
ಮಡಿಕೇರಿ ಅ.28 NEWS DESK : ಮೈಸೂರಿನಲ್ಲಿ ವಿ.ಯನ್ ಯೋಧ ಮಾರ್ಷಲ್ ಆರ್ಟ್ಸ್ ಅಕಾಡೆಮಿ ನಡೆಸಿದ ಐದನೇ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಅನನ್ಯ ಕೊಕ್ಕೆರ ಕಾವೇರಮ್ಮ ಚಾಂಪಿಯನ್ ಆಗಿದ್ದಾಳೆ. 11 ರ ವಯೋಮಿತಿಯವರ ವಿಭಾಗದ ಕಥಾದಲ್ಲಿ ಪ್ರಥಮ ಸ್ಥಾನ ಮತ್ತು ಕುಮಿತೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಅನನ್ಯ ಕಾವೇರಮ್ಮ ಕರಾಟೆ ಶಿಕ್ಷಕರಾದ ವಿರಾಜಪೇಟೆಯ ಸೆನ್ಸಾಯಿ ಎಂ.ಬಿ.ಚಂದ್ರನ್ ಅವರಲ್ಲಿ ತರಬೇರಿ ಪಡೆಯುತ್ತಿದ್ದಾಳೆ. ಇವಳು ಕೊಕ್ಕೆರ ರಾಯಿ ಮತ್ತು ರತಿ (ತಾಮನೆ-ಚಂಗಚಂಡ) ದಂಪತಿಯ ಪುತ್ರಿ.









