
ಮಡಿಕೇರಿ ಅ.24 NEWS DESK : ರೋಟರಿ ಮಡಿಕೇರಿ ವುಡ್ಸ್ ಭಾರತ್ ಕ್ಯಾನ್ಸರ್ ಆಸ್ಪತ್ರೆ, ಮೈಸೂರು, ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಮಡಿಕೇರಿ., ಗ್ರಾಮ ಪಂಚಾಯತ್ ಕಾಂತೂರ್ ಮೂರ್ನಾಡು. ಇವರ ಸಹಯೋಗದಲ್ಲಿ ಕ್ಯಾನ್ಸರ್ ಉಚಿತ ತಪಾಸಣಾ ಬೃಹತ್ ಶಿಬಿರವು ಅ.25 ರಂದು ಮೂನಾ೯ಡುವಿನಲ್ಲಿ ಆಯೋಜಿತವಾಗಿದೆ. ಮೂನಾ೯ಡು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಶನಿವಾರ ಬೆಳಗ್ಗೆ 10 ಗಂಟೆಯಿಂದ ಶಿಬಿರ ಪ್ರಾರಂಭವಾಗಲಿದೆ ಎಂದು ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬಾರಿಕೆ ದಿನೇಶ್ ಶಿಬಿರ ಉದ್ಘಾಟಿಸಲಿದ್ದು, ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಸಂಘಟನಾ ಕಾಯ೯ದಶಿ೯ ಹಾಗೂ ಕರ್ನಾಟಕ ರಾಜ್ಯ ಔಷದ ವ್ಯಾಪಾರರಿಗಳ ಸಂಘದ ಗೌರವ ಕಾರ್ಯದರ್ಶಿಗಳಾದ ಎ.ಕೆ.ಜೀವನ್, ಸಂಘದ ಜಿಲ್ಲಾ ಗೌರವ ಕಾಯ೯ದಶಿ೯ ಡಿ.ಐ. ಪುರುಷೋತ್ತಮ, ರೋಟರಿ ಪಬ್ಲಿಕ್ ಇಮೇಜ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಅನಿಲ್ ಹೆಚ್,ಟಿ, ಮೂನಾ೯ಡು ಕಾಂತೂರು ಗ್ರಾಮಪಂಚಾಯತ್ ಅಧ್ಯಕ್ಷ ಕುಶನ್ ರೈ, ರೋಟರಿ ವುಡ್ಸ್ ಕಾಯ೯ದಶಿ೯ ಪ್ರಮೀಳಾ ಶೆಟ್ಟಿ, ಶಿಬಿರದ ಸಂಚಾಲಕ ಚಂದ್ರಶೇಖರ್ ಹಾಜರಿರುತ್ತಾರೆ ಎಂದು ಕಿರಣ್ ಕುಂದರ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.








