Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಸಾಪ ಸಂತಾಪ*
  • *ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವ*
  • *ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಮಂತರ್ ಗೌಡ*
  • *ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ ಪೂರ್ವಬಾವಿ ಸಭೆ : ಬಿ.ಸಿ.ದಿನೇಶ್ ಗೆ ಅಭಿನಂದನೆ*
  • *ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ”*
  • *ಕೊಡಗಿನಲ್ಲಿ ಮೊದಲ ಬಾರಿಗೆ ವಿಶೇಷ ಚೇತನರಿಗಾಗಿ ರಾಜ್ಯಮಟ್ಟದ ಕ್ರೀಡಾಕೂಟ* 
  • *ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ* 
  • *ಮಾ.16 ರಂದು “ಸ್ವಚ್ಛ ಕೊಡಗು, ಸುಂದರ ಕೊಡಗು” ಉದ್ಘಾಟನಾ ಕಾರ್ಯಕ್ರಮ*
  • *ಕುಶಾಲನಗರ ಸಂಚಾರ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ*
  • *ಮಡಿಕೇರಿ ಘಟಕದ ನೂತನ ಡಿಪೋ ವ್ಯವಸ್ಥಾಪಕರನ್ನು ಭೇಟಿಯಾದ ಎಐಟಿಯುಸಿ ಸಂಘಟನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ : ಕರ್ನಾಟಕ ಕೇವಲ ನೆಲವಲ್ಲ ಅದು ಕನ್ನಡಿಗರ ಭಾವನೆ ಮತ್ತು ಬಾಂಧವ್ಯವಾಗಿದೆ : ಸಚಿವ ಎನ್.ಎಸ್.ಭೋಸರಾಜು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ : ಕರ್ನಾಟಕ ಕೇವಲ ನೆಲವಲ್ಲ ಅದು ಕನ್ನಡಿಗರ ಭಾವನೆ ಮತ್ತು ಬಾಂಧವ್ಯವಾಗಿದೆ : ಸಚಿವ ಎನ್.ಎಸ್.ಭೋಸರಾಜು*

ನವೆಂಬರ್ 1, 20254 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ನ.1 NEWS DESK : ಕರ್ನಾಟಕ ಎಂಬುವುದು ಕೇವಲ ನೆಲವಲ್ಲ, ಅದು ಕನ್ನಡಿಗರ ಭಾವನೆ ಮತ್ತು ಬಾಂಧವ್ಯವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಸಂಭ್ರಮದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸಚಿವರು ಮಾತನಾಡಿದರು. ಕನ್ನಡ, ಕರ್ನಾಟಕ, ಕರುನಾಡು ಎಂಬುವುದು ಕೇವಲ ನೆಲ ಮತ್ತು ಭಾಷೆಯಲ್ಲ. ಅದು ಕನ್ನಡಿಗರ ಭಾವನೆ ಹಾಗೂ ಬಾಂಧವ್ಯವಾಗಿದ್ದು, ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ನಿತ್ಯೋತ್ಸವವಾಗಬೇಕು ಎಂದು ಕರೆ ನೀಡಿದರು. ದೇಶದಲ್ಲಿ ಕನ್ನಡ ಭಾಷಾ ಸಾಹಿತ್ಯಕ್ಕೆ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ದೊರೆತ್ತಿರುವುದು ಹೆಮ್ಮೆಯ ವಿಚಾರ. ಇಂದು ಹೆಮ್ಮೆಯಿಂದ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದ ಹಿಂದೆ ನಮ್ಮ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟವಿದೆ. ಸಹಸ್ರಾರು ಕನ್ನಡಿಗರು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಹಗಲಿರುಳು ದುಡಿದಿದ್ದಾರೆ. ಅಂತಹ ಎಲ್ಲಾ ಮಹಾನ್ ಚೇತನಗಳನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಕೊಡಗು ಜಿಲ್ಲೆ ಹಾಗೂ ಕನ್ನಡ ನಾಡಿನ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕನ್ನಡ ನಾಡು-ನುಡಿಗೆ ವಿಶೇಷ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಯುವ ಜನರು ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕøತಿ ಹಾಗೂ ಕಲೆಯ ಬಗೆಗೆ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ನಮ್ಮ ಶ್ರೀಮಂತ ಪರಂಪರೆಯ ನೈಜ ವಾರಸುದಾರರಾಗಿ ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
*10 ಕೋಟಿ ಅನುದಾನ* ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿ ಅವರ ಪಿಡಿ ಖಾತೆಯಲ್ಲಿ 10 ಕೋಟಿ ಅನುದಾನ ಲಭ್ಯವಿದೆ. ಕೊಡಗು ಜಿಲ್ಲೆಯಲ್ಲಿ 3 ಮಾನವಹಾನಿ ಸಂಭವಿಸಿದ್ದು, ತಲಾ 5 ಲಕ್ಷಗಳನ್ನು ಸಂಬಂಧಪಟ್ಟವರಿಗೆ ಪಾವತಿಸಲಾಗಿರುತ್ತದೆ. 52 ಮನೆಗಳು ಪೂರ್ಣಹಾನಿಯಾಗಿವೆ, 194 ಮನೆಗಳು ತೀವ್ರಹಾನಿ ಹಾಗೂ 88 ಮನೆಗಳು ಭಾಗಶಃ ಹಾನಿಯಾಗಿವೆ. ಮಳೆಯಿಂದಾಗಿ ಜಿಲ್ಲೆಯಲ್ಲಿ 28 ಜಾನುವಾರುಗಳಿಗೆ ಹಾನಿಯಾಗಿದ್ದು, ಸಂಬಂಧಪಟ್ಟವರಿಗೆ ಅಗತ್ಯ ಪರಿಹಾರ ಪಾವತಿಸಲಾಗಿದೆ ಎಂದು ತಿಳಿಸಿದರು.  *ಪ್ರಯಾಣಿಕರ ಸಂಖ್ಯೆ ಹೆಚ್ಚಳ* ಶಕ್ತಿ ಯೋಜನೆಯ ಅಡಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು 1,40,28,793 ಮಹಿಳಾ ಪ್ರಯಾಣಿಕರು ಈ ಯೋಜನೆಯ ಪ್ರಯೋಜನೆಯನ್ನು ಪಡೆದುಕೊಂಡಿರುತ್ತಾರೆ. ಸರಾಸರಿ 16,033 ಪ್ರಯಾಣಿಕರು ಒಂದು ದಿನಕ್ಕೆ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 2025 ಅಕ್ಟೋಬರ್ ಮಾಹೆಯವರೆಗೆ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.10.21 ರಷ್ಟು ಸಂಖ್ಯೆ ಹೆಚ್ಚಾಗಿದೆ. *ಗೃಹಲಕ್ಷ್ಮಿ* ಗೃಹಲಕ್ಷ್ಮಿ ಯೋಜನೆಯು ನಮ್ಮ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 1,17,085 ಫಲಾನುಭವಿಗಳು ನೊಂದಾಯಿಸಿಕೊಂಡಿದ್ದು, ರೂ. 465.02 ಕೋಟಿ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿರುತ್ತದೆ. *ಗೃಹಜ್ಯೋತಿ* ಗೃಹಜ್ಯೋತಿ ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ ಹಾಲಿ ಇರುವ ಒಟ್ಟು 1,98,841 ಗ್ರಾಹಕರು ಹೆಸರು ನೋಂದಾಯಿಸಿ ಕೊಂಡಿದ್ದು, ಶೇ.99.09 ರಷ್ಟು ಪ್ರಗತಿ ಸಾಧಿಸಲಾಗಿದೆ. *ಅನ್ನಭಾಗ್ಯ* ‘ಅನ್ನಭಾಗ್ಯ’ಯೋಜನೆಯಡಿ ಸರ್ಕಾರ ಬಿಪಿಎಲ್ ಫಲಾನುಭವಿಗಳಿಗೆ 10 ಕೆ.ಜಿ ಅಕ್ಕಿಯನ್ನು ಪ್ರತೀ ಮಾಹೆ ವಿತರಣೆ ಮಾಡಲಾಗುತ್ತಿದ್ದು, ಒಟ್ಟು 1,08,602 ಪಡಿತರ ಚೀಟಿ ಕುಟುಂಬಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. *ಯುವನಿಧಿ ಯೋಜನೆ* ಯುವನಿಧಿ ಯೋಜನೆಯಡಿಯಲ್ಲಿ ಅಕ್ಟೋಬರ್ 23 ರವರೆಗೆ ಒಟ್ಟು 1912 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಜುಲೈ-2025 ರ ಮಾಹೆಯಲ್ಲಿ 1445 ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮುಖಾಂತರ ಒಟ್ಟು ರೂ.2,35,38,000 ಹಣ ಸಂದಾಯವಾಗಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಸರ್ಕಾರ ವಿವಿಧ ಅಭಿವೃದ್ಧಿ ಕಾರ್ಯಗಳು ಎಂದಿನಂತೆ ನಡೆಯುತ್ತಿವೆ. ಆ ದಿಸೆಯಲ್ಲಿ ವಿವಿಧ ಇಲಾಖೆಗಳ ಮೂಲಕ ಮೂಲ ಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. *ಲೋಕೋಪಯೋಗಿ ಇಲಾಖೆ* ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು 2 ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ. ರಾಜ್ಯ ಹೆದ್ದಾರಿ ರಸ್ತೆಗಳಿಗೆ ರೂ. 744.17 ಲಕ್ಷಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ದಿಗಾಗಿ ರೂ. 1415.38 ಲಕ್ಷಗಳ ಅನುದಾನ ಬಿಡುಗಡೆಯಾಗಿದೆ. ರಸ್ತೆ ಹಾಗೂ ಸೇತುವೆಗಳ ಅಭಿವೃದ್ದಿಗಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 20 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿದೆ. ರಾಜ್ಯ ಹೆದ್ದಾರಿ ಸೇತುವೆ ದುರಸ್ತಿ ಕಾಮಗಾರಿಗಳಿಗೆ ರೂ.75 ಲಕ್ಷ, ಮುಖ್ಯ ರಸ್ತೆ ಸೇತುವೆ ದುರಸ್ಥಿ ಕಾಮಗಾರಿಗಳಿಗೆ ರೂ.145.00 ಲಕ್ಷಗಳ ಅನುದಾನ ಬಿಡುಗಡೆಯಾಗಿದೆ. *ಪರಿಶಿಷ್ಟ ವರ್ಗಗಳ ಕಲ್ಯಾಣ* ನಿವೇಶನ ರಹಿತ ಪರಿಶಿಷ್ಟ ಪಂಗಡದ ಜನಾಂಗದವರಿಗೆ ನಿವೇಶನ ಒದಗಿಸಲು 71.25 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಈ ಜಮೀನಿನಲ್ಲಿ 2000 ಪರಿಶಿಷ್ಟ ಪಂಗಡದ ಜನಾಂಗದವರಿಗೆ ನಿವೇಶನದ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಕಚೇರಿಯ ಸ್ವಂತ ಕಟ್ಟಡವನ್ನು ನಿರ್ಮಿಸಿದ್ದು, ಇಂದು ಉದ್ಘಾಟಿಸಲಾಗುತ್ತಿದೆ. *ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ* ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಆವರಣದಲ್ಲಿ 450 ಹಾಸಿಗೆ ಸಾಮಾಥ್ರ್ಯದ ಆಸ್ಪತ್ರೆ ಕಟ್ಟಡಗಳ ನಿರ್ಮಾಣದ 2ನೇ ಹಂತದ ಕಾಮಗಾರಿಗೆ ಒಟ್ಟು 78.10 ಕೋಟಿ ರೂಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯಲ್ಲಿ ಕೆಲವು ವಿಭಾಗಗಳ ಸ್ನಾತಕೋತ್ತರ ಪಿಜಿ ಸೀಟುಗಳು ಹೊಸದಾಗಿ ಮಂಜೂರಾಗಿದ್ದು, ಕೆಲವು ವಿಭಾಗಗಳ ಸ್ನಾತಕೋತ್ತರ ಪಿಜಿ ಸೀಟುಗಳನ್ನು ಹೆಚ್ಚಿಸಲಾಗಿದೆ. *ಜಿಲ್ಲಾ ನಗರಾಭಿವೃದ್ದಿ ಕೋಶ* ಜಿಲ್ಲಾ ನಗರಾಭಿವೃದ್ದಿ ಕೋಶದ ಅಧೀನದಲ್ಲಿ ಐದು ನಗರಸ್ಥಳೀಯ ಸಂಸ್ಥೆಗಳಾದ ನಗರಸಭೆ ಮಡಿಕೇರಿ, ಪುರಸಭೆ ವಿರಾಜಪೇಟೆ/ ಕುಶಾಲನಗರ, ಪಟ್ಟಣ ಪಂಚಾಯಿತಿ, ಸೋಮವಾರಪೇಟೆ, ಪೊನ್ನಂಪೇಟೆ ಕಾರ್ಯ ನಿರ್ವಹಿಸುತ್ತಿದ್ದು ಯೋಜನೆಗಳ ಪ್ರಗತಿ ವಿವರ ಈ ಕೆಳಗಿನಂತಿರುತ್ತದೆ. *ಡಲ್ಟ್* 2025-26ನೇ ಸಾಲಿಗೆ ನಗರ ಭೂ ಸಾರಿಗೆ ನಿರ್ದೇಶನಾಲಯ (ಡೆಲ್ಟ್) ಇವರು ನಗರಸಭೆ ಮಡಿಕೇರಿ ಮತ್ತು ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳಲು ಅನುದಾನ ಹಂಚಿಕೆ ಮಾಡಲಾಗಿದೆ. ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಜಿ.ಟಿ ರಸ್ತೆಯಲ್ಲಿ ಪಾದಾಚಾರಿ ನಿರ್ಮಾಣ ಕಾಮಗಾರಿ ವೆಚ್ಚ ರೂ.3.28 ಕೋಟಿ, ಕುಶಾಲನಗರದ ಬಿ.ಎಂ.ರಸ್ತೆಯ ಪಾದಚಾರಿ ಮಾರ್ಗ ಅಭಿವೃದ್ದಿ ಕಾಮಗಾರಿ ಅನುಷ್ಠಾನಕ್ಕೆ ರೂ.5.37 ಕೋಟಿ, ಪುರಸಭೆ ವಿರಾಜಪೇಟೆಯ ವ್ಯೂಪಾಯಿಂಟ್ ಅಭಿವೃದ್ದಿ ಕಾಮಗಾರಿಗೆ ರೂ. 1.72 ಕೋಟಿ ಮತ್ತು ಮಡಿಕೇರಿ ನಗರಸಭೆಯ ಎಂ.ಜಿ ರಸ್ತೆಯಲ್ಲಿ ಪಾದಚಾರಿ ಮಾರ್ಗ ಅಭಿವೃದ್ದಿ ಕಾಮಗಾರಿಗೆ ರೂ.1.65 ಕೋಟಿ ಒಟ್ಟು 12.02 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. *ಹಾರಂಗಿ ಪ್ರದೇಶ ಅಭಿವೃದ್ಧಿ* ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 95 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳು ಶೀಘ್ರ ಚಾಲನೆಗೊಳ್ಳಲಿದೆ. ‘50 ಕೋಟಿ ರೂ. ವೆಚ್ಚದಲ್ಲಿ 18 ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿ, 36.50 ಕೋಟಿ ರೂ. ವೆಚ್ಚದಲ್ಲಿ ಬೌನ್‍ಸ್ಟ್ರಿಂಗ್ ಬ್ರಿಡ್ಜ್ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಗುಡ್ಡೆಹೊಸೂರಿನಿಂದ ಹುದುಗೂರು ಮಾರ್ಗದ 5 ಕಿ.ಮೀ. ರಸ್ತೆ 5 ಕೋಟಿ ರೂ. ವೆಚ್ಚದಲ್ಲಿ ಹಾಗೆಯೇ ಚಿಕ್ಲಿಹೊಳೆ ರಸ್ತೆ 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ. 72 ಕೋಟಿ ರೂ. ವೆಚ್ಚದಲ್ಲಿ ಹಾರಂಗಿ ಎಡದಂಡೆ ನಾಲೆಯ ಮುಖ್ಯನಾಲೆಯನ್ನು ಆಧುನೀಕರಣಗೊಳಿಸಲಾಗುವುದು. *ಅಂತರ್ಜಲ ಅಭಿವೃದ್ಧಿ* ಕೊಡಗು ಜಿಲ್ಲೆ, ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂತರ್ಜಲ ಅಭಿವೃದ್ಧಿಗೆ, ಚೆಕ್ ಡ್ಯಾಂ, ಸೇತುವೆ ಸಹಿತ ಚೆಕ್ ಡ್ಯಾಂ ಮತ್ತು ನಾಲೆಗಳನ್ನು ನಿರ್ಮಿಸಲು ರೂ.50.00ಕೋಟಿಗಳ ಅನುದಾನವನ್ನು ಮಂಜೂರು ಮಾಡಲಾಗಿದೆ. ಕೊಡಗು ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಬರುವ ಗ್ರಾಮಗಳಲ್ಲಿ ಹಳ್ಳಗಳಿಗೆ ಸಂರಕ್ಷಣಾತ್ಮಕ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ರೂ.20.00 ಕೋಟಿಗಳ ಅನುದಾನವನ್ನು ನೀಡಲಾಗಿದೆ. ಕೆರೆಗಳನ್ನು ಅಭಿವೃದ್ಧಿ ಪಡಿಸಲು ರಾಜ್ಯ ವಿಪತ್ತು ನಿರ್ವಹಣೆ ಯೋಜನೆಯಡಿ ರೂ.9ಕೋಟಿಗಳ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಸಚಿವ ಭೋಸರಾಜು ವಿವರಿಸಿದರು. *ಪಥಸಂಚಲನ ಮತ್ತು ಸಾಂಸ್ಕøತಿಕ ಕಾರ್ಯಕ್ರಮ* ಪೊಲೀಸ್ ಘಟಕ, ಎನ್‍ಸಿಸಿ, ಗೃಹರಕ್ಷಕ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಮತ್ತಿತರ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನಡೆದ ಕನ್ನಡ ನಾಡು, ನುಡಿಯ ವರ್ಣರಂಜಿತ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿವಿಧ ಇಲಾಖೆಗಳ ವತಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು ಪ್ರದರ್ಶನಗೊಂಡವು. ಸಭಾ ಕಾರ್ಯಕ್ರಮಕ್ಕೂ ಮೊದಲು ಕೋಟೆ ಆವರಣದಿಂದ ಪೊಲೀಸ್ ಕವಾಯತು ಮೈದಾನದವರೆಗೆ ವೈಭವದ ಮೆರವಣಿಗೆ ನಡೆಯಿತು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ, ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕಸಾಪ ಸಂತಾಪ*

ಮಾರ್ಚ್ 15, 2026

*ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವ*

ಮಾರ್ಚ್ 15, 2026

*ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಮಂತರ್ ಗೌಡ*

ಮಾರ್ಚ್ 15, 2026

*ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವ*

ಮಾರ್ಚ್ 15, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ NEWS DESK ಮಾ.15 : ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ…

*ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಮಂತರ್ ಗೌಡ*

ಮಾರ್ಚ್ 15, 2026

*ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ ಪೂರ್ವಬಾವಿ ಸಭೆ : ಬಿ.ಸಿ.ದಿನೇಶ್ ಗೆ ಅಭಿನಂದನೆ*

ಮಾರ್ಚ್ 15, 2026

*ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ”*

ಮಾರ್ಚ್ 15, 2026

*ಕೊಡಗಿನಲ್ಲಿ ಮೊದಲ ಬಾರಿಗೆ ವಿಶೇಷ ಚೇತನರಿಗಾಗಿ ರಾಜ್ಯಮಟ್ಟದ ಕ್ರೀಡಾಕೂಟ* 

ಮಾರ್ಚ್ 15, 2026

*ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ* 

ಮಾರ್ಚ್ 15, 2026

*ಮಾ.16 ರಂದು “ಸ್ವಚ್ಛ ಕೊಡಗು, ಸುಂದರ ಕೊಡಗು” ಉದ್ಘಾಟನಾ ಕಾರ್ಯಕ್ರಮ*

ಮಾರ್ಚ್ 15, 2026

*ಕುಶಾಲನಗರ ಸಂಚಾರ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ*

ಮಾರ್ಚ್ 15, 2026

*ಮಡಿಕೇರಿ ಘಟಕದ ನೂತನ ಡಿಪೋ ವ್ಯವಸ್ಥಾಪಕರನ್ನು ಭೇಟಿಯಾದ ಎಐಟಿಯುಸಿ ಸಂಘಟನೆ*

ಮಾರ್ಚ್ 15, 2026

*ಅಂತರಾಷ್ಟ್ರೀಯ ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಬಂಗಾಡುಮನೆ ವಸಂತಿ*

ಮಾರ್ಚ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.