
ಮಡಿಕೇರಿ NEWS DESK ಅ.1 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾಗಿರುವ ಶ್ರೀ ಕಂಚಿಕಾಮಾಕ್ಷಿ ದೇವಾಲಯ ದಸರಾ ಮಂಟಪ ಸಮಿತಿ 62ನೇ ವರ್ಷದ ಉತ್ಸವಕ್ಕೆ ಸಜ್ಜಾಗುತ್ತಿದ್ದು, ಪರಶುರಾಮನಿಂದ ಕಾರ್ತಿಕೆ ವೀರನ ಸಂಹಾರ ಕಥಾ ಸಾರಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಶ್ರೀ ಕಂಚಿಕಾಮಾಕ್ಷಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಕೆ.ಬಿ.ಲೋಹಿತ್ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‌ನ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. 25 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಮಡಿಕೇರಿಯ ಸುನಿಲ್, ಆದರ್ಶ್, ಪ್ರಜ್ವಲ್, ಕಿರಣ್‌ರಾಜ್ ಮತ್ತು ತಂಡ ಹಾಗೂ ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಸೋಮವಾರಪೇಟೆಯ ನಂದಿ ಸೌಂಡ್ಸ್ ಧ್ವನಿವರ್ಧಕ ಒದಗಿಸಲಿದ್ದು, ಮಡಿಕೇರಿಯ ಗೌತಮ ಬುದ್ದ ತಂಡ ಸ್ಟುಡಿಯೋ ಸೆಟ್ಟಿಂಗ್ಸ್ ವ್ಯವಸ್ಥೆ ಮಾಡಲಿದೆ. ಪ್ಲಾಟ್‌ಫಾರಂ ನಿರ್ಮಾಣ ಹಾಗೂ ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ನ್ನು ರಾಘವೇಂದ್ರ ಹಾಗೂ ಸಮಿತಿ ಸದಸ್ಯರು ಮಾಡಲಿದ್ದಾರೆ. ಕಲಾಕೃತಿಗಳಿಗೆ ಚಲನವಲನವನ್ನು ಸಮಿತಿ ಸದಸ್ಯರೇ ನೀಡಲಿದ್ದು, ರೆಹಮತ್, ಪಾರಿಷ್, ಶಶಿ ಆಚಾರ್ಯ ವೆಲ್ಡಿಂಗ್ ಕಾರ್ಯನಿರ್ವಹಿಸಲಿದ್ದಾರೆ. ಫೈರ್ ವರ್ಕ್ಸ್ ನ ಮಕ್ಕಂದೂರಿನ ತೀರ್ಥ ಮತ್ತು ಸಮಿತಿ ಸದಸ್ಯರು ಮಾಡಲಿದ್ದಾರೆ. ಒಟ್ಟು 22 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ ಎಂದು ಲೋಹಿತ್ ಮಾಹಿತಿ ನೀಡಿದರು.









