
ನಾಪೋಕ್ಲು ಸೆ.19 NEWS DESK : ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ “ಬದುಕಿಗೊಂದು ಆಸರೆಯಾಗೋಣ” ಕಾರ್ಯಕ್ರಮದ ಅಡಿಯಲ್ಲಿ ಸಂಗ್ರಹಿಸಿದ ಸಹಾಯಧನವನ್ನು ಸಮುದಾಯದ ನೊಂದ ಕುಟುಂಬಕ್ಕೆ ನೀಡಿ ಸಾಂತ್ವನ ಹೇಳಿದರು. ಅನಾರೋಗ್ಯದಿಂದ ಬಳಲುತ್ತಿರುವ ಚೇರಂಬಾಣೆಯ ಶಿವಣ್ಣ ಅವರ ಪತ್ನಿ ಗೀತಾ ಅವರ ಚಿಕಿತ್ಸೆಗೆ ಜಿಲ್ಲೆಯ ಕುಲಬಾಂಧವರಿಂದ ಸಂಗ್ರಹಗೊಂಡ 40,700 ರೂ. ಸಹಾಯಧವನ್ನು ಜಿಲ್ಲಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅವರ ಮನೆಗೆ ತೆರಳಿ, ಯೋಗಕ್ಷೇಮ ವಿಚಾರಿಸಿ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಕೆ.ಕುಶಾಲಪ್ಪ ಮೂಲ್ಯ, ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಕುಲಬಾಂಧವರು ನೀಡಿದ ದೇಣಿಗೆಯನ್ನು ಶಿವಣ್ಣ ದಂಪತಿಗಳಿಗೆ ನೀಡಲಾಗಿದೆ. ಸರ್ವ ರೀತಿಯ ಸಹಕಾರ ನೀಡಿದ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಕುಲಬಾಂಧವರಿಗೆ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು. ಮುಂದೆಯೂ ಇದೇ ರೀತಿಯ ಸಹಕಾರ ದೊರಕಲಿ ಎಂದು ವಿನಂತಿಸಿದರು.
ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಉಪಾಧ್ಯಕ್ಷರಾದ ಕೆ ದಾಮೋದರ್, ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ, ಖಜಾಂಚಿ ಗಿರೀಶ್ ಮಡಿಕೆಬೀಡು, ಅಶ್ವತ್ ಮಡಿಕೆಬೀಡು, ವಿಠಲ್ ಮಡಿಕೆಬೀಡು, ಮತ್ತು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.










