
ಸುಂಟಿಕೊಪ್ಪ, ಆ.19 NEWS DESK : ಕಂಬಿಬಾಣೆ ಕಮಲ ನೆಹರು ಯುವತಿ ಮಂಡಳಿ ವತಿಯಿಂದ ಮೂರನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಠಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅನ್ನಪೂರ್ಣೇಶ್ವರಿ ಫಂಕ್ಷನ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಟಾಣಿ ರಾಧ-ಕೃಷ್ಣರು ಗಮನ ಸೆಳೆದರು. ಕೃಷ್ಣ-ರಾಧೆ ಸ್ಪರ್ಧೆಗಳಲ್ಲಿ 6 ತಿಂಗಳಿನಿಂದ 2 ವರ್ಷದ ಮಕ್ಕಳಿಗೆ ಮುದ್ದು ಕೃಷ್ಣ, 3 ವರ್ಷದಿಂದ 5 ವರ್ಷದದೊಳಗಿನ ಮಕ್ಕಳಿಗೆ ಬಾಲಕೃಷ್ಣ, 6 ವರ್ಷದಿಂದ 12 ವರ್ಷ ಮಕ್ಕಳಿಗೆ ತುಂಟ ಕೃಷ್ಣ ಸ್ಪರ್ಧೆ, ಅದೇ ರೀತಿಯಲ್ಲಿ 6 ತಿಂಗಳಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಮುದ್ದು ರಾಧೆ, 6 ವರ್ಷದಿಂದ 12 ವರ್ಷದ ಮಕ್ಕಳಿಗೆ ರಾಧ ಮಣಿ ಹಾಗೂ ಮಹಿಳೆಯರಿಗೆ ಯಶೋಧ ಸ್ಪರ್ಧೆ ನಡೆಯಿತು. ಅಲ್ಲದೇ 1 ವರ್ಷದಿಂದ 12 ವರ್ಷದ ಮಕ್ಕಳಿಗೆ ಛದ್ಮವೇಷ ಸ್ಪಧೆರ್É ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮಲ ಯುವತಿ ಮಂಡಳಿಯ ಅಧ್ಯಕ್ಷೆ ವೀಣಾ ರಾಮಚಂದ್ರ ವಹಿಸಿದ್ದರು. ಸುಮಾರು 90 ಮಕ್ಕಳು ಕೃಷ್ಣ-ರಾಧೆ ಮತ್ತು ಯಶೋದೆಯ ವೇಷವನ್ನು ಧರಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ, ದ್ವಿತೀಯ ಬಹುಮಾನದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರೋತ್ಸಾಹ ಬಹುಮಾನವನ್ನು ನೀಡಲಾಯಿತು. ಕೊನೆಗೆ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನು ಮಹಿಳೆಯರಿಗೆ ಮತ್ತು ಪುರುಷರಿಗೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಕಂಬಿಬಾಣೆ, ಅತ್ತೂರು ನಲ್ಲೂರು, ಚಿಕ್ಲಿಹೊಳೆ, ಕೊಡಗರಹಳ್ಳಿ, ಉಪ್ಪುತೋಡು ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು. ಈ ಸಂದರ್ಭ ಯುವತಿ ಮತ್ತು ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.









