
ಮಡಿಕೇರಿ ಅ.28 NEWS DESK : ಮಾನವೀಯ ಸ್ನೇಹಿತರ ಒಕ್ಕೂಟದ ಆಶ್ರಯದಲ್ಲಿ ಮಡಿಕೇರಿಯ ಕ್ರೆಸೆಂಟ್ ಶಾಲೆಯಲ್ಲಿ ಒಕ್ಕೂಟದ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಸ್ಥಾಪಕ ಅಡ್ಮಿನ್ ಅನಿಲ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಒಕ್ಕೂಟದ ಸಲಹೆಗಾರ ಡೇವಿಡ್ ವೇಗಸ್ ಉದ್ಘಾಟಿಸಿದರು. ಒಕ್ಕೂಟದ ವಕ್ತಾರರಾದ ಶಶಿಕುಮಾರ್ ಚೆಟ್ಟಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಒಕ್ಕೂಟದ ಪ್ರತಿನಿಧಿಗಳು ತಮ್ಮ ಪರಿಚಯವನ್ನು ಮಾಡಿಕೊಂಡರು. ಪ್ರತಿನಿಧಿ ಪ್ರವೀಣ್ ರೈ ನಾಪೋಕ್ಲು ಅವರು ಒಕ್ಕೂಟದ ಕಾರ್ಯ ಚಟುವಟಿಕೆಗಳ ಕುರಿತು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪ್ರತಿನಿಧಿಗಳಾದ ಕಡ್ಲೇರ ತುಳಸಿ ಮೋಹನ್ ಹಾಗೂ ಸುನಿತಾ ಬಿಳಿಗೇರಿ ಆರಂಭದಲ್ಲಿ ಧ್ಯೇಯ ಗೀತೆ ಹಾಡಿದರು. ಅಡ್ಮಿನ್ ಗಳಾದ ಬಾಳೆಯಡ ದಿವ್ಯಾ ಮಂದಪ್ಪ ಹಾಗೂ ಅಗ್ನಿ ಚೆನ್ನನಾಯಕ ಕಾರ್ಯಕ್ರಮ ನಿರೂಪಿಸಿದರು. ಅಡ್ಮಿನ್ ಚೀರಂಡಚಂಗಪ್ಪ ಅವರು ಸ್ವಾಗತ ಭಾಷಣ ಮಾಡಿದರು. ಅಡ್ಮಿನ್ ಇಂದಿರಾ ಟೀಚರ್ ವರದಿ ವಾಚಿಸಿದರು, ಅಡ್ಮಿನ್ ಲೀಲಾವತಿ ಲೆಕ್ಕಪತ್ರ ಮಂಡನೆ ಮಾಡಿದರು. ಪುರುಷರು ಹಾಗೂ ಮಹಿಳೆಯರಿಗೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆಸಿ ವಿಜೇತರಿಗೆ ಬಹುಮಾನ ಹಾಗೂ ಒಕ್ಕೂಟದ ಪ್ರತಿನಿಧಿಗಳಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು. :: ಶಶಿಕುಮಾರ್ ಅವರಿಗೆ ಒಕ್ಕೂಟದ ಗೌರವ :: ಒಕ್ಕೂಟದ ವಕ್ತಾರರಾದ ಶಶಿಕುಮಾರ್ ಚೆಟ್ಟಳ್ಳಿ ಅವರ ಸೇವೆಯನ್ನು ಪರಿಗಣಿಸಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ನೆರೆದವರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಒಕ್ಕೂಟದ ವಕ್ತಾರ ಎಂ.ಇ. ಮಹಮ್ಮದ್ ವಂದಿಸಿದರು.









