
ಮಡಿಕೇರಿ NEWS DESK ಆ.27 : ಕೊಂಡಗೇರಿಯಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ಸಣ್ಣುವoಡ ರಶ್ಮಿ ಪೊನ್ನಮ್ಮ, ಬೊಳ್ಳೆ ಪoಡ ದೀಪ್ತಿ ತಂಗಮ್ಮ, ಪಳೆಯಂಡ ಕಾಜಲ್ ಪಿ.ಸಿ, ಸೃಷ್ಟಿ ಬಿ.ಸ್, ಹೈಜಾ ಬಿ.ಐ,ನಿಲ್ಮಾಡ್ ತನ್ಯಾ ರೈ, ಕುಟ್ಟನ ಎo. ಯಶ್ಮಿತ, ಪುಚ್ಚಿ ಮಂಡ ಯು ತನಿಶಾ ವಿಜೇತ ವಿದ್ಯಾರ್ಥಿಗಳಾಗಿದ್ದಾರೆ. ಶಾಲೆಯ ದೈಹಿಕ ಶಿಕ್ಷಕರುಗಳಾದ ಮೋನಿಕಾ ಬಿ.ಎಸ್ ಹಾಗೂ ಲಾವಣ್ಯ ಮಾರ್ಗದರ್ಶನ ನೀಡಿದ್ದಾರೆ. ಈ ತಂಡದ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕಿ, ಸಂಯೋಜಿಕಿ ಹಾಗೂ ಬೋಧಕ ಬೋಧಕೇತರ ವೃಂದದವರು, ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








