Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಗುರುಕಾರೋಣನಿಗೆ ಪೂಜೆ, ತೆಂಗಿನಕಾಯಿಗೆ ಗುಂಡು : ಚೆಟ್ಟಳ್ಳಿಯಲ್ಲಿ ಕೈಲ್ ಪೊಳ್ದ್ ಸಂಭ್ರಮ*
  • *ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಲ್ಲುಮಠದ ಶ್ರೀ ಶಿವಕುಮಾರ ಸ್ವಾಮೀಜಿ ಶಾಲೆಗೆ ಸಮಗ್ರ ಚಾಂಪಿಯನ್‌ಶಿಪ್*
  • *ಪ್ರಾಥಮಿಕ ವಲಯ ಮಟ್ಟದ ಕ್ರೀಡಾಕೂಟ: ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಶಾಲಾ ತಂಡಕ್ಕೆ ಜಯ*
  • *ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ರನ್ನರ್ಸ್‌ ಅಪ್‌ ಆದ ಕಾವೇರಿ ಶಾಲಾ ಬಾಲಕರ ತಂಡ*
  • *ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಶಾಲಾ ಬಾಲಕಿಯರ ತಂಡಕ್ಕೆ ಪ್ರಶಸ್ತಿ*
  • *ಪ್ರಾಥಮಿಕ ವಲಯ ಮಟ್ಟದ ಕ್ರೀಡಾಕೂಟ : ಖೋ ಖೋ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ಬಾಲಕ ಮತ್ತು ಬಾಲಕಿಯರ ತಂಡ ದ್ವಿತೀಯ*
  • *ವಲಯ ಮಟ್ಟದ ಅಥ್ಲೆಟಿಕ್ಸ್‌ : ಕಾವೇರಿ ಶಾಲಾ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ*
  • *ವಲಯ ಮಟ್ಟದ ಕ್ರೀಡಾ ಕೂಟ : ಖೋ ಖೋ ಪಂದ್ಯಾವಳಿಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ರನ್ನರ್ಸ್ ಆದ ಕಾವೇರಿ ಶಾಲಾ ತಂಡ* 
  • *ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿ : ವಿಜೇತರಾದ ಕಾವೇರಿ ಶಾಲಾ ತಂಡ* 
  • *ಸೆ.5 ರಂದು ಪ್ರಜಾಸೇವಾ ಆಂದೋಲನಾ ಸಭೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»ಸೆ.25 ರಂದು ಮಡಿಕೇರಿಯಲ್ಲಿ ‘ಬಹುಭಾಷಾ ಕವಿಗೋಷ್ಠಿ : ನಾಡಿನ ವಿವಿಧೆಡೆಗಳ 77 ಕವಿಗಳಿಂದ ಕವನ ವಾಚನ : ಮೆರುಗು ನೀಡಲಿರುವ ಕೆ.ಜಿ.ಎಫ್ ಚಲನ ಚಿತ್ರ ಖ್ಯಾತಿಯ ಸಾಹಿತಿ ಕಿನ್ನಾಳ ರಾಜ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸೆ.25 ರಂದು ಮಡಿಕೇರಿಯಲ್ಲಿ ‘ಬಹುಭಾಷಾ ಕವಿಗೋಷ್ಠಿ : ನಾಡಿನ ವಿವಿಧೆಡೆಗಳ 77 ಕವಿಗಳಿಂದ ಕವನ ವಾಚನ : ಮೆರುಗು ನೀಡಲಿರುವ ಕೆ.ಜಿ.ಎಫ್ ಚಲನ ಚಿತ್ರ ಖ್ಯಾತಿಯ ಸಾಹಿತಿ ಕಿನ್ನಾಳ ರಾಜ್*

ಸೆಪ್ಟೆಂಬರ್ 23, 20253 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಸೆ.23 NEWS DESK : ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ‘ಬಹುಭಾಷಾ ಕವಿ ಗೋಷ್ಠಿ’ ಸೆ.25 ರಂದು ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ದಿನ ಪೂರ್ತಿ ನಡೆಯುವ ಮೂಲಕ, ಸಾಹಿತ್ಯ ಪ್ರೇಮಿಗಳಿಗೆ ರಸದೌತಣ ಉಣಬಡಿಸಲಿದೆಯೆಂದು ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷರಾದ ಉಜ್ವಲ್ ರಂಜಿತ್ ತಿಳಿಸಿದ್ದಾರೆ. ಬಹುಭಾಷಾ ಕವಿಗೋಷ್ಠಿಯ ಆರಂಭಕ್ಕೂ ಮುನ್ನ ಅಂದು ಬೆಳಗ್ಗೆ 9 ಗಾಂಧಿ ಮೈದಾನ ರಸ್ತೆಯ ಬಳಿಯಲ್ಲಿರುವ, ಡಿಸಿಸಿ ಬ್ಯಾಂಕ್ ಮುಂಭಾಗದ ‘ಕುವೆಂಪು ಪುತ್ತಳಿ’ಗೆ ಪುಷ್ಪನಮನ ಸಲ್ಲಿಸುವ ಮೂಲಕ ಕವಿಗೋಷ್ಠಿಯ ಅಧ್ಯಕ್ಷರಾದ ಸಾಹಿತಿ ಸುನೀತಾ ಲೋಕೇಶ್ ಅವರು, ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷರಾದ ಉಜ್ವಲ್ ರಂಜಿತ್ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಚಾಲನೆ ನೀಡಲಿದ್ದಾರೆೆ. ಕಲಾ ಸಂಭ್ರಮ ವೇದಿಕೆಯಲ್ಲಿ ಬಳಿಕ ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳುವ ಬಹುಭಾಷಾ ಕವಿಗೋಷ್ಠಿಯನ್ನು ಕರ್ನಾಟಕ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾ ನಿರ್ದೇಶಕರು, ಸಮಾಜಸೇವಕರಾದ ಹರಪಳ್ಳಿ ರವೀಂದ್ರ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ವಹಿಸಲಿದ್ದಾರೆ. ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಸುನೀತಾ ಲೋಕೇಶ್ ವಹಿಸಲಿದ್ದು, ವಿಶೇಷ ಅತಿಥಿಯಾಗಿ ಕೆ.ಜಿ.ಎಫ್., ಸಲಾರ್ ಚಲನ ಚಿತ್ರ ಖ್ಯಾತಿಯ ಸಾಹಿತಿ ಕಿನ್ನಾಳ ರಾಜ್ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ರೆಡ್ ಕ್ರಾಸ್ ಸಭಾಪತಿಗಳಾದ ಬಿ.ಕೆ. ರವೀಂದ್ರ ರೈ, ನಗರಸಭಾ ನಿವೃತ್ತ ಪೌರಾಯುಕ್ತರಾದ ಬಿ.ಬಿ.ಪುಷ್ಪಾವತಿ, ನಿವೃತ್ತ ಸೇನಾಧಿಕಾರಿ ಹಾಗೂ ಸಾಹಿತಿಗಳಾದ ಕ್ಯಾಪ್ಟನ್ ಬಿದ್ದಂಡ ನಾಣಯ್ಯ(ನಾಣಿ), ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಪ್ರತೀಪ್, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷರಾದ ಪಿ.ಕಲಾವತಿ, ಕಾರ್ಯಾಧ್ಯಕ್ಷರಾದ ಬಿ.ಕೆ. ಅರುಣ್ ಕುಮಾರ್, ಉಪಾಧ್ಯಕ್ಷರಾದ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ ಪಾಲ್ಗೊಳ್ಳಲಿದ್ದಾರೆ. :: ‘ಕಾವ್ಯ ಕಲರವ’ ಅನಾವರಣ :; ಬಹುಭಾಷಾ ಕವಿಗೋಷ್ಠಿಗೆ ಆಯ್ಕೆಯಾದ ಕವನಗಳ ಸಂಕಲನ ‘ಕಾವ್ಯ ಕಲರವ’ವನ್ನು ಬಹುಭಾಷಾ ಕವಿಗೋಷ್ಠಿ ಅಧ್ಯಕ್ಷಷರಾದ ಸುನೀತಾ ಲೋಕೇಶ್ ಅವರು ಅನಾವರಣಗೊಳಿಸಲಿದ್ದಾರೆ. ಇದೇ ಸಂದರ್ಭ ಡಿ.ಹೆಚ್.ಪುಷ್ಪ ಅವರು ರಚಿಸಿರುವ ‘ಸಂವೇದನೆ’ ಕವನ ಸಂಕಲನ ಮತ್ತು ಶೋಭಾ ರಕ್ಷಿತ್ ಅವರ ‘ಮನಸೆಳೆದ ಹಿಮಗಿರಿ’ ಪ್ರವಾಸ ಕಥನ ಪುಸ್ತಕಗಳನ್ನು ಅತಿಥಿ ಗಣ್ಯರು ಬಿಡುಗಡೆ ಮಾಡಲಿದ್ದಾರೆ. ಕವಿಗೋಷ್ಠಿಯ ಕವನ ವಾಚನದ ಬಳಿಕ ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷರಾದ ಉಜ್ವಲ್ ರಂಜಿತ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳಾದ ಬಿ.ಆರ್. ಜೋಯಪ್ಪ ಪಾಲ್ಗೊಳ್ಳಲಿದ್ದಾರೆ. :: 77 ಕವನಗಳ ವಾಚನ :: ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಗೆ ಈ ಬಾರಿ 77 ಕವಿಗಳು ರಚಿಸಿರುವ ಕವನಗಳು ಆಯ್ಕೆಯಾಗಿದ್ದು, ಇವುಗಳ ವಾಚನ ನಡೆಯಲಿದೆ.  ಈ ಬಾರಿ ಬಹುಭಾಷಾ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ಸುಮಾರು 207ಕ್ಕೂ ಅಧಿಕ ಕವಿಗಳು, ಕವಯತ್ರಿಯರು ಹಾಗೂ ಮಕ್ಕಳು ಸ್ವರಚಿತ ಕವನವನ್ನು ಕವಿಗೋಷ್ಠಿ ಸಮಿತಿಗೆ ಕಳುಹಿಸಿಕೊಟ್ಟಿದ್ದು. ಕೊಡಗಿನ ಹಿರಿಯ ಹಾಗೂ ಅನುಭವಿ ಸಾಹಿತಿಗಳ ಸಹಕಾರದೊಂದಿಗೆ  77ಕವನಗಳನ್ನು ಕವಿಗೋಷ್ಠಿಗೆ ಆಯ್ಕೆ ಮಾಡಲಾಗಿದೆ. :: ಕನ್ನಡ ಕವನಗಳ ವಾಚನ ಮಾಡುವವರು :: ಅಯ್ಯೇಟ್ಟಿ ಶ್ರುತಿ ವೈದ್ಯ, ಡಾ.ಅನುರಾಧಾ ಕುರುಂಜಿ, ಸೌಮ್ಯ ಶೆಟ್ಟಿ ಬಿ.ಬಿ, ದೀಪಿಕಾ ರಾಘವೇಂದ್ರ, ನಿರ್ಮಲ ಪೂವಯ್ಯ,ಅಲ್ಲಾರಂಡ ವಿಠಲ ನಂಜಪ್ಪ, ಲಲಿತ ಎಂ.ಕೆ, ವೇಣುಗೋಪಾಲ್ ಹೆಚ್.ಎಸ್., ಸಂತೋಷ ಹೆಚ್.ಎಸ್., ಪೂರ್ಣಿಮಾ ಜೋಶಿ, ಕುಕ್ಕನೂರು ರೇಷ್ಮ ಮನೋಜ್, ಈರಮಂಡ ಹರಿಣಿ ವಿಜಯ್, ಬಿ.ಆರ್ ರಾಮಚಂದ್ರ ರಾವ್, ಕಡ್ಲೇರ ಆಶಾ ಧರ್ಮಾಪಾಲ್,  ಮುಕ್ಕಾಟಿ ಹರಿಣಿ ಗಿರೀಶ್, ಸುಜಾತ ಪಿ.ಈ., ಗಾಯತ್ರಿ ರಾಜೀವ್, ಹೇಮಲತಾ ಪೂರ್ಣಪ್ರಕಾಶ್, ವಿಜಯಶ್ರೀ ಅನಿಲ್ ಕೆದಿಲಾಯ, ಜಲಕಾಳಪ್ಪ, ಮಂಜುನಾಥ್ ಹೆಚ್. ಚಿರಕನಹಳ್ಳಿ, ರಾಧಿಕಾ ವಿಶ್ವನಾಥ್, ಚೇತನ್ ಬಿ.ಎಸ್, ಪುಷ್ಪ ಶಿವರಾಂ ರೈ ಹಾಗೂ ಕಿಗ್ಗಾಲು ಗಿರೀಶ್.  :: ಇಂಗ್ಲಿಷ್ ವಿಭಾಗ :: ಮನ ಕೆ.ಆರ್, ಸಂಜನ ಎನ್ ಜೆ, ಜೀವಿತ ಕೆ.ಆರ್, ಡಾ.ವಾಣಿ ರಾಘವೇಂದ್ರ, ಬಿ.ಜಿ. ಅನಂತಶಯನ.  :: ಕೊಡವ ಭಾಷೆ :: ಕದ್ದಣಿಯಂಡ ವಂದನ ಚಿಣ್ಣಪ್ಪ, ಆರತಿ ಪೂಣಚ್ಚ ಕುಪ್ಪಂಡ, ಮೈನಾ ಚಂಗಪ್ಪ ಕುಮ್ಮಂಡ, ಬಾದುಮಂಡ ಬೀನಾ ಕಾಳಯ್ಯ, ವೈಲೇಶ ಪಿ.ಎಸ್, ಯಶೋಧ ಪೆರಿಯಂಡ.  :: ಅರೆಭಾಷೆ ವಿಭಾಗ :: ಕಟ್ರತನ ಲಲಿತಾ ಅಯ್ಯಣ್ಣ, ಸುಷ್ಮಿತ ಮಧು, ಕಡ್ಲೇರ ಜಯಲಕ್ಷ್ಮಿ, ರಂಜಿತ್ ಮೋದುರ ಕುದುಪಜೆ, ಅನನ್ಯ ಎಚ್ ಸುಬ್ರಮಣ್ಯ,  ಜಶ್ಮಿ ಕಲ್ಲುಮುಟ್ಲು.  :: ತುಳು :: ವಿನ್ಯಾಸ್ ಕುಲಾಲ್, ಪಿ.ಯು ಸುಂದರ, ಪೂರ್ಣಿಮಾ ಪೆರ್ಲಂಪಾಡಿ, ಚೈತ್ರ ಬೆಳ್ಳರಿಮಾಡು ಆಯ್ಕೆಯಾಗಿದ್ದು. :: ಮಕ್ಕಳ ಕವಿತೆ :: ದಿಯಾ ಎಂ. ಗೌಡ, ತೇಜಸ್.ಎಸ್, ಅಂಜಲಿ ಪಿ.ಎಸ್,  ಜಸ್ಟಿನ್ ತಿಮ್ಮಯ್ಯ,  ರುಷಿಕ.ಕೆ.ಎಂ, ಪ್ರಥಮ್ ಚಿಣ್ಣಪ್ಪ, ಎಸ್.ಪಿ.ಜನ್ಮಿತ, ಎಕಾಕ್ಷ್ ಕೆ.ಸಿ, ತಪಶ ಲೋಕೇಶ್ , ಹಮ್ದನ್ ಹೆಚ್.ಎಸ್., ಜಶ್ವತ್ ವೈ.ಟಿ, ತಿಷ್ಯಾ ಪೊನ್ನೆಟ್ಟಿ, ಚಿನ್ಮಯ್, ಪೂರ್ವಿಕ ದೇವಯ್ಯ, ಸಫೀದಾ.  ಇನ್ನುಳಿದಂತೆ ಪುಷ್ಪ ಪ್ರಸಾದ್ ಉಡುಪಿ(ಕುಂಬಾರ), ಎಸ್.ಎಂ ರಜನಿ(ಯರವ), ಭಾಗೀರಥಿ ಹುಲಿತಾಳ(ಹವ್ಯಕ), ಸವಿತ ಕರ್ಕೆರ(ಹಿಂದಿ), ಕೂತಂಡ ಪೂಜಾ ಜಗತ್ (ಹಿಂದಿ),  ರಶ್ಮಿತಾಸುರೇಶ್ (ಬೈರಬಾಸೆ), ಮಣಿ ವೈ.ಆರ್.(ಯರವ), ಸುನಿತಾ ವಿಶ್ವನಾಥ್(ಕುಂಬಾರ), ಔಹರ್ ಅಲಿ (ಬ್ಯಾರಿ), ಲೇಖಾ ಪ್ರಮೋದ್(ಮಲಯಾಳಂ), ಪವಿತ್ರ ಎಂ. ಜೇನು ಕುರುಬ) , ಕೆ.ಎಂ.ಸುಶೀಲ(ಮಲಯಾಳಂ), ಅಬ್ದುಲ್ಲ ಮಡಿಕೇರಿ (ಬ್ಯಾರಿ) ಕವನಗಳನ್ನು ವಾಚಿಸಲಿದ್ದಾರೆ.  ಚುಟುಕು ಕವನಗಳ ವಿಭಾಗದಲ್ಲಿ ಹೇಮಂತ್ ಪಾರೇರ, ವಿ.ವಿ. ಪೂರ್ಣಿಮಾ ರಾವ್, ಗೌರಮ್ಮ ಮಾದಮ್ಮಯ್ಯ ಕವನಗಳನ್ನು ವಾಚಿಸಲಿದ್ದಾರೆಂದು ಉಜ್ವಲ್ ರಂಜಿತ್ ಮಾಹಿತಿ ನೀಡಿದ್ದಾರೆ.

 

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಗುರುಕಾರೋಣನಿಗೆ ಪೂಜೆ, ತೆಂಗಿನಕಾಯಿಗೆ ಗುಂಡು : ಚೆಟ್ಟಳ್ಳಿಯಲ್ಲಿ ಕೈಲ್ ಪೊಳ್ದ್ ಸಂಭ್ರಮ*

ಸೆಪ್ಟೆಂಬರ್ 3, 2026

*ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಲ್ಲುಮಠದ ಶ್ರೀ ಶಿವಕುಮಾರ ಸ್ವಾಮೀಜಿ ಶಾಲೆಗೆ ಸಮಗ್ರ ಚಾಂಪಿಯನ್‌ಶಿಪ್*

ಸೆಪ್ಟೆಂಬರ್ 3, 2026

*ಪ್ರಾಥಮಿಕ ವಲಯ ಮಟ್ಟದ ಕ್ರೀಡಾಕೂಟ: ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಶಾಲಾ ತಂಡಕ್ಕೆ ಜಯ*

ಸೆಪ್ಟೆಂಬರ್ 3, 2026

*ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಲ್ಲುಮಠದ ಶ್ರೀ ಶಿವಕುಮಾರ ಸ್ವಾಮೀಜಿ ಶಾಲೆಗೆ ಸಮಗ್ರ ಚಾಂಪಿಯನ್‌ಶಿಪ್*

ಸೆಪ್ಟೆಂಬರ್ 3, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಸೆ. 3: ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಕಲ್ಲುಮಠದ ಶ್ರೀ ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ…

*ಪ್ರಾಥಮಿಕ ವಲಯ ಮಟ್ಟದ ಕ್ರೀಡಾಕೂಟ: ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಶಾಲಾ ತಂಡಕ್ಕೆ ಜಯ*

ಸೆಪ್ಟೆಂಬರ್ 3, 2026

*ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ರನ್ನರ್ಸ್‌ ಅಪ್‌ ಆದ ಕಾವೇರಿ ಶಾಲಾ ಬಾಲಕರ ತಂಡ*

ಸೆಪ್ಟೆಂಬರ್ 3, 2026

*ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಶಾಲಾ ಬಾಲಕಿಯರ ತಂಡಕ್ಕೆ ಪ್ರಶಸ್ತಿ*

ಸೆಪ್ಟೆಂಬರ್ 3, 2026

*ಪ್ರಾಥಮಿಕ ವಲಯ ಮಟ್ಟದ ಕ್ರೀಡಾಕೂಟ : ಖೋ ಖೋ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ಬಾಲಕ ಮತ್ತು ಬಾಲಕಿಯರ ತಂಡ ದ್ವಿತೀಯ*

ಸೆಪ್ಟೆಂಬರ್ 2, 2026

*ವಲಯ ಮಟ್ಟದ ಅಥ್ಲೆಟಿಕ್ಸ್‌ : ಕಾವೇರಿ ಶಾಲಾ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ*

ಸೆಪ್ಟೆಂಬರ್ 2, 2026

*ವಲಯ ಮಟ್ಟದ ಕ್ರೀಡಾ ಕೂಟ : ಖೋ ಖೋ ಪಂದ್ಯಾವಳಿಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ರನ್ನರ್ಸ್ ಆದ ಕಾವೇರಿ ಶಾಲಾ ತಂಡ* 

ಸೆಪ್ಟೆಂಬರ್ 2, 2026

*ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿ : ವಿಜೇತರಾದ ಕಾವೇರಿ ಶಾಲಾ ತಂಡ* 

ಸೆಪ್ಟೆಂಬರ್ 2, 2026

*ಸೆ.5 ರಂದು ಪ್ರಜಾಸೇವಾ ಆಂದೋಲನಾ ಸಭೆ*

ಸೆಪ್ಟೆಂಬರ್ 2, 2026

*ಸೆ.5 ಮತ್ತು 6 ರಂದು ಮಡಿಕೇರಿಯಲ್ಲಿ ‘KOA-MYCON’ ಮಧ್ಯವಾರ್ಷಿಕ ಸಮ್ಮೇಳನ*

ಸೆಪ್ಟೆಂಬರ್ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.