
ಮಡಿಕೇರಿ ಆ.28 NEWS DESK : ವಿರಾಜಪೇಟೆಯ ಕುಂಜಲಗೇರಿ ನಿವಾಸಿಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಅಳವಡಿಸಿದ ನೂತನ ವಿದ್ಯುತ್ ಮಾರ್ಗ ವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಈ ಹಿಂದೆ ಕುಂಜಲಗೇರಿ ನಿವಾಸಿಗಳಿಗೆ/ಗ್ರಾಹಕರಿಗೆ ಪಾರಣೆ-ಬೊಳ್ಳುಮಾಡು 11 ಕೆವಿ HT ಫೀಡರಿನ ಮೂಲಕ ವಿದ್ಯುತ್ ಸರಬರಾಜು ಮಾಡಲಾಗಿತ್ತು. ಆದರೆ ಮಳೆಗಾಲದಲ್ಲಿ ಮತ್ತು ಪಾರಣೆಯಲ್ಲಿ-ಮೂರ್ನಾಡು 33/11 ಕೆವಿ ಉಪಕೇಂದ್ರದಲ್ಲಿ ಅಡಚಣೆಯಾದಾಗ, ಕುಂಜಲಗೇರಿ ಗ್ರಾಹಕರಿಗೆ ಹಲವು ದಿನಗಳ ಕಾಲ ವಿದ್ಯುತ್ ಸಂಪರ್ಕ ಇರುತ್ತಿರಲಿಲ್ಲ. ಇದನ್ನು ಮನಗಂಡ ಶಾಸಕರು ವಿರಾಜಪೇಟೆ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು, ಬೊಳ್ಳುಮಾಡು ಸೇತುವೆಯಿಂದ ಕುಂಜಲಗೇರಿ ಮೊದಲ ಟ್ರಾನ್ಸ್ಫರ್ ವರೆಗೆ ಸುಮಾರು 3 ಕಿಲೋ ಮೀಟರ್ ಉದ್ದಕ್ಕೆ, ಇನ್ಸಲೇಟೆಡ್ ಕವರ್ಡ್ ಕಂಡಕ್ಟರ್ (Insulated Covered Conductor) ಆಳವಡಿಸುವುದರ ಮೂಲಕ ಹಾಗೂ 85 ಹೊಸ ವಿದ್ಯುತ್ ಕಂಬಗಳನ್ನು ಉಪಯೋಗಿಸಿ, ಸುಮಾರು 1 ಕೋಟಿ ವೆಚ್ಚದಲ್ಲಿ ವಿದ್ಯುತ್ ಪೂರೈಸಲು ಕ್ರಮ ಕೈಗೊಂಡಿದ್ದರು. ಸ್ಥಳೀಯ ಗ್ರಾಮಸ್ಥರು ಹಾಗೂ ಯುವಕರುಶಾಸಕರಿಗೆ ಧನ್ಯವಾದಗಳು ಅರ್ಪಿಸಿದರು.
ಈ ಸಂದರ್ಭ ಯೂನಿಯನ್ ಅಧ್ಯಕ್ಷರು ಹಾಗೂ ವಲಯ ಅಧ್ಯಕ್ಷರು ಬಟ್ಟಕಳಂದ ರಾಜ, ಪ್ರಮುಖರಾದ ದಯಾ ಬಿ ಎಚ್, ಲೋಕೇಶ್ ಮಾದಯ್ಯ, ಅಜಿತ್, ನವೀನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.








