
ವಿರಾಜಪೇಟೆ ಸೆ.25 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ವಿರಾಜಪೇಟೆ ತಾಲೂಕಿನ ಕಾನೂರು ವಲಯದ ಪೊನ್ನಪ್ಪಸಂತೆ ಕಾರ್ಯಕ್ಷೇತ್ರದ ಕಲ್ಲುಗುಡ್ಡೇಶ್ವರ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪೊನ್ನಪ್ಪಸಂತೆ ಎ.ಟಿ.ಶಂಕರ್ ಕಾರ್ಯಕ್ರಮವನ್ನು ಕುರಿತು ಮಾತನಾಡಿ ಕ್ಷೇತ್ರದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿ ಮಹಿಳೆಯರ ಅಭಿವೃದ್ಧಿಗೆ ಸ್ವಾವಲಂಬಿ ಬದುಕನ್ನು ನಡೆಸಲು ಉತ್ತಮವಾದ ಕಾರ್ಯಕ್ರಮದ ಆಯೋಜನೆ ಮಾಡುತ್ತಿದ್ದು, ಎಲ್ಲರಿಗೂ ಶುಭ ಹಾರೈಸಿದರು. ಒಕ್ಕೂಟದ ಅಧ್ಯಕ್ಷರು ಹಾಗೂ ಕೇಂದ್ರದ ಸದಸ್ಯರಾದ ಶೀನಾ ಅವರು ಮಾತನಾಡಿ ನಾವು ಜ್ಞಾನ ವಿಕಾಸ ಕಾರ್ಯಕ್ರಮಗಳಿಂದ ಅತ್ಯುತ್ತಮವಾದ ಮಾಹಿತಿಗಳನ್ನು ತಿಳಿದುಕೊಂಡಿದ್ದೇವೆ. ಆರೋಗ್ಯ, ಕಾನೂನಿನ, ಶಿಕ್ಷಣ, ಕುಟುಂಬ ನಿರ್ವಹಣೆ ಸ್ವಉದ್ಯೋಗಗಳು ಇನ್ನೂ ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನ ತಿಳಿದುಕೊಂಡಿದ್ದೇವೆ. ಜ್ಞಾನ ವಿಕಾಸವು ನಮಗೆ ವೇದಿಕೆಯನ್ನ ಕೊಟ್ಟಿದೆ ವಿಷಯಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ ಎಂದರು.
ಕೇಂದ್ರದ ಅಧ್ಯಕ್ಷರಾದ ಗೀತಾ ಕೇಂದ್ರದ ಸಾಧನ ವರದಿಯನ್ನು ಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಣೆ ಮಾಡಲಾಯಿತು. ಸೇವಾ ಪ್ರತಿನಿಧಿ ಬಿಂದು ಮತ್ತು. ಕೇಂದ್ರದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಜ್ಞಾನವಿಕಾಸ ಸಮನ್ವಯಾಧಿಕಾರಿ ಉಷಾರಾಣಿ ಕಾವ್ಯ ಮತ್ತು ತಮನ್ನಾ ಬಾನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.








