

ಮಡಿಕೇರಿ ಅ.28 NEWS DESK : ವಿರಾಜಪೇಟೆಯಲ್ಲಿ ಆಯೋಜನೆಗೊಂಡ ಆಲ್ ಇಂಡಿಯಾ 5′ ರ ಡ್ರಗ್ ಮುಕ್ತ ಭಾರತ ಫುಟ್ಬಾಲ್ ಪಂದ್ಯಾವಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ನಶೆಯ ನಕಲನ್ನು ಸುಡುವ ಮೂಲಕ ಚಾಲನೆ ನೀಡಿದರು. ವಿರಾಜಪೇಟೆಯ ತಾಲೂಕು ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಡ್ರಗ್ಸ್ ಫ್ರೀ ಇಂಡಿಯಾ (ನಶೆ ಮುಕ್ತ ಭಾರತ) ಪರಿಕಲ್ಪನೆಯೊಂದಿಗೆ, ನಶೆಯ ದುಷ್ಪರಿಣಾಮಗಳನ್ನು ಸಾರುವ ಸದುದ್ದೇಶದಿಂದ ಹಾಗೂ ಯುವ ಜನತೆ ಡ್ರಗ್ಸ್ ನಿಂದ ದೂರ ಇರಬೇಕು ಎಂಬ ಸಂದೇಶ ಸಾರಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕರು, ಜಗತ್ತಿನಾದ್ಯಂತ ಬಹುತೇಕ ಎಲ್ಲಾ ರಾಷ್ಟ್ರಗಳು ಫುಟ್ಬಾಲ್ ಕ್ರೀಡೆಗೆ ವಿಶೇಷ ಆದ್ಯತೆ ನೀಡುತ್ತಿದೆ. ನಮ್ಮ ದೇಶದಲ್ಲಿಯೂ ಫುಟ್ಬಾಲ್ ಕ್ರೀಡೆ ಜನಪ್ರಿಯಗೊಳ್ಳುತ್ತಿದ್ದು, ಸಾಮಾಜಿಕ ಕಳಕಳಿಯ ಉದ್ದೇಶದಿಂದ ಆಯೋಜನೆಗೊಂಡಿರುವ ಈ ಪಂದ್ಯಾವಳಿಯು ನಾಡಿಗೆ ಉತ್ತಮ ಫೂಟ್ಬಾಲ್ ಪಟುಗಳನ್ನು ನೀಡುವಂತಾಗಲಿ ಎಂದು ಹಾರೈಸಿದರು. ಪುರಸಭೆ ಸದಸ್ಯರು ರಾಫಿ, ಡಿಸಿಸಿ ಸದಸ್ಯರು ಸತೀಶ್, ಮಂಜುನಾಥ್ ಹಾಗೂ ಕ್ರೀಡಾ ಪ್ರೇಮಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.









