
ಮಡಿಕೇರಿ ಅ.30 NEWS DESK : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಸ್ನೇಹಾಶ್ರಯ ಯೂತ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಮಾನಸಿಕ ರೋಗಿಗಳಿಗಾಗಿ ‘ಮಾನಸಧಾರ’ ಮಾನಸಿಕ ರೋಗಿಗಳ ಹಗಲು ಆರೈಕೆ ಕೇಂದ್ರದ ವತಿಯಿಂದ ನಗರದ ರಾಣಿಪೇಟೆ ಗೆಜ್ಜೆಸಂಗಪ್ಪ ಕಲ್ಯಾಣ ಮಂಟಪದ ಎದುರು ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಉಚಿತವಾಗಿ ನುರಿತ ಮಾನಸಿಕ ವೈದ್ಯರಿಂದ ಮಾನಸಿಕ ರೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ನುರಿತ ಮನೋ ಚಿಕಿತ್ಸಕರಿಂದ ರೋಗಿಗಳಿಗೆ ಹಾಗೂ ಕುಟುಂಬದವರಿಗೆ ಮೂರು ಹಂತದಲ್ಲಿ ಆಪ್ತ ಸಮಾಲೋಚನೆ ನಡೆಸಿ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸಿ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಲಾಗುತ್ತದೆ. ವೃತ್ತಿಪರ ತರಬೇತಿಗಳಾದ ಚಿತ್ರಕಲೆ, ಪೈಲ್ ತಯಾರಿಕೆ, ಪೇಪರ್ ಕವರ್ ತಯಾರಿಕೆ, ಗೊಂಬೆ ತಯಾರಿಕೆ, ಬುಟ್ಟಿ ಹೆಣೆಯುವುದು, ಮೇಣದ ಬತ್ತಿ ತಯಾರಿಸುವುದು, ಕಸೂತಿ, ಕರಕುಶಲ ವಸ್ತುಗಳನ್ನು ತಯಾರಿಸುವ ವಿಧಾನವನ್ನು ಹೇಳಿಕೊಡಲಾಗುತ್ತದೆ. ಭಜನೆ, ಯೋಗ, ಪ್ರಾಣಯಾಮ, ಆಧ್ಯಾತ್ಮ, ಮನೋರಂಜನೆ, ಆಟ ಇನ್ನಿತರ ಚಟುವಟಿಕೆಗಳನ್ನು ಹೇಳಿ ಕೊಡಲಾಗುತ್ತದೆ. ನೋಂದಣಿಯಾದ ಮಾನಸಿಕ ರೋಗಿಗಳಿಗೆ ಉಚಿತವಾಗಿ ಮಧ್ಯಾಹ್ನ ಊಟ ಮತ್ತು ವಿಶ್ರಾಂತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ 8553173499, 8792588712 ನ್ನು ಸಂಪರ್ಕಿಸಬಹುದು.








