
ನಾಪೋಕ್ಲು ಸೆ.24 NEWS DESK : ನಾಪೋಕ್ಲು ರೇಂಜ್ ಜಮಾಯತ್ ಮೌಲಮೀನ್ ಹಾಗೂ ಎಮ್ಮೆಮಾಡು ರೇಂಜ್ ಜಮಾಯತ್ ಮೌಲಮೀನ್ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲು ಪಟ್ಟಣದಲ್ಲಿ ಈದ್ ಮಿಲಾದ್ ಸಂದೇಶ ಜಾಥಾ ಕಾರ್ಯಕ್ರಮ ನಡೆಯಿತು. ಮಹಮ್ಮದ್ ಹಾಜಿ ಕುಂಜಿಲ ಮಾತನಾಡಿ, ಪ್ರವಾದಿ ಮೊಹಮ್ಮದ್ ಅವರ 1500 ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಎಲ್ಲರನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದತೆಯುತವಾಗಿ ಕಾಣುವಂತಹ ಸಂದೇಶವನ್ನು ಸಾರುವಂತಹ ಉದ್ದೇಶ, ದೃಷ್ಟಿಯಿಂದ ಪಟ್ಟಣದಲ್ಲಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಮದರಸದ ವಿದ್ಯಾರ್ಥಿಗಳು ದಫ್ ಪ್ರದರ್ಶನ ಬಾವುಟಗಳೊಂದಿಗೆ ಹಳೆ ತಾಲ್ಲೂಕು ನಿಂದ ಪಟ್ಟಣವನ್ನು ಸಾಗಿ ಸಂತೆ ಮೈದಾನದಲ್ಲಿ ಮುಕ್ತಾಯಗೊಳಿಸಲಾಯಿತು. ಈ ಸಂದರ್ಭ ನಾಪೋಕ್ಲು ಜುಮ್ಮ ಮಸೀದಿ ಜಮಾಯತ್ ಅಧ್ಯಕ್ಷ ಹೆಚ್.ಹೆಚ್.ಅಬ್ದುಲ್ ರೆಹಮಾನ್, ಅಬುಬಕರ್ ಸಖಾಫಿ ಎಮ್ಮೆಮಾಡು, ಯಾಕುಬ್ ಮಾಸ್ಟರ್ ಕೊಳಕೇರಿ, ಅಬ್ದುಲ್ ಸಖಾಫಿ ಕೊಳಕೇರಿ, ಆರ್.ಎಂ.ಅಸೈನರ್ ಕೊಳಕೇರಿ, ಕೆ.ಕೆ.ಉಸ್ಮಾನ್ ಹಾಜಿ ಹಾಗೂ ವಿವಿಧ ಜಮಾಯತ್ ನ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಜನಾಂಗಬಾಂಧವರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









