
ಮಡಿಕೇರಿ ನ.1 NEWS DESK : ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ವಿಶ್ವ ಮಾನವನ ಉದ್ಯಾನವನದಲ್ಲಿ ಸಮಾಜ ಸೇವಕ ಪ್ರಭು ರೈ ಹಾಗೂ ಖಲೀಲ್ ಭಾಷಾ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಧ್ವಜಾರೋಹಣ ನೆರವೇರಿಸಿದರು. ಸಮಾಜ ಸೇವಕರು ಹಾಗೂ ಪುರಸಭಾ ಮಾಜಿ ಉಪಾಧ್ಯಕ್ಷ ಟಿಎಂ ಅಯ್ಯಪ್ಪರವರು ರಾಜ್ಯೋತ್ಸವದ ಶುಭಾಶಯ ಕೋರಿ ರಾಜ್ಯೋತ್ಸವದ ಕುರಿತು ಹಿತನುಡಿಗಳನಾಡಿದ್ದರು. ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷ ರವಿ ಗೌಡ, ತಾಲ್ಲೂಕು ಉಪಾಧ್ಯಕ್ಷ ನಾಗೇಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಕ್ಷಿತ್, ಮುರ್ನಾಡು ವಲಯ ಅಧ್ಯಕ್ಷರಾದ ವಸಂತ್, ನಗರ ಉಪಾಧ್ಯಕ್ಷರಾದ ಲಿಲ್ಲಿಗೌಡ, ವೇದಿಕೆಯ ಸದಸ್ಯರುಗಳಾದ ಪುನೀತ್ ಜಿ.ಎನ್, ಹರ್ಷಿತ್, ಅಜಿತ್, ಅನಂತ್, ರೂಪ, ಸೈಮನ್, ಲಿಖಿತ್, ಮಹದೇವಣ್ಣ, ವಸಂತ್ ಭಟ್, ಶೇಕ್ ಆದಂ, ಲಿಖಿತ್.ಹೆಚ್.ವಿ, ರಮೇಶ್ ಭಾಗಮಂಡಲ ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯ ವತಿಯಿಂದ ನೆರೆದಿದ್ದವರಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರವಿಗೌಡ ಸ್ವಾಗತಿಸಿ, ಅಕ್ಷಿತ್ ವಂದಿಸಿದರು.









