ವಿದ್ಯಾರ್ಥಿ ಮುತ್ತಪ್ಪ ವಂದಿಸಿದರು. ವಿದ್ಯಾಸಂಸ್ಥೆಯ ವತಿಯಿಂದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆನೆಡಿಕ್ಟ್ ಆರ್ ಸಾಲ್ಡಾನ್ಹಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಉಪನ್ಯಾಸಕರು, ಎನ್ ಎಸ್ ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಸ್ವಯಂ ಸೇವಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಯುದ್ಧ ಕಾಲದಲ್ಲಿ ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ : ಬಿಜೆಪಿ ಅಸಮಾಧಾನ*

ಮಾರ್ಚ್ 20, 2026

*ಭಾಗಮಂಡಲ ಹೋಬಳಿಯಲ್ಲಿ ಮಾ.21 ರಂದು ಶಾಸಕ ಎ.ಎಸ್.ಪೊನ್ನಣ್ಣರಿಂದ ಜನಸ್ಪಂದನಾ ಕಾರ್ಯಕ್ರಮ*

ಮಾರ್ಚ್ 19, 2026

*ಯುಗಾದಿ, ರಂಜಾನ್ ರಜೆ ಮುಗಿಸಿ ಬರೋಕೆ ಬಂತು ಸ್ಪೆಷಲ್ ಟ್ರೈನ್!: ಯಾವ ಊರಿಗೆ ಯಾವ ಸಮಯ? ಇಲ್ಲಿದೆ ಕಂಪ್ಲೀಟ್ ‘ವೇಳಾಪಟ್ಟಿ’*

ಮಾರ್ಚ್ 19, 2026

*ಭಾಗಮಂಡಲ ಹೋಬಳಿಯಲ್ಲಿ ಮಾ.21 ರಂದು ಶಾಸಕ ಎ.ಎಸ್.ಪೊನ್ನಣ್ಣರಿಂದ ಜನಸ್ಪಂದನಾ ಕಾರ್ಯಕ್ರಮ*

ಮಾರ್ಚ್ 19, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.19 : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಭಾಗಮಂಡಲ…

*ಯುಗಾದಿ, ರಂಜಾನ್ ರಜೆ ಮುಗಿಸಿ ಬರೋಕೆ ಬಂತು ಸ್ಪೆಷಲ್ ಟ್ರೈನ್!: ಯಾವ ಊರಿಗೆ ಯಾವ ಸಮಯ? ಇಲ್ಲಿದೆ ಕಂಪ್ಲೀಟ್ ‘ವೇಳಾಪಟ್ಟಿ’*

ಮಾರ್ಚ್ 19, 2026

*ರಾಜ್ಯಕ್ಕೆ ತಟ್ಟಿದ ಇರಾನ್ ಯುದ್ಧದ ಬಿಸಿ: ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಶೇ. 80ರಷ್ಟು ಕಡಿತ; ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು!*

ಮಾರ್ಚ್ 19, 2026

*20-03-2026 ಶುಕ್ರವಾರ ರಂಜಾನ್ – ಈದುಲ್ ಫಿತ್ರ್ ಶವ್ವಾಲ್ – 01*

ಮಾರ್ಚ್ 19, 2026

*ಒತ್ತೋರ್ಮೆರ ಕೊಡವ ಕೂಟದ ಅಧ್ಯಕ್ಷರಾಗಿ ಚೆಟ್ಟೋಳಿರ ಶರತ್ ಸೋಮಣ್ಣ ಆಯ್ಕೆ*

ಮಾರ್ಚ್ 19, 2026

*ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ನಿಧನ*

ಮಾರ್ಚ್ 19, 2026

*ಒತ್ತೋರ್ಮೆರ ಕೊಡವ ಕೂಟದ ಅಧ್ಯಕ್ಷರಾಗಿ ಚೆಟ್ಟೋಳಿರ ಶರತ್ ಸೋಮಣ್ಣ ಆಯ್ಕೆ*

ಮಾರ್ಚ್ 19, 2026

*ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ : ಸ್ಥಳದಲ್ಲೇ ಸವಾರ ಸಾವು : ಮತ್ತೊಬ್ಬರಿಗೆ ಗಂಭೀರ ಗಾಯ*

ಮಾರ್ಚ್ 19, 2026

*ರಾಷ್ಟ್ರೀಯ ಹೆದ್ದಾರಿ ಬದಿಯ ಹಣ್ಣಿನ ಅಂಗಡಿ ಮತ್ತು ಗೂಡಂಗಡಿಗಳನ್ನು ಮಾ.23 ರೊಳಗೆ ತೆರವುಗೊಳಿಸಲು ಕಟ್ಟುನಿಟ್ಟಿನ ಸೂಚನೆ*

ಮಾರ್ಚ್ 19, 2026

*ನೂತನ ಡಿಸಿಪಿಯಾಗಿ ಅಧಿಕಾರ ಸ್ವೀಕಾರ*

ಮಾರ್ಚ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.