

ಮಡಿಕೇರಿ NEWS DESK ಆ.24 : ವಿಶ್ವ ಹಿಂದೂ ಪರಿಷತ್ ಕುಶಾಲನಗರ ಘಟಕದ ವತಿಯಿಂದ ಕುಶಾಲನಗರದಲ್ಲಿ ಗೋಕುಲೋತ್ಸವ ಕಾರ್ಯಕ್ರಮ ನಡೆಯಿತು. 60ಕ್ಕೂ ಹೆಚ್ಚು ಪುಟಾಣಿಗಳು, ಶ್ರೀಕೃಷ್ಣ ರಾಧೆಯರಾಗಿ ವೇದಿಕೆಯಲ್ಲಿ ಸಂಭ್ರಮಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ಉಪನ್ಯಾಸಕಿ ಕೆ.ಜಯಲಕ್ಷ್ಮಿ ಅವರು ಶ್ರೀ ಕೃಷ್ಣನ ಉಪದೇಶ ಮತ್ತು ಬಾಲ್ಯವನ್ನು ವಿವರಿಸಿದರು. ಶ್ರೀಕೃಷ್ಣನ ಉಪದೇಶ ಪಾಲನೆಯಿಂದ ಜೀವನ ಸಾಕ್ಷಾತ್ಕಾರ ಎಂದು ವಿವರಿಸಿದರು. ತಿರುಪತಿ ಭಜನಾ ಮಂಡಳಿಯ ಮುಖ್ಯಸ್ಥೆ ಪದ್ಮಾ ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು. ಸುಂಟಿಕೊಪ್ಪದ ಕುಮಾರಿ ಶ್ರೀಶ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುಟಾಣಿಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಶಂಸನಾ ಪತ್ರ ನೀಡಲಾಯಿತು.







































