

ಮೂರ್ನಾಡು ಆ.26 NEWS DESK : ಮೂರ್ನಾಡು ಪಟ್ಟಣ ಮತ್ತು ವಿವಿಧೆಡೆ ಆ.27ರಂದು ವಿವಿಧ ಸಂಘ ಸಂಸ್ಥೆಗಳಿಂದ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಗೌರಿ-ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು. ಮೂರ್ನಾಡಿನ ವೆಂಕಟೇಶ್ವರ ಕಾಲೋನಿಯ ವಿನಾಯಕ ಯುವಕ ಮಂಡಳಿಯ ವತಿಯಿಂದ 34ನೇ ವರ್ಷದಗೌರಿ-ಗಣೇಶೋತ್ಸವದ ಗಣೇಶನ ಉತ್ಸವ ಮೂರ್ತಿಯನ್ನು ಬೆ.10 ಗಂಟೆಗೆ ಪ್ರತಿಷ್ಠಾಪಿಸಲಾಗುವುದು. ಮೂರ್ನಾಡುಗಾಂಧಿನಗರದ ಶ್ರೀರಾಮ ಮಂದಿರ ಸೇವಾ ಸಮಿತಿಯ ವತಿಯಿಂದ 33ನೇ ವರ್ಷದ ಗೌರಿ-ಗಣೇಶೋತ್ಸವ ಗಾಂಧಿನಗರದ ಶ್ರೀರಾಮ ಮಂದಿರದಲ್ಲಿನಡೆಯಲಿದೆ. ವಿಘ್ನೇಶ್ವರ ಸೇವಾ ಸಮಿತಿಯ ವತಿಯಿಂದ ಮೂರ್ನಾಡು ಪಟ್ಟಣದ ಟಿ ಜಂಕ್ಷನ್‍ನಲ್ಲಿ 31ನೇ ವರ್ಷದ ಗೌರಿ-ಗಣೇಶೋತ್ಸವ, ಗಜೇಂದ್ರ ಯುವ ಶಕ್ತಿ ಸಂಘದ ವತಿಯಿಂದ 6ನೇ ವರ್ಷದಗೌರಿ-ಗಣೇಶೋತ್ಸವ ನಾಪೋಕ್ಲು ರಸ್ತೆಯ ಹನುಮಾನ್‍ಟ್ರೇಡರ್ಸ್‍ನಲ್ಲಿ, ಅಯ್ಯಪ್ಪ ಗೆಳೆಯರ ಬಳಗ, ಎಂ-ಟೌನ್ ವತಿಯಿಂದ 2ನೇ ವರ್ಷದಗೌರಿ-ಗಣೇಶೋತ್ಸವ ಅಯ್ಯಪ್ಪ ದೇವಸ್ಥಾನದ ವಾಣಿಜ್ಯ ಕಟ್ಟಡದಲ್ಲಿ, ಕೋಡಂಬೂರಿನ ವಿಘ್ನೇಶ್ವರ ಗೆಳೆಯರ ಬಳಗದಿಂದ 17ನೇ ವರ್ಷದಗೌರಿ-ಗಣೇಶೋತ್ಸವ ನಡೆಯಲಿದೆ. ಆ.27 ರಿಂದ ಆ.2ರವರೆಗೆ ಪ್ರತಿಷ್ಠಾಪಿಸಲಾದಗಣೇಶ ಮೂರ್ತಿಗಳನ್ನು ಪೂಜಾ ವಿಧಿ-ವಿಧಾನಗಳ ಮೂಲಕ 7 ದಿನಗಳವರೆಗೆ ಶ್ರದ್ಧಾಭಕ್ತಿಯಿಂದ ಪೂಜಿಸಿ, ಆ.2ರಂದು ಅಲಂಕೃತ ಮಂಟಪದಲ್ಲಿ ಗಣೇಶಉತ್ಸವ ಮೂರ್ತಿಯನ್ನಿರಿಸಿ, ಮೂರ್ನಾಡು ಮುಖ್ಯ ಬೀದಿಗಳಲ್ಲಿ ಶೋಭಯಾತ್ರೆ ನಡೆಸಿ ಬಲಮುರಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುವುದು. ಹಾಗೆಯೇ ಗಜಾನನ ಯುವಕ ಸಂಘದ ವತಿಯಿಂದ 22ನೇ ವರ್ಷದಗೌರಿ-ಗಣೇಶೋತ್ಸವ, ಗಣೇಶ ಬಾಲಕರ ಬಳಗದ ವತಿಯಿಂದ 2ನೇ ವರ್ಷದ ಗೌರಿ-ಗಣೇಶೋತ್ಸವ ನಡೆಯಲಿದ್ದು, ಅದೇ ದಿನದಂದು ಅಲಂಕೃತ ಮಂಟಪದಲ್ಲಿ ಶೋಭಯಾತ್ರೆಯೊಂದಿಗೆ ಬಲಮುರಿಯಕಾವೇರಿ ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಎಂ. ಬಾಡಗದ ವಿನಾಯಕ ಗೆಳೆಯರ ಬಳಗದ ವತಿಯಿಂದ ಎಂ. ಬಾಡಗದಲ್ಲಿ 9ನೇ ವರ್ಷದಗೌರಿ-ಗಣೇಶೋತ್ಸವ ನಡೆಯಲಿದ್ದು, ಉತ್ಸವ ಮೂರ್ತಿಯನ್ನು ಆ.31ರಂದು ಎಂ. ಬಾಡಗ ಗ್ರಾಮದಲ್ಲಿ ಅಲಂಕೃತ ಮಂಟಪದಲ್ಲಿ ಶೋಭಯಾತ್ರೆಯೊಂದಿಗೆ ಕೊಂಡೊಯ್ದು ಬೇತ್ರಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುತ್ತದೆ.
ವರದಿ : ಟಿ.ಸಿ. ನಾಗರಾಜ್, ಮೂರ್ನಾಡು.








