Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಸೆಪ್ಟೆಂಬರ್ 6ರಂದು ಸ್ಪರ್ಧೆ*
  • *ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ : ಸಭೆ ನಡೆಸಿದ ಕೊಡಗು ಪೊಲೀಸ್*
  • *ಕೊಡಗಿನ ಸಮಸ್ಯೆಗಳಿಗೆ ಸಮಗ್ರ ಪರಿಹಾರಕ್ಕೆ ಯದುವೀರ್ ಒಡೆಯರ್ ಆಗ್ರಹ : ಆನೆ- ಮಾನವ ಸಂಘರ್ಷ, ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆ*
  • *ಕಸ್ತೂರಿರಂಗನ್ ವರದಿಯ 7ನೇ ಅಧಿಸೂಚನೆ: ಕೊಡಗಿನಲ್ಲಿ ಕೇರಳ ಮಾದರಿ ಅನುಷ್ಠಾನಕ್ಕೆ ಒತ್ತಾಯ*
  • *ಕೊಡಗು ಸೌಹಾರ್ಧ ಪತ್ತಿನ ಸಹಕಾರಿ ಸಂಘಕ್ಕೆ ‘ಎ’ ವರ್ಗೀಕರಣ : ರೂ.29 ಲಕ್ಷ ನಿವ್ವಳ ಲಾಭ*
  • *ಚೆಟ್ಟಳ್ಳಿಯಲ್ಲಿ ಸಾಂಪ್ರದಾಯಿಕ ಕೈಲ್ ಪೊವ್ದ್ ಧಾರೆ ಪೂಜೆ*
  • *ರಕ್ಷಾಬಂಧನ ಆಚರಣೆ : ಸಂಸದ ಯದುವೀರ್ ಒಡೆಯರ್‌ಗೆ ಬ್ರಹ್ಮಕುಮಾರಿಸ್‌ ನಿಂದ ರಾಖಿ*
  • *ಎ.ಕೆ. ಸುಬ್ಬಯ್ಯರ ಪುಣ್ಯಸ್ಮರಣೆ: ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*
  • *ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*
  • *ಜಾನಪದ ಕಲಾಪ್ರಕಾರದ ತರಬೇತಿಗೆ ಅರ್ಜಿ ಆಹ್ವಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿಬಿ ರಾಮ್ ಜಿ ಯೋಜನೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿಬಿ ರಾಮ್ ಜಿ ಯೋಜನೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆ*

ಫೆಬ್ರವರಿ 6, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ಮಡಿಕೇರಿ NEWS DESK ಫೆ.6 : ದಕ್ಷಿಣ ಕೊಡಗಿನ ಗೋಣಿಕೊಪ್ಪಲಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ರಾಮ್ ಜಿ ಯೋಜನೆಯನ್ನು ವಿರೋಧಿಸಿ, ಪೊನ್ನಂಪೇಟೆಯವರೆಗೆ ಬೃಹತ್ ಪ್ರತಿಭಟನಾ ಜಾಥ ನಡೆಯಿತು. ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಸೇರಿದಂತೆ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಪ್ರಮುಖರ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಗೋಣಿಕೊಪ್ಪಲಿನಲ್ಲಿ ಸಮಾವೇಶಗೊಂಡ  ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರದ ಧೋರಣೆಗಳ ವಿರುದ್ಧ ಘೋಷಣೆಗಳನ್ನು ಮೊಳಗಿಸುತ್ತಾ ಸಮಾರು ನಾಲ್ಕು ಕಿ.ಮೀ. ದೂರದ, ತಾಲ್ಲೂಕು ಕೇಂದ್ರ ಪೊನ್ನಪೇಟೆಯವರೆಗೆ  ಕಾಲ್ನಡಿಗೆ ಜಾಥ ನಡೆಸಿದರು. ಜಾಥ ಪೊನ್ನಂಪೇಟೆಯನ್ನು ತಲುಪಿದ ಬಳಿಕ ಪಕ್ಷದ ಪ್ರಮುಖರು ಅಲ್ಲಿನ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿ, ಈ ಹಿಂದಿನ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ಬದಲಾಗಿ ಕೇಂದ್ರ ಸರ್ಕಾರ ತಂದಿರುವ ವಿಜಿ ರಾಮ್ ಜಿ ಯೋಜನೆಯ ಬಗ್ಗೆ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. *ಆರು ಬ್ಲಾಕ್‌ಗಳಲ್ಲಿ ಪ್ರತಿಭಟನೆ* ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಮೇಲೆ  ಮಹಾತ್ಮಾ ಗಾಂಧಿ ಮನ್‌ರೇಗಾ ಯೋಜನೆ 2005ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದೀಗ ಕೇಂದ್ರ ಸರ್ಕಾರ ಅಂತಹ ಉತ್ತಮ ಯೋಜನೆಯನ್ನು ರದ್ದು ಪಡಿಸಿ, ಅದರಲ್ಲಿನ ಉತ್ತಮ ಅಂಶಗಳನ್ನು ಕೈಬಿಟ್ಟು  ವಿಬಿ ರಾಮ್ ಜಿ ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ.ಕೇಂದ್ರದ ಈ ಯೋಜನೆಯ ಬಗ್ಗೆ ಜಿಲ್ಲೆಯ ಆರು ಬ್ಲಾಕ್‌ಗಳಲ್ಲಿಯೂ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ನಡೆಯಬೇಕೆಂದು ತಿಳಿಸಿದರು. ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಐತಿಹಾಸಿಕವಾದ ಮಹಾತ್ಮಾ ಗಾಂಧಿ  ಮನ್ ರೇಗಾ ಯೋಜನೆಗೆ ಕಾನೂನು ತಿದ್ದುಪಡಿ ಮಾಡುವ ಮೂಲಕ ವಿಬಿ ರಾಮ್ ಜಿ ಎನ್ನುವ ಯೋಜನೆಯನ್ನು ತರುವ ಮೂಲಕ  ಕೇಂದ್ರ‍್ರ ಸರ್ಕಾರ ಗ್ರಾಮೀಣ ಜನರ, ಕಾರ್ಮಿಕರ, ಮಹಿಳೆಯರ, ಶೋಷಿತರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿದೆಯೆಂದು ಆರೋಪಿಸಿದರು. ನೂತನ ಯೋಜನೆಯ ಲೋಪಗಳ ಬಗ್ಗೆ ವಿಧಾನ ಸಭೆಯಲ್ಲಿ ಪಕ್ಷದ ಮುಖಂಡರು ಅಂಕಿ ಅಂಶಗಳೊಂದಿಗೆ ಮಾತನಾಡಿದ್ದಾರೆ ಮತ್ತು ಬಹಳಷ್ಟು ಪ್ರಶ್ನೆಗಳನ್ನು ಕೇಂದ್ರ‍್ರಕ್ಕೆ ಕೇಳಿದ್ದಾರೆಂದು ತಿಳಿಸಿದ ಪೊನ್ನಣ್ಣ,   ಹಿಂದಿನ ಮನ್‌ರೇಗಾ ಯೋಜನೆಯಲ್ಲಿ ಕನಿಷ್ಟ 100 ದಿನಗಳ ಕೆಲಸವನ್ನು ಒದಗಿಸಲಾಗುತಿತ್ತು ಮತ್ತು ಈ ಯೋಜನೆಯ ಮೂಲಕ  ಕಟ್ಟಡಗಳ ನಿರ್ಮಾಣ, ಪಂಚಾಯ್ತಿ ರಸ್ತೆಗಳ ನಿರ್ಮಾಣ ಕಾರ್ಯಗಳು  ನಮ್ಮ ಜಿಲ್ಲೆಯಲ್ಲೂ ಸಾಕಷ್ಟು ನಡೆದಿದೆಯೆಂದು ಸ್ಪಷ್ಟಪಡಿಸಿದರು. ಕಳೆದ 20 ವರ್ಷಗಳಲ್ಲಿ ಮಹಾತ್ಮಾ ಗಾಂಧಿ ಮನ್‌ರೇಗಾ ಯೋಜನೆಯು ಗ್ರಾಮೀಣ ಜನರು ತಮ್ಮ ಬದುಕನ್ನು  ಕಟ್ಟಿಕೊಳ್ಳಲು ಸಹಕಾರಿಯಾಗಿತ್ತು. ಆದರೆ, ಇಂದು ಕೇಂದ್ರ ಸರ್ಕಾರ  ಮನ್‌ರೇಗಾ ಕಾನೂನಿಗೆ ತಿದ್ದುಪಡಿ ತರುವ ಸಂದರ್ಭ ಸಂಸತ್‌ನಲ್ಲಿ ಕನಿಷ್ಟ ಚರ್ಚೆಯನ್ನು ಮಾಡಿಲ್ಲ.  ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಯಾವುದೇ ಕಾನೂನು ರೂಪುಗೊಳ್ಳ್ಳುವ ಸಂದರ್ಭ ಚರ್ಚೆಗಳು ನಡೆಯಬೇಕು.   ಆದರೆ, ಕೇಂದ್ರ ಸರ್ಕಾರ ವಿಬಿ ರಾಮ್ ಜಿ ಕಾನೂನು ತರುವ ಹಂತದಲ್ಲಿ   ಏಕಪಕ್ಷೀಯವಾಗಿ ನಡೆದುಕೊಳ್ಳುವ ಮೂಲಕ ಸರ್ವಾಧಿಕಾರಿ ಧೋರಣೆ ತಳೆದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೋಲೆ ಮಾಡಿದೆಯೆಂದು ತೀಕ್ಷ÷್ಣವಾಗಿ ನುಡಿದರು.
ಶೋಷಿತ ಸಮೂಹದ, ಬಡವರ್ಗದ ಉದ್ಯೋಗ ಖಾತ್ರಿಯನ್ನು ನೂತನ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕಸಿಯುವ ಕೇಂದ್ರ‍್ರ ಸರ್ಕಾರದ ಕೆಲಸವನ್ನು ಕ್ಷಮಿಸಲು ಸಾಧ್ಯವಿಲ್ಲ. ಬಿಜೆಪಿಯ ಹಿರಿಯ ಮುಖಂಡ ಅಡ್ವಾಣಿ ಅವರೆ ಈ ಹಿಂದೆ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ದೇಶದ ಬಡವರ್ಗದ ಜನರ ಸಂಜೀವಿನಿ ಎಂದು ಬಣ್ಣಿಸಿದ್ದರೆಂದು ತಿಳಿಸಿದರು. ಪ್ರಸ್ತುತ ಜಾರಿಗೆ ತಂದಿರುವ ವಿಬಿ ರಾಮ್ ಜಿ ಯೋಜನೆಯಡಿ ಶೇ.40 ರಷ್ಟು ಪಾಲನ್ನು ರಾಜ್ಯ ಸರ್ಕಾರ ನೀಡಬೇಕು. ಇದು ರಾಜ್ಯ ಸರ್ಕಾರಗಳ ಮೇಲೆ ಕೇಂದ್ರ ಹೊರಿಸುತ್ತಿರುವ ದೊಡ್ಡ ಹೊರೆಯಾಗಿದೆಯೆಂದು ತಿಳಿಸಿದ ಅವರು, ರಾಜ್ಯದ ಪಾಲು ಹಣವನ್ನು ಸರ್ಕಾರ ಮೊದಲೆ ಕೇಂದ್ರ‍್ರಕ್ಕೆ ಕೊಡಬೇಕಾಗಿದೆ. ಇದು ಸಾಧ್ಯವಾಗದ ವಿಚಾರವೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಪ್ರಮುಖರಾದ ಕೆ.ಪಿ.ಚಂದ್ರಕಲಾ, ವಿರಾಜಪೇಟೆ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಸೆಪ್ಟೆಂಬರ್ 6ರಂದು ಸ್ಪರ್ಧೆ*

ಆಗಷ್ಟ್ 28, 2026

*ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ : ಸಭೆ ನಡೆಸಿದ ಕೊಡಗು ಪೊಲೀಸ್*

ಆಗಷ್ಟ್ 28, 2026

*ಕೊಡಗಿನ ಸಮಸ್ಯೆಗಳಿಗೆ ಸಮಗ್ರ ಪರಿಹಾರಕ್ಕೆ ಯದುವೀರ್ ಒಡೆಯರ್ ಆಗ್ರಹ : ಆನೆ- ಮಾನವ ಸಂಘರ್ಷ, ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆ*

ಆಗಷ್ಟ್ 28, 2026

*ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ : ಸಭೆ ನಡೆಸಿದ ಕೊಡಗು ಪೊಲೀಸ್*

ಆಗಷ್ಟ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ NEWS DESK ಆ.28 : ಮುಂಬರಲಿರುವ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ…

*ಕೊಡಗಿನ ಸಮಸ್ಯೆಗಳಿಗೆ ಸಮಗ್ರ ಪರಿಹಾರಕ್ಕೆ ಯದುವೀರ್ ಒಡೆಯರ್ ಆಗ್ರಹ : ಆನೆ- ಮಾನವ ಸಂಘರ್ಷ, ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆ*

ಆಗಷ್ಟ್ 28, 2026

*ಕಸ್ತೂರಿರಂಗನ್ ವರದಿಯ 7ನೇ ಅಧಿಸೂಚನೆ: ಕೊಡಗಿನಲ್ಲಿ ಕೇರಳ ಮಾದರಿ ಅನುಷ್ಠಾನಕ್ಕೆ ಒತ್ತಾಯ*

ಆಗಷ್ಟ್ 28, 2026

*ಕೊಡಗು ಸೌಹಾರ್ಧ ಪತ್ತಿನ ಸಹಕಾರಿ ಸಂಘಕ್ಕೆ ‘ಎ’ ವರ್ಗೀಕರಣ : ರೂ.29 ಲಕ್ಷ ನಿವ್ವಳ ಲಾಭ*

ಆಗಷ್ಟ್ 27, 2026

*ಚೆಟ್ಟಳ್ಳಿಯಲ್ಲಿ ಸಾಂಪ್ರದಾಯಿಕ ಕೈಲ್ ಪೊವ್ದ್ ಧಾರೆ ಪೂಜೆ*

ಆಗಷ್ಟ್ 27, 2026

*ರಕ್ಷಾಬಂಧನ ಆಚರಣೆ : ಸಂಸದ ಯದುವೀರ್ ಒಡೆಯರ್‌ಗೆ ಬ್ರಹ್ಮಕುಮಾರಿಸ್‌ ನಿಂದ ರಾಖಿ*

ಆಗಷ್ಟ್ 27, 2026

*ಎ.ಕೆ. ಸುಬ್ಬಯ್ಯರ ಪುಣ್ಯಸ್ಮರಣೆ: ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*

ಆಗಷ್ಟ್ 27, 2026

*ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*

ಆಗಷ್ಟ್ 27, 2026

*ಜಾನಪದ ಕಲಾಪ್ರಕಾರದ ತರಬೇತಿಗೆ ಅರ್ಜಿ ಆಹ್ವಾನ*

ಆಗಷ್ಟ್ 27, 2026

*ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ*

ಆಗಷ್ಟ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.