


ಮಡಿಕೇರಿ ಆ.25 NEWS DESK : ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಭಾಗಮಂಡಲ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕೊಟ್ಟೂರು ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ವಿದ್ಯಾಸಂಸ್ಥೆಯ ಪಿ.ಎನ್.ಜೀವ ನಾಣಯ್ಯ 400 ಮೀಟರ್ ಓಟದಲ್ಲಿ ಪ್ರಥಮ, 800 ಮೀಟರ್ ಓಟದಲ್ಲಿ ಆದರ್ಶ್ ಕೆ.ಬಿ.ದ್ವಿತೀಯ, 400 ಮೀಟರ್ ಓಟದಲ್ಲಿ ಕೆ.ಎಲ್.ಯಶ್ವಿನ್ ಎರಡನೇ ಸ್ಥಾನ, ಬಾಲಕರ 4×400 ರೀಲೆಯಲ್ಲಿ ದ್ವಿತೀಯ ಸ್ಥಾನ ಭಾರದ ಗುಂಡು ಹಾಗೂ ತಟ್ಟೆ ಎಸೆತದಲ್ಲಿ ಪಿ. ಸಿ ಶರಣ್ ಚಂಗಪ್ಪ ಪ್ರಥಮ ಸ್ಥಾನ, ಜಾವೇಲಿನ್ ಎಸೆತದಲ್ಲಿ ಆಶಿಕ್ ಮಂದಣ್ಣ ಕೆ. ಪಿ ಪ್ರಥಮ ಸ್ಥಾನ, ಬಾಲಕಿಯರ ಭಾರದ ಗುಂಡು ಎಸೆತದಲ್ಲಿ ಚಸ್ಮಿತಾ ಪ್ರಥಮ, ತಟ್ಟೆ ಎಸೆತದಲ್ಲಿಶಿವಾನಿ ಕೆ. ಸಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಬಾಲಕಿಯರ 200 ಮೀಟರ್ ಓಟದಲ್ಲಿ ವರುಣಿಕ ಪಿ. ಎಂ. ಮೂರನೇ, ಬಾಲಕರ ಫುಟ್’ಬಾಲ್ ಹಾಗೂ ಕಬಡ್ಡಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತಾಲ್ಲೂಕು ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಈ ಶಾಲೆಯ ವನ್ಯಕೃಷ್ಣ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿ ಸಾಧನೆ ಮಾಡಿದ್ದಾರೆ. ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳೊಂದಿಗೆ ಸಂಸ್ಥೆಯ ಮುಖ್ಯಶಿಕ್ಷಕರಾದ ಕುದುಪಜೆ ಕವನ್ ಕುಮಾರ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿಯಾದ ಸ್ವರೂಪ್ ಕೆ.ಬಿ., ದೈಹಿಕ ಶಿಕ್ಷಕಿಯಾದ ಸೀಮಾ ಕರವಂಡ, ತಂಡದ ವ್ಯವಸ್ಥಾಪಕರಾದ ಸಜನಿ ಎ.ಟಿ.,ಅನಿಲ್ ಯು.ಎಂ. ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.








